ಪತಿಯನ್ನ ಹೆದರಿಸಲು ಹೋಗಿ ಬೆಂಕಿ ಹಂಚಿಕೊಂಡ ಗರ್ಭಿಣಿ – ಮಗು ಸಾವು…
ಗಂಡನನ್ನ ಹೆದರಿಸಲೆಂದು ಮುಂದಾದ ಗರ್ಭಿಣಿಯೊಬ್ಬರು ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ. ಹೊಟ್ಟೆಯಲ್ಲಿದ್ದ 7 ತಿಂಗಳ ಮಗು ಸಾವನ್ನಪ್ಪಿದ್ದು, ಸುಟ್ಟ ಗಾಯಗಳೊಂದಿಗೆ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೇರಳದ ಪರಸ್ಸಾಲ ಮೂಲದ ಯೋಧ ಅಜಯ್ ಪ್ರಕಾಶ್ ಅವರ ಪತ್ನಿ ಅರುಣಿಮಾ (27) ಸುಟ್ಟಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯೋಧನಾಗಿರುವ ಪತಿ ಅಜಯ್ ಪ್ರಕಾಶ್ ರಜೆ ಮುಗಿಸಿ ವಾಪಸ್ಸಾಗಿದ್ದಾಗ ಈ ಘಟನೆ ನಡೆದಿದೆ. ಕೆಲಸದಲ್ಲಿ ಅಜಯ್ ಪ್ರಕಾಶ್ ಜೊತೆಗಿದ್ದ ಅರುಣಿಮಾ ರಜೆಗೆಂದು ಪಾರಸ್ಸಾಲೆಗೆ ಬಂದಿದ್ದರು. ಇಬ್ಬರ ನಡುವೆ ಯಾವುದೇ ಕೌಟುಂಬಿಕ ಸಮಸ್ಯೆ ಇಲ್ಲ ಎಂಬುದು ಗೊತ್ತಾಗಿದೆ.
ಅರುಣಿಮಾ ಅವರಿಗೆ ಶೇಕಡ ಅರವತ್ತು ಸುಟ್ಟ ಗಾಯಗಳಾಗಿವೆ ಎಂದು ವೈದ್ಯರು ಹೇಳಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರುಣಿಮಾ ಗರ್ಭದಲ್ಲಿದ್ದ ಮಗು ಸಾವನ್ನಪ್ಪಿದೆ ಆದರೆ ಹೊರತೆಗೆಯಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಆಸ್ಪತ್ರೆಯವರು ನೀಡಿದ ಮಾಹಿತಿ ಮೇರೆಗೆ ಪಾರಸ್ಸಾಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮನೆಯನ್ನ ಸೀಲ್ ಮಾಡಿದ್ದಾರೆ. ಗಂಡನನ್ನು ಹೆದರಿಸಲು ಹೀಗೆ ಮಾಡಿದ್ದೇನೆ ಎಂದು ಮಹಿಳೆ ಹೇಳಿಕೆ ನೀಡಿದ್ದಾಳೆ ಎಂದು ತಿಳಿದುಬಂದಿದೆ.
Kerala: Pregnant woman who shares fire after going to scare her husband, child dies…








