BC Nagesh : ಫೆಬ್ರುವರಿಯಲ್ಲಿ 2,500 ಪ್ರೌಢಶಾಲಾ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ
ಫೆಬ್ರುವರಿಯಲ್ಲಿ ಶಿಕ್ಷಕರ ನೇಮಕಕ್ಕೆ ಕ್ರಮ
ಸಚಿವ ಬಿ.ಸಿ.ನಾಗೇಶ್ ಮಾಹಿತಿ
ಕಾಯ್ದೆ ಅನ್ವಯ ಶಿಕ್ಷಕರ ನೇಮಕಕ್ಕೆ ಆದೇಶ
250 ಮಂದಿ ದೈಹಿಕ ಶಿಕ್ಷಕರ ನೇಮಕಾತಿ
ಬೆಂಗಳೂರು : ರಾಜ್ಯದಲ್ಲಿ 2500 ಪ್ರೌಢಶಾಲಾ ಶಿಕ್ಷಕರ ನೇಮಕಕ್ಕೆ ನಿರ್ಧರಿಸಿದ್ದು, ಫೆಬ್ರುವರಿಯಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು,ಹೊಸ ಕಾಯ್ದೆ ಅನ್ವಯ ಪರಿಶಿಷ್ಟ ಜಾತಿ , ಪಂಗಡಕ್ಕೆ ನಿಗದಿಪಡಿಸಿರುವ ಮೀಸಲು ಆಧರಿಸಿ ಶಿಕ್ಷಕರ ನೇಮಕಾತಿ ನಡೆಯಲಿದೆ. ಇದರಲ್ಲಿ 250 ಮಂದಿ ದೈಹಿಕ ಶಿಕ್ಷಕರ ನೇಮಕ ನಡೆಯಲಿದೆ.
ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ ಇನ್ನೂ ಜಾರಿಯಾಗಿಲ್ಲ. ರಾಜ್ಯದ 300ರಿಂದ 400 ಆಯ್ದ ಶಾಲೆಗಳಲ್ಲಿ ಜನವರಿ 26ರಿಂದ ಜಾರಿಗೊಳಿಸಲು ಯೋಜಿಸಿದ್ದೇವೆ.
ಅದಕ್ಕೆ ಅಗತ್ಯವಿರುವ ಪಠ್ಯಕ್ರಮ ಕೂಡ ರೂಪುಗೊಂಡಿದೆ. ಎನ್ ಇಪಿ ಪಠ್ಯ ಆಧಾರಿತ ಅಲ್ಲ. ಚಟುವಟಿಕೆ ಆಧಾರಿತ ಶಿಕ್ಷಣ.
ಅಲ್ಲಿ ಬಹಳ ಪುಸ್ತಕಗಳು ಇರುತ್ತವೆ ಎಂದೇನೂ ನನಗೆ ಅನ್ನಿಸಿಲ್ಲ. ಪಠ್ಯಕ್ರಮಕ್ಕೆ ತಕ್ಕಂತೆ ಶಿಕ್ಷಕರಿಗೆ ತರಬೇತಿ ನೀಡಿ ಅವರನ್ನು ಸಜ್ಜುಗೊಳಿಸಲಾಗುವುದು ಎಂದು ಹೇಳಿದರು.







