Vande Bharat Express : ಸಿಕಂದರಾಬಾದ್ ಮತ್ತು ವಿಶಾಖಪಟ್ಟಣ ಎಕ್ಸ್ ಪ್ರೆಸ್ ಗೆ ಮೋದಿ ಚಾಲನೆ….
ಸಿಕಂದರಾಬಾದ್ ಮತ್ತು ವಿಶಾಖಪಟ್ಟಣ ನಡುವೆ ಸಂಚರಿಸುವ 8ನೇ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.
ಇದು ಭಾರತದ 8ನೇ ವಂದೇ ಭಾರತ್ ಎಕ್ಸ್ ಪ್ರೆಸ್ ಹಾಗೂ ತೆಲುಗು ಭಾಷಿಗ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರಪ್ರದೇಶಗಳ ನಡುವೆ 700 ಕಿಲೋಮೀಟರ್ ಅಂತರವನ್ನು 8 ಗಂಟೆಗಳಲ್ಲಿ ಸಂಚರಿಸಲಿದೆ. ಆಂಧ್ರ ಪ್ರದೇಶದ ವಿಶಾಖ ಪಟ್ಟಣ, ರಾಜಮಂಡ್ರಿ, ವಿಜಯವಾಡ ಸ್ಟೇಷನ್ ಗಳು ಹಾಗೂ ತೆಲಂಗಾಣದ ಕಮ್ಮಮ್, ವಾರಂಗಲ್, ಮತ್ತು ಸಿಕಂದರಾಬಾದ್ ಸ್ಟೇಷನ್ ಗಳಲ್ಲಿ ನಿಲುಗಡೆ ಹೊಂದಿದೆ. ಪ್ರಥಮ ವಂದೇ ಭಾರತ್ ರೈಲಿಗೆ 2019ರ ಫೆಬ್ರವರಿಯಲ್ಲಿ ಚಾಲನೆ ನೀಡಲಾಗಿತ್ತು. ಈ ರೈಲು ದೆಹಲಿ ಮತ್ತು ವಾರಾಣಸಿ ನಡುವೆ ಸಂಚರಿಸುತ್ತಿದೆ.
ದೇಶೀಯ ನಿರ್ಮಿತ ವಂದೇ ಭಾರತ್ ರೈಲು ವೇಗ, ದಕ್ಷತೆ ಹಾಗೂ ಅನುಕೂಲಕರವಾಗಿದೆ. ಕೇಂದ್ರ ಸರ್ಕಾರ ಮೇಕ್ ಇನ್ ಇಂಡಿಯಾ ಅಭಿಯಾನದಡಿ ಮುಂಬರುವ ದಿನಗಳಲ್ಲಿ 400 ವಂದೇ ಭಾರತ್ ರೈಲುಗಳ ಸಂಚಾರ ಆರಂಭಿಸಲು ಉದ್ದೇಶಿಸಿದೆ.
PM Modi virtually flags off Vande Bharat Express between Secunderabad-Visakhapatnam








