ADVERTISEMENT
Monday, June 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಐಪಿಎಲ್ 2023

IPL 2023: ಸನ್ ರೈಸರ್ಸ್ ಸವಾಲು ಗೆಲ್ಲುವ ವಿಶ್ವಾಸದಲ್ಲಿ ಆರ್ ಸಿಬಿ!

ಆರ್ ಸಿಬಿ ಗೆದ್ದರೆ ಪ್ಲೇ ಆಫ್ ಹಾದಿ ಜೀವಂತ

Author2 by Author2
May 18, 2023
in ಐಪಿಎಲ್ 2023, Sports
Share on FacebookShare on TwitterShare on WhatsappShare on Telegram

ಪ್ಲೇ ಆಫ್ ಗೇರಲು ಮುಂದಿನ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಸನ್ರೈಸರ್ಸ್ ಈಗಾಗಲೆ ಮುಂದಿನ ಹಂತಕ್ಕೆ ತೇರ್ಗಡೆಯಾಗುವ ಅವಕಾಶವನ್ನು ಕಳಕೊಂಡಿದೆಯಾದರೂ ಆರ್ಸಿಬಿಯ ಅವಕಾಶವನ್ನು ಮೊಟಕುಗೊಳಿಸುವ ಅವಕಾಶವನ್ನಂತೂ ಪಡೆದಿದೆ.

ಆರ್ಸಿಬಿ ಹಲವಾರು ಕೊರತೆಗಳೊಂದಿಗೇ ಆಡುತ್ತಿದೆ. ಮುಖ್ಯವಾಗಿ ಆರ್ಸಿಬಿಯ ಬ್ಯಾಟಿಂಗ್ ವಿಭಾಗವು ಹಲವಾರು ಲೋಪಗಳನ್ನು ಹೊಂದಿದೆ. ವಿರಾಟ್ ಕೊಹ್ಲಿ ಫಾಫ್ ಡುಪ್ಲೆಸಿಸ್ ಮತ್ತು ಮ್ಯಾಕ್ಸ್ವೆಲ್ ಚೆನ್ನಾಗಿ ಆಡಿದರೆ ಆರ್ಸಿಬಿ ಗೆಲ್ಲುತ್ತದೆ, ಇವರು ವಿಫಲರಾದರೆ ತಂಡವು ಸೋಲು ಕಾಣುತ್ತದೆ ಎಂಬಂತಹ ಪರಿಸ್ಥಿತಿಯಿದೆ. ಮಧ್ಯಮ ಸರದಿ ಮತ್ತು ಕೆಳಸರದಿಯಲ್ಲಿ ಯಾವನೇ ಆಟಗಾರ ಗಮನಾರ್ಹ ನಿರ್ವಹಣೆಯನ್ನು ಈವರೆಗೆ ನೀಡಿಲ್ಲ. ಬೇರೆ ತಂಡಗಳಲ್ಲಿ ಇನ್ನಿಂಗ್ಸಿನ ಕೊನೆಯ ಹಂತದಲ್ಲಿ ಕೆಲವು ಆಟಗಾರರು ರನ್ ಗತಿ ಹೆಚ್ಚಿಸುವ ಆಟ ಪ್ರದರ್ಶಿಸುವುದಿದೆ. ಆದರೆ ಆರ್ಸಿಬಿಯಲ್ಲಿ ಅಂತಹ ಪ್ರಸಂಗ ಕಾಣುತ್ತಿಲ್ಲ. ಕೆಳಸರದಿಯಲ್ಲಿ ದೊಡ್ಡ ಹೊಡೆತಗಳ ಆಟಗಾರರಿಗೆ ಕೊರತೆಯಿದೆ ಎಂಬಂತೆ ಕಂಡುಬರುತ್ತದೆ.
ಅದೃಷ್ಟವಶಾತ್ ಕೊಹ್ಲಿ, ಮ್ಯಾಕ್ಸ್ವೆಲ್ ಮತ್ತು ಡುಪ್ಲೆಸಿ ಉತ್ತಮ ಫಾರ್ಮ್ನಲ್ಲಿ ಇರುವುದು ತಂಡಕ್ಕೆ ನಿರಾಳತೆ ತರುವ ಅಂಶ. ಇಂದಿನ ಪಂದ್ಯದಲ್ಲೂ ಅವರಿಂದ ಉತ್ತಮ ನಿರ್ವಹಣೆಯನ್ನು ನಿರೀಕ್ಷಿಸಲಾಗುತ್ತಿದೆ. ಡುಪ್ಲೆಸಿ ಈಗಾಗಲೆ 12 ಪಂದ್ಯಗಳಿಂದ 631 ರನ್ ಗಳಿಸಿ ಆರೆಂಜ್ ಕ್ಯಾಪ್ ಹೊಂದಿದ್ದಾರೆ. ಮ್ಯಾಕ್ಸ್ವೆಲ್ ಕೂಡಾ 5 ಅರ್ಧ ಶತಕಗಳನ್ನು ದಾಖಲಿಸಿದ್ದಾರೆ.

Related posts

Alphonso Davies canad footballer

ಬಂದೂಕಿನ ಸದ್ದುಗಳ ನಡುವೆ ಹುಟ್ಟಿದ್ದ ಮಗು.., ಇಂದು ಫುಟ್‍ಬಾಲ್ ಜಗತ್ತಿನ ಧ್ರುವ ನಕ್ಷತ್ರ..!

June 22, 2026
Endrick Felipe emotional letter to brother Noah

ಒಣ ಬ್ರೆಡ್ ತಿಂದಿದ್ದ ಅಮ್ಮ.. ಕಸ ಗುಡಿಸಿದ್ದ ಅಪ್ಪ.. ಬಡತನದ ಬೆಂಕಿಯ ಜ್ವಾಲೆಯಾದ ಬ್ರೆಜಿಲ್ ತಾರೆ.. ಕಣ್ಣೀರಿನ ಹಾದಿ ಮರೆಯದ ಅಣ್ಣ – ತಮ್ಮನಿಗೆ ಬರೆದ ಭಾವನಾತ್ಮಕ ಪತ್ರ..!

June 21, 2026

ಕೊಹ್ಲಿ ಆರ್ಸಿಬಿ ಪರ ರನ್ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು 438 ರನ್ ಗಳಿಸಿದ್ದಾರೆ. ಆದರೆ ಕಳೆದೆರಡು ಪಂದ್ಯಗಳಲ್ಲಿ ಕೊಹ್ಲಿ ಉತ್ತಮ ರನ್ ಗಳಿಸಲು ವಿಫಲರಾಗಿದ್ದಾರೆ. ಅದನ್ನೀಗ ಅವರು ಇಂದಿನ ಪಂದ್ಯದಲ್ಲಿ ಸರಿಪಡಿಸಿಕೊಳ್ಳಬೇಕಾಗಿದೆ. ಇನ್ನುಳಿದ ಎರಡು ಪಂದ್ಯಗಳಲ್ಲಾದರೂ ಆರ್ಸಿಬಿಯ ಮಧ್ಯಮ ಮತ್ತು ಕೆಳಸರದಿಯ ಬ್ಯಾಟರ್ಗಳು ತಮ್ಮ ನಿರ್ವಹಣೆಯನ್ನು ಸುಧಾರಿಸಿಕೊಳ್ಳಲೇಬೇಕಾದ ಅನಿವಾರ್ಯತೆಯಿದೆ.

ಆರ್ಸಿಬಿಯ ಗೆಲುವಿನಲ್ಲಿ ಬೌಲರುಗಳ ಪಾತ್ರ ದೊಡ್ಡದು. ರಾಜಸ್ಥಾನವನ್ನು 59 ರನ್ಗಳಿಗೆ ಆಲೌಟ್ ಮಾಡಿ ದೊಡ್ಡ ಅಂತರದಲ್ಲಿ ಸೋಲಿಸಲು ನೆರವಾಗುವ ಮೂಲಕ ತಂಡದ ರನ್ರೇಟ್ ಹೆಚ್ಚಿಸುವಲ್ಲೂ ಅವರು ನೆರವಾಗಿದ್ದಾರೆ. ಸಿರಾಜ್, ಪರ್ನೆಲ್ ಮತ್ತು ಬ್ರೇಸ್ವೆಲ್ ಇಂದಿನ ಪಂದ್ಯದಲ್ಲೂ ಅದೇ ಬಗೆಯ ನಿರ್ವಹಣೆ ನೀಡುವ ಆಶಾವಾದ ತಂಡದ್ದಾಗಿದೆ.

ಈಗಾಗಲೆ ಪ್ಲೇ ಆಫ್ ಅವಕಾಶವನ್ನು ಕಳಕೊಂಡಿರುವ ಸನ್ರೈಸರ್ಸ್ ತನ್ನ ಗೌರವ ಕಾಪಾಡಿಕೊಳ್ಳುವ ಯತ್ನವಾಗಿ ಇಂದಿನ ಪಂದ್ಯ ಜಯಿಸಲು ಯತ್ನಿಸುವುದು ಖಚಿತ. ಉತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಬಲವನ್ನು ಹೊಂದಿದ್ದೂ ನಿರಾಶಾಜನಕ ನಿರ್ವಹಣೆ ನೀಡಿರುವ ತಂಡವಿದು. ಆದರೆ ಕೊನೆಯ ಹಂತದಲ್ಲಿ ತನ್ನ ಸಾಮರ್ಥ್ಯ ಪ್ರದರ್ಶನಕ್ಕೆ ಸರ್ವಪ್ರಯತ್ನ ಮಾಡುವ ಸಾಧ್ಯತೆಗಳಿವೆ. ಹಾಗಾಗಿ ಈ ಪಂದ್ಯವನ್ನು ಆರ್ಸಿಬಿ ನಿರ್ಲಕ್ಷಿಸುವ ಹಾಗಿಲ್ಲ ಎಂಬುದು ಖಚಿತ.

Tags: IPL 2023: RCB confident of winning Sunrisers challenge!
ShareTweetSendShare
Join us on:

Related Posts

Alphonso Davies canad footballer

ಬಂದೂಕಿನ ಸದ್ದುಗಳ ನಡುವೆ ಹುಟ್ಟಿದ್ದ ಮಗು.., ಇಂದು ಫುಟ್‍ಬಾಲ್ ಜಗತ್ತಿನ ಧ್ರುವ ನಕ್ಷತ್ರ..!

by admin
June 22, 2026
0

ಇದು ಖಂಡಿತವಾಗಿಯೂ ಕಾಲ್ಪನಿಕ ಕಥೆಯಲ್ಲ. ನಮ್ಮ ಕಣ್ಣೆದುರೇ ನೋಡುತ್ತಿರುವ, ನಡೆದ, ನಡೆಯುತ್ತಿರುವ ವಾಸ್ತವ ಚಿತ್ರಣಗಳ ಅಕ್ಷರ ರೂಪವಷ್ಟೇ. ಬಂದೂಕಿನ ಸದ್ದುಗಳ ನಡುವೆ, ರಕ್ತದ ಮಡುವಿನಲ್ಲೇ ಹುಟ್ಟಿದ್ದ ಮಗು,...

Endrick Felipe emotional letter to brother Noah

ಒಣ ಬ್ರೆಡ್ ತಿಂದಿದ್ದ ಅಮ್ಮ.. ಕಸ ಗುಡಿಸಿದ್ದ ಅಪ್ಪ.. ಬಡತನದ ಬೆಂಕಿಯ ಜ್ವಾಲೆಯಾದ ಬ್ರೆಜಿಲ್ ತಾರೆ.. ಕಣ್ಣೀರಿನ ಹಾದಿ ಮರೆಯದ ಅಣ್ಣ – ತಮ್ಮನಿಗೆ ಬರೆದ ಭಾವನಾತ್ಮಕ ಪತ್ರ..!

by admin
June 21, 2026
0

Endrick Felipe emotional letter to brother Noah ಈತನಿಗೆ ಇನ್ನೂ 20 ವರ್ಷ ಭರ್ತಿಯಾಗಿಲ್ಲ. ಆಗಲೇ ಚೊಚ್ಚಲ ಫಿಫಾ ವಿಶ್ವಕಪ್ ಆಡಿದ ಬ್ರೇಜಿಲ್‍ನ ಹದಿಹರೆಯದ ಯುವಕ....

Victor Osimhen

ಕಸದ ರಾಶಿಯ ನಡುವೆ ಬೆಳೆದ ಹುಡುಗ ಇಂದು ಫುಟ್‍ಬಾಲ್ ಜಗತ್ತಿನ ಧ್ರುವತಾರೆ.. ಆದ್ರೂ ಫಿಫಾ ವಿಶ್ವಕಪ್ ಆಡುತ್ತಿಲ್ಲ ಯಾಕೆ..? ಇದೊಂದು ಸ್ಪೂರ್ತಿದಾಯಕ ಸ್ಟೋರಿ..!

by admin
June 20, 2026
0

ಅಂದು ತಿನ್ನಲು ಆಹಾರವಿಲ್ಲದೆ ಹಸಿವಿನಿಂದ ಒದ್ದಾಡಿಕೊಂಡಿದ್ದ. ವಾಸ ಮಾಡಲು ಸೂರಿಲ್ಲದೆ ಕತ್ತಲೆಯ ಕೋಣೆಯಲ್ಲಿ ಕಣ್ಣೀರು ಹಾಕುತ್ತಿದ್ದ. ಅಮ್ಮನ ನೆನಪು ಕಾಡಿದಾಗ ಜೋರಾಗಿ ಆಳುತ್ತಿದ್ದ. ಏಳು ಮಂದಿ ಮಕ್ಕಳನ್ನು...

Basketball courts became makeshift pitches in mexico jail

ಫುಟ್‍ಬಾಲ್ ಸಾಮ್ರಾಜ್ಯದಲ್ಲಿ ಚೆಂಡು ಬ್ಯಾಟ್‍ನ ಸದ್ದು.. ಮೆಕ್ಸಿಕೊ ಜೈಲಿನ ಕೈದಿಗಳ ಮನಪರಿವರ್ತನೆಗೆ ಜಂಟಲ್‍ಮ್ಯಾನ್ ಆಟವೇ ಅಸ್ತ್ರ..!

by admin
June 19, 2026
0

ಭಾರತದಲ್ಲಿ ಕ್ರಿಕೆಟ್ ಹೇಗೆ ಧರ್ಮವಾಗಿದೆಯೋ ಹಾಗೇ ಆ ರಾಷ್ಟ್ರದಲ್ಲೂ ಫುಟ್‍ಬಾಲ್ ಆಟ ಧರ್ಮವಾಗಿದೆ. ಭಾರತದ ಗಲ್ಲಿ ಗಲ್ಲಿಗಳಲ್ಲಿ ಕ್ರಿಕೆಟ್ ಆಡುವ ರೀತಿಯಲ್ಲೇ ಆ ದೇಶದ ಗಲ್ಲಿ ಗಲ್ಲಿಗಳಲ್ಲೂ...

ಫಿಫಾ ವಿಶ್ವಕಪ್‍ನಲ್ಲಿ ಆಡದಿದ್ರೂ ಜಗತ್ತನ್ನೇ ಆಡಿಸುತ್ತಿದೆ ಪಾಕಿಸ್ತಾನ..! ಏನಿದು ಸಿಯಾಲ್‍ಕೋಟ್ ರಹಸ್ಯ..?

ಫಿಫಾ ವಿಶ್ವಕಪ್‍ನಲ್ಲಿ ಆಡದಿದ್ರೂ ಜಗತ್ತನ್ನೇ ಆಡಿಸುತ್ತಿದೆ ಪಾಕಿಸ್ತಾನ..! ಏನಿದು ಸಿಯಾಲ್‍ಕೋಟ್ ರಹಸ್ಯ..?

by admin
June 19, 2026
0

ಇದೆಂಥಾ ವಿಪರ್ಯಾಸ ನೋಡಿ...! ಭಾರತದಂತೆ ಈ ದೇಶದಲ್ಲೂ ಫುಟ್‍ಬಾಲ್ ಕ್ರೇಝ್ ಇದ್ರೂ ಅಪ್ರತಿಮ ಅಟಗಾರರನ್ನು ತಯಾರು ಮಾಡಲು ಆಗ್ತಿಲ್ಲ. ಹೀಗಾಗಿ ಅವರು ಕೂಡ ಫಿಫಾ ವಿಶ್ವಕಪ್‍ನಲ್ಲಿ ಅರ್ಹತೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram