500 ರೂ. ನೋಟುಗಳ ಕಂತೆ ಕಂತೆಯ ಮುಂದೆ ಪತ್ನಿ, ಮಕ್ಕಳು ತೆಗೆದುಕೊಂಡ ಸೆಲ್ಫಿಯನ್ನು ಪೊಲೀಸ್ ಅಧಿಕಾರಿಯೊಬ್ಬರು ತೆಗೆದುಕೊಂಡಿದು, ಸದ್ಯ ಫಜೀತಿಗೆ ಒಳಗಾಗಿದ್ದಾರೆ.
ಉತ್ತರ ಪ್ರದೇಶದ ಉನ್ನಾವೊದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಕುಟುಂಬವು ಕಂತೆ ಕಂತೆ ನೋಟುಗಳೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದು, ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ಪತ್ನಿ ಮತ್ತು ಮಕ್ಕಳು ತೆಗೆದ ಸೆಲ್ಫಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 500 ರೂಪಾಯಿ ನೋಟುಗಳ ಬಂಡಲ್ಗಳೊಂದಿಗೆ ಪೋಸ್ ನೀಡಿದ್ದಾರೆ. ಸದ್ಯ ಇದರ ವಿರುದ್ಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಹರಿದಾಡುತ್ತಿರುವ ಛಾಯಾಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪತ್ನಿ ಮತ್ತು ಇಬ್ಬರು ಮಕ್ಕಳು ಹಾಸಿಗೆಯ ಮೇಲೆ 14 ಲಕ್ಷ ರೂ. ನೋಟುಗಳನ್ನು ಹರಡಿಕೊಂಡು ಕುಳಿತಿರುವುದನ್ನು ಕಾಣಬಹುದು. ಠಾಣಾ ಉಸ್ತುವಾರಿ ರಮೇಶ್ ಚಂದ್ರ ಸಹಾನಿ ಅವರನ್ನು ಪೊಲೀಸ್ ಲೈನ್ಗೆ ವರ್ಗಾಯಿಸಲಾಗಿದೆ. ಆದರೆ, ಪೊಲೀಸ್ ಅಧಿಕಾರಿ ಇದನ್ನು ಸಮರ್ಥಿಸಿಕೊಂಡಿದ್ದರು, ಕುಟುಂಬದ ಆಸ್ತಿಯನ್ನು ಮಾರಾಟ ಮಾಡಿದಾಗ ಬಂದ ಹಣದ ಚಿತ್ರ ಎಂದು ಹೇಳಿದ್ದಾರೆ. ಸದ್ಯ ಇದರ ಸತ್ಯಾಸತ್ಯಗೆ ತನಿಖೆ ನಡೆಯುತ್ತಿದೆ.








