ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಏಳು ಅಂತಸ್ತಿನ ಕಟ್ಟಡದಿಂದ ಬಿದ್ದ 20 ವರ್ಷದ ಯುವತಿ ಪಾವಾಡ ಎನ್ನುವಂತೆ ಬದುಕುಳಿದಿದ್ದಾಳೆ.
ಸದ್ಯ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಟೊಮಿನಿ ರೀಡ್ ಮೆಲ್ಬೋರ್ನ್ನ ಆಲ್ಫ್ರೆಡ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಯುವತಿಗೆ ಹಲವು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. ಆಕೆ ಬದುಕುಳಿದಿರುವುದೇ ಪವಾಡ ಎಂದು ವೈದ್ಯರು ಹೇಳಿದ್ದಾರೆ.
ರೀಡ್ ಅವರ ತಂದೆ ಬ್ರಾಡ್ ಅವರು ಅಪಘಾತದ ಸುದ್ದಿಯನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ಆಕೆ ಹೋರಾಟಗಾರ್ತಿ ಆಕೆಯಲ್ಲಿರುವ ದೃಢ ಮನಸ್ಸು ಛಲವೇ ಆಕೆಯನ್ನು ಮೊದಲಿನಂತೆ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ.








