ADVERTISEMENT
Saturday, July 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಎಸ್ ಸ್ಪೆಷಲ್

ಒಂದು ಲೇಖನ, ಬಾಲಗಂಗಾಧರ ತಿಲಕರ ಪ್ರೇರಣೆಯಿಂದ ಶುರುವಾಯ್ತು ಗೋದ್ರೆಜ್​ ಕಂಪನಿ !!

admin by admin
August 10, 2023
in ಎಸ್ ಸ್ಪೆಷಲ್, Newsbeat, Saaksha Special
Share on FacebookShare on TwitterShare on WhatsappShare on Telegram

ಒಂದು ಲೇಖನ, ಬಾಲಗಂಗಾಧರ ತಿಲಕರ ಪ್ರೇರಣೆಯಿಂದ ಶುರುವಾಯ್ತು ಗೋದ್ರೆಜ್​ ಕಂಪನಿ !!

ನಿಮಗೆಲ್ಲ 2014ರ ಸೆಪ್ಟೆಂಬರ್​ 24ನೇ ತಾರೀಕು ನೆನಪಿರಬೇಕು. ಅಂದು ಭಾರತ ಜಗತ್ತಿನ ಯಾವ ದೇಶವೂ ಮಾಡದ ಅತಿದೊಡ್ಡ ಸಾಧನೆ ಮಾಡಿತು. ಅದು ಮಂಗಳಯಾನ. ಭಾರತ ಮೊದಲ ಪ್ರಯತ್ನದಲ್ಲೇ ಮಂಗಳಯಾನ ಯೋಜನೆ ಯಶಸ್ವಿಯಾಗುವ ಮೂಲಕ ಇತಿಹಾಸ ಸೃಷ್ಟಿಸಿತು. ಅರೆ ಈಗ ಯಾಕೆ ಈ ಮಂಗಳಯಾನ ವಿಷಯ ಅಂತಿರಾ ಕಾರಣ ಇದೆ.
ಈ ಮಂಗಳಯಾನ ಯಶಸ್ಸಿನ ಹಿಂದೆ ಸ್ವದೇಶಿ ಕಂಪನಿಯ ಕಾಣದ ಕೈ ಇದೆ. ಅದು ಗೋದ್ರೆಜ್​…

Related posts

astrology

Astro -ಈ ಆಷಾಢ ಶುಕ್ಲ ಮಾಸದಲ್ಲಿ ದೇವಿಯ ದೇವಸ್ಥಾನದಲ್ಲಿ ಈ ಒಂದು ವಸ್ತುವನ್ನು ದಾನ ಮಾಡಿ..! ಎಷ್ಟೇ ದೊಡ್ಡ ಸಾಲವು ಕರಗುತ್ತದೆ..!.!!

July 18, 2026
santhosh menon new

ksca- ಬಿಸಿಸಿಐ ವಿರುದ್ಧ ಮೆನನ್ ಕಾನೂನು ಸಮರ – “ಸಂತೋಷ”ದ ಅಧಿಕಾರಕ್ಕಾಗಿ ಕರ್ನಾಟಕ ಕ್ರಿಕೆಟ್ ಬಲಿಯಾಗಬೇಕಾ..?

July 18, 2026

ಗೋದ್ರೆಜ್​ ಹೆಸರು ನಿಮಗೆ ಚಿರಪರಿಚಿತವೆ. ಪ್ರತಿದಿನ ನೀವು ಈ ಹೆಸರಿನ ವಸ್ತುವನ್ನು ಬಳಸದೆ ಇರಲು ಸಾಧ್ಯವಿಲ್ಲ. ಒಂದಲ್ಲಾ ಒಂದು ಸಮಯದಲ್ಲಿ ಬಳಸೇ ಬಳಸಿರುತ್ತಿರಿ. ಇದೇನು ಮಂಗಳಯಾನ, ಗೋದ್ರೆಜ್​ ಕಂಪನಿಗು ಏನು ಸಂಬಂಧ ಅಂತಿರಾ? ಇಲ್ಲಿದೆ ಇಂಟ್ರಸ್ಟಿಂಗ್​ ಸಂಗತಿ.

ಭಾರತದ ಯಶಸ್ವಿ ಮಂಗಳಯಾನದ ಇಂಜಿನ್​, ಲಾಂಚ್​​ವೆಹಿಕಲ್​ ಮತ್ತು ಆರ್ಬಿಟರ್​​ ಅನ್ನು ಇಸ್ರೋದೊಂದಿಗೆ ಜಂಟಿಯಾಗಿ ಗೋದ್ರೆಜ್​ ಏರೋಸ್ಪೇಸ್​ ಕಂಪನಿ ತಯಾರಿಸಿದ್ದು ಹಮ್ಮೆಯ ಸಂಗತಿ. ಹಾಗಿದ್ದರೆ ಈ ಕಂಪನಿಯ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋದು ಬೇಡವೇ? ಬಿನ್ನಿ ನಮ್ಮ ದೇಶದಲ್ಲೇ ಹುಟ್ಟಿದ ಗೋದ್ರೆಜ್​ ಕಂಪನಿ ಬಗ್ಗೆ ಕೆಲವು ಇಂಟ್ರಸ್ಟಿಂಗ್​ ಸಂಗತಿಗಳನ್ನು ತಿಳಿದುಕೊಳ್ಳೋಣ.

18ನೇ ಶತಮಾನದಲ್ಲಿ ಮಹಾರಾಷ್ಟ್ರದ ಪ್ರಸಿದ್ಧ ವಕೀಲರಾದ ಅರ್ದೇಶಿರ್​ ಗೋದ್ರೆಜ್ (Ardeshir Godrej)​ ಹೆಸರು ಕೇಳಿರುವವರಲ್ಲಿ ವಿರಾಳತಿ ವಿರಳ ಜನ. ಆದರೆ ಕೊನೆಯ ಗೋದ್ರೆಜ್​ ಎಂಬ ಶಬ್ದವನ್ನು ಎಲ್ಲರು ಕೇಳಿರುತ್ತಾರೆ. ಬೀಗ ಮತ್ತು ಬೀಗದ​ ಕೈಗಳಿಗೆ ಬ್ರ್ಯಾಂಡ್​ ಆಗಿರುವ ಗೋದ್ರೆಜ್​ ಕಂಪನಿಯ ಸ್ಥಾಪಕರು ಅರ್ದೇಶಿರ್​ ಗೋದ್ರೆಜ್. ಇವರ ವೃತ್ತಿ ವಕೀಲಕಿ. ಮುಂದೆ ಇವರು ವಕೀಲಕಿ ವೃತ್ತಿ ತೊರೆಯುತ್ತಾರೆ. ನಂತರ ಸ್ವಂತ ಉದ್ಯೋಗ ಮಾಡಬೇಕು ಎಂದುಕೊಂಡರು. ಈ ಸಂಬಂಧ ಪರಿಚಿತರಿಂದ 300 ರೂ. ಸಾಲ ಪಡೆದು ಶಸ್ತ್ರ ಚಿಕಿತ್ಸೆಗೆ ಬೇಕಾದ ವಸ್ತುಗಳನ್ನು ತಯಾರು ಮಾಡಿದರು. ಆದರೆ ಇದರಲ್ಲಿ ಅವರು ಲಾಭ ಕಾಣಲಿಲ್ಲ. ನಂತರ ಒಂದು ಔಷಧ ಅಂಗಡಿಯಲ್ಲಿ ಸಹಾಯಕರಾಗಿ ಕೆಲಸ ಮಾಡಿದರೂ ಮನಸ್ಸಿಗೆ ತೃಪ್ತಿಕೊಡಲಿಲ್ಲ.

ಇವರ ಪ್ರಸಿದ್ಧ ಒಂದು ಸಾಲು ಇದೆ. ಅದು “ಸೋಲುಗಳಿಂದಲೇ ಗೆಲುವಿನ ಯಶಸ್ಸು ಕಾಣಲು ಸಾಧ್ಯ” ಎಂದು.

ಒಂದು ದಿನ ಇವರು ಒಂದು ಪ್ರತಿಕೆಯಲ್ಲಿ ಮುಂಬೈನ ಪೊಲೀಸ್​ ಕಮಿಷನರ್​ ಅವರು ಬರೆದಂತಹ ಲೇಖನ ಓದುತ್ತಾರೆ. ಆ ಲೇಖನದಲ್ಲಿ ಬೀಗ ಮತ್ತು ಬೀಗದ ಕೈ ಅವಶ್ಯಕತೆ ಬಗ್ಗೆ ತಿಳಿಸಿರುತ್ತಾರೆ. ಈ ಕುರಿತು ವಿಚಾರ ಮಾಡಿ ಬೀಗ ಮತ್ತು ಬೀಗದ ಕೈಯನ್ನು ತಯಾರಿಸಲು ಮುಂದಾಗುತ್ತಾರೆ. ಇದರ ಬಗ್ಗೆ ಆಳವಾಗಿ ಅಧ್ಯಯನ ಮಾಡಿ 1897ರಲ್ಲಿ ತಮ್ಮ 29ನೇ ವರ್ಷದಲ್ಲಿ ಬೀಗ ಮತ್ತು ಬೀಗದ ಕೈಗಳನ್ನು ತಯಾರಿಸುತ್ತಾರೆ. ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಅಧಿಕ ಲಾಭಗಳಿಸುತ್ತಾರೆ.

ಇದರಿಂದ ಉತ್ತೇಜನಗೊಂಡು ಅನೇಕ ವಿವಿಧ ಉತ್ಪನ್ನಗಳನ್ನು ತಯಾರು ಮಾಡಲು ಆರಂಭಿಸುತ್ತಾರೆ. ಒಂದು ಅಂಕಿ-ಅಂಶದ ಪ್ರಕಾರ ಜಗತ್ತಿನ 60 ಮಿಲಿಯನ್​ ಜನರು ಪ್ರತಿದಿನ ಒಂದಲ್ಲಾ ಒಂದು ಗೋದ್ರೆಜ್ ಕಂಪನಿಯ​ ವಸ್ತುವನ್ನು ಬಳಸುತ್ತಾರೆ. ಗೋದ್ರೆಜ್​ ಗ್ರೂಪ್​ ಕಂಪನಿ ದೇಶದಲ್ಲಿ 2500-3500 ಎಕರೆ ಅತ್ಯಂತ ದುಬಾರಿ ಬೆಲೆ ಬಾಳುವ ಜಾಗವನ್ನು ಹೊಂದಿದೆ.

ಭಾರತದಲ್ಲಿ ಹುಟ್ಟಿದ ಈ ಗೋದ್ರೆಜ್​ ಕಂಪನಿ ಯಾವ ಯಾವ ದೇಶದಲ್ಲಿ ತನ್ನ ಛಾಪು ಮೂಡಿಸಿದೆ. ಬಿನ್ನಿ ಜಗತ್ತನ್ನು ಒಂದು ಸುತ್ತು ಹಾಕಿಕೊಂಡು ಬರೋಣ. ಉತ್ತರ ಅಮೆರಿಕಾದಲ್ಲಿ ಅತ್ಯಂತ ಜನಪ್ರಿಯವಾಗಿರುವ ಹೇರ್​ ಆಯಿಲ್​ ಸ್ಟ್ರೆಂತ್​ ಆ್ಯಂಡ್​ ನೇಚರ್​​ ಇದನ್ನು ಈ ಕಂಪನಿಯೇ ತಯಾರಿಸುತ್ತದೆ. ಹಾಗೆ ಅಮೆರಿಕಾದ ಪ್ರಸಿದ್ಧ ಏರಲೈನ್ಸ್​ “ಬೋಯ್” ಈ​​ ವಿಮಾನಕ್ಕೆ ತಯಾರಿಕಾ ಸಮಾಗ್ರಿಗಳನ್ನು ಕೂಡಾ ಒದಗಿಸುವುದು ಗೋದ್ರೆಜ್​​.

ದಕ್ಷಿಣ ಅಮೆರಿಕದಲ್ಲಿ ಪ್ರಸಿದ್ಧಿಯಾದ ಹೇರ್​ ಆಯಿಲ್​ ಎಲಿಸಿಟ್​, ಪೆಮೆಲಾ ಗ್ರಾಂಟ್​​ ಮತ್ತು ಅರ್ಜೆಂಟಾನಾದ ಹೇರ್​ ಕಲರ್​​ ಪ್ರಾಡಕ್ಟ್​ “issue” ಹೇರ್​ ಸ್ಪೆರ್ಪೆ “ರೊಬಿ” ಮತ್ತು ಇನ್ನಿತರ ಪ್ರಾಡಕ್ಟ್​ಗಳಾದ 919, ಸನ್​​ ಸ್ಕ್ರೀನ್​ ವಿಲ್ಲೆನ್ಯೂವ್​ ಅನ್ನು ಇದೇ ಕಂಪನಿ ತಯಾರಿಸುತ್ತದೆ. ಆಫ್ರಿಕಾದಲ್ಲಿ ಹೇರ್​ ಆಯಿಲ್​ ಅನೆಕ್ಟೋ, ನೈಜೇರಿಯಾದ ಅತ್ಯಂತ ಹಳೆಯದಾದ ತುರಾ ಸೋಪ್​, ಉಮಾಂಗನ ಸೋಹಾರ ದೇಶದಲ್ಲಿ ಫರ್ನಿಚರ್​​ ಮತ್ತು ಏಷ್ಯಾದಲ್ಲೇ ಎರಡನೇ ಅತಿ ಹೆಚ್ಚು ಮಾರಾಟವಾಗುವ ಎರಡನೇ ಪ್ರಾಡಕ್ಟ್​ ಎನಿಸಿಕೊಂಡಿರುವ ಮೊಸ್ಕಿಟೊ ಲಿಕ್ವಿಡ್​​ ಅನ್ನು ಗೋದ್ರೇಜ್​ ಉತ್ಪಾದಿಸುತ್ತದೆ.

ಇಂಡೋನೇಷ್ಯಾದಲ್ಲಿ ಹಿಟ್​​, ಕ್ಯಾಪ್​ಕಾಜಾ, ಸ್ಟೆಲ್ಲಾ, ಕೆರೆರಾ ಮತ್ತು ಬೇಬಿ ಕೇರ್​ ಆದ ಮಿಟು ಪ್ರಾಡೆಕ್ಟ್​​ಗಳು ಗೋದ್ರೆಜ್​ ಕಂಪನಿಯದ್ದಾಗಿವೆ. ಇನ್ನು ಗೋದ್ರೆಜ್​ ಕಂಪನಿ ಬಾಂಗ್ಲಾದೇಶ್​ನಲ್ಲಿ ಹಸು ಸಾಕಾಣಿಕೆ, ಕೋಳಿ ಸಾಕಾಣಿಕೆಯ ಅತಿದೊಡ್ಡ ಫಾರ್ಮ್​ಹೌಸ್​ ಹೊಂದಿದೆ. ಶ್ರೀಲಂಕಾದಲ್ಲಿ ಕೂದಲಿಗೆ ಬಣ್ಣ ಹಚ್ಚಲು ಆಭಾ ಎಂಬ ಪ್ರಾಡೆಕ್ಟ್​ ಉತ್ಪಾದಿಸುತ್ತದೆ. ಹೀಗೆ ನಾನಾ ದೇಶದಲ್ಲಿ ತನ್ನ ಕೈಯನ್ನು ಚಾಚಿರುವ ಗೋದ್ರೆಜ್​ ಭಾರತದಲ್ಲಿ ಕಡಿಮೆ ಪ್ರಾಡೇಕ್ಟ್​ಗಳನ್ನೇನು ಉಪ್ಪಾದನೆ ಮಾಡುವುದಿಲ್ಲ.

ಇಲ್ಲಿಯೂ ಕೂಡ ಈ ಕಂಪನಿಯ ಪ್ರಾಡೆಕ್ಟ್​​ಗಳ ಪಟ್ಟಿ ದೊಡ್ಡದಾಗಿದೆ. ನೀವು ಪ್ರತಿದಿನ ಗೋದ್ರೆಜ್​​ ಕಂಪನಿಯ ವಸ್ತುಗಳನ್ನು ಬಳಸೇ ಬಳಸುತ್ತಿರಿ. ನಮ್ಮ ದೇಶದಲ್ಲಿ ಕೂದಲಿಗೆ ಬಣ್ಣ ಹಚ್ಚಲು ಗೋದ್ರೆಜ್​ ಎಂದು ಮೂಲ ಹೆಸರಿನ ಲಿಕ್ವಿಡ್​ ಇದೆ. Hit, ಸಿಂತೋಲ್​, ಫರ್ನಿಚರ್​, ಕಪಾಟು, ಏರ್​ ಕೂಲರ್​, ಬ್ಯಾಟರಿ, ಸಿಸಿಟಿವಿ ಕ್ಯಾಮೆರಾ ಹೀಗೆ ಅನೇಕ ವಸ್ತಗಳನ್ನು ತಯಾರಿಸುತ್ತಿದೆ.

ಹೀಗೆ 125 ವರ್ಷಗಳ ಇತಿಹಾಸ ಹೊಂದಿರುವ ಗೋದ್ರೆಜ್​ನ ಕಂಪನಿ ದಾನ-ಧರ್ಮದಲ್ಲಿ ಏನು ಕಡಿಮೆ ಇಲ್ಲ. ತನಗೆ ಬಂದ ಲಾಭದಲ್ಲಿ ಶೇ 23 ರಷ್ಟು ಹಣದಲ್ಲಿ ಚಾರಿಟೇಬಲ್​ ಟ್ರಸ್ಟ್​ ನಡೆಸುತ್ತಿದೆ. ಹಾಗೆ ಶಾಲೆ, ಆಸ್ಪತ್ರೆಗಳಿಗೆ ದಾನ ಮಾಡುತ್ತದೆ. ಬಡಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸುತ್ತಿದೆ.

ಈ ಎಲ್ಲ ಸಾಧನೆ ಹಿಂದೆ ಮತ್ತು ಸ್ವದೇಶಿ ಉತ್ಪನ್ನದ ಹುಚ್ಚಿನ ಹಿಂದೆ ಒಬ್ಬ ಮಹಾನ್​ ಸ್ವಾತಂತ್ರ್ಯ ಹೋರಾಟಗಾರನ ಪ್ರೇರಣೆ ಇದೆ. ಹೌದು ಒಮ್ಮೆ ಲೋಕಮಾನ್ಯ ಬಾಲಗಂಗಾಧರ ತಿಲಕರಿಗೆ ಅರ್ದೇಶಿರ್​ ಗೋದ್ರೆಜ್ ಅವರು ಭೇಟಿಯಾದಾಗ ತಿಲಕರು, ಅರ್ದೇಶಿರ್ ಗೋದ್ರೆಜ್​ ಅವರಲ್ಲಿ ಸ್ವದೇಶಿ ಚಿಂತನೆಯನ್ನು ಬಿತ್ತಿದರು. ಇದನ್ನು ಮೈಗೂಡಿಸಿಕೊಂಡ ಅರ್ದೇಶಿರ್ ಗೋದ್ರೆಜ್ ಅವರು ನಮ್ಮ ದೇಶದಲ್ಲೇ ಉತ್ಪಾದನೆ ಆರಂಭಿಸಬೇಕು ಅದರ ಮೇಲೆ MADE IN INDIA ಎಂಬ ಅಂಕಿತ ಇರಬೇಕು ಎಂಬ ಛಲತೊಟ್ಟು ಗ್ರೋದ್ರೆಜ್​ ಕಂಪನಿ ಆರಂಭಿಸಿದರು.

Tags: GodrejGodrej Success Story
ShareTweetSendShare
Join us on:

Related Posts

astrology

Astro -ಈ ಆಷಾಢ ಶುಕ್ಲ ಮಾಸದಲ್ಲಿ ದೇವಿಯ ದೇವಸ್ಥಾನದಲ್ಲಿ ಈ ಒಂದು ವಸ್ತುವನ್ನು ದಾನ ಮಾಡಿ..! ಎಷ್ಟೇ ದೊಡ್ಡ ಸಾಲವು ಕರಗುತ್ತದೆ..!.!!

by admin
July 18, 2026
0

ಸಾಲ ಎಂಬುದು ಎಲ್ಲರ ಬದುಕಿನ ಭಾಗವಾಗಿಬಿಟ್ಟಿದೆ. ಒಂದೇ ವ್ಯತ್ಯಾಸವೆಂದರೆ ಸಾಲ ಎಷ್ಟು ದೊಡ್ಡದು ಮತ್ತು ಸಾಲ ಎಷ್ಟು ಚಿಕ್ಕದಾಗಿದೆ. ಸಾಮಾನ್ಯ ಕೂಲಿ ಮಾಡುವವರಾದರೂ ಸಾಲದ ಹೊರೆ ಅವರಿಗೂ...

santhosh menon new

ksca- ಬಿಸಿಸಿಐ ವಿರುದ್ಧ ಮೆನನ್ ಕಾನೂನು ಸಮರ – “ಸಂತೋಷ”ದ ಅಧಿಕಾರಕ್ಕಾಗಿ ಕರ್ನಾಟಕ ಕ್ರಿಕೆಟ್ ಬಲಿಯಾಗಬೇಕಾ..?

by admin
July 18, 2026
0

                                       ...

fifa world cup trophy old and new

fifa trophy : ಹಿಟ್ಲರ್ ಕೈಗೆ ಸಿಗದೆ..ಸಾಕು ನಾಯಿಯಿಂದ ಕಳ್ಳರ ಕೈಯಿಂದ ತಪ್ಪಿಸಿಕೊಂಡು..ಲೂಟಿಕೋರರ ದಾಳಿಗೆ ನಲುಗಿ ಹೋದ ಜಗದೇಕ ಸುಂದ್ರಿ..!

by admin
July 18, 2026
0

ಈಕೆ ಅಂತಿಂಥ ಚೆಲುವೆಯಲ್ಲ..! ಶಿಲ್ಪಿಯ ಕೈಯಲ್ಲಿ ಅರಳಿದ ಅಪ್ರತಿಮ ರೂಪಸಿ..! ಹೌದು, ಸರ್ವಾಧಿಕಾರಿ ಹಿಟ್ಲರ್‍ನ ಕೈ ಹಿಡಿಯಲಿಲ್ಲ. ಆಂಗ್ಲರ ಮೋಹದ ಬಲೆಗೂ ಬೀಳಲಿಲ್ಲ. ಕಳ್ಳರ ಕೈಗೆ ಸಿಲುಕಿದಾಗ...

ಪಿಯುಸಿ ಪಾಸಾದವರಿಗೆ ಸುವರ್ಣಾವಕಾಶ ಕರ್ನಾಟಕ ಲೋಕಾಯುಕ್ತದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಇಂದೇ ಅರ್ಜಿ ಸಲ್ಲಿಸಿ

ಪಿಯುಸಿ ಪಾಸಾದವರಿಗೆ ಸುವರ್ಣಾವಕಾಶ ಕರ್ನಾಟಕ ಲೋಕಾಯುಕ್ತದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಇಂದೇ ಅರ್ಜಿ ಸಲ್ಲಿಸಿ

by Shwetha
July 18, 2026
0

ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ನೀವು ಕೇವಲ ಪಿಯುಸಿ ಪಾಸಾಗಿದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಪ್ರತಿಷ್ಠಿತ ಸರ್ಕಾರಿ ಸಂಸ್ಥೆಯಲ್ಲಿ ಕೆಲಸ ಪಡೆಯಬೇಕೆಂದು ಬಯಸುತ್ತಿದ್ದರೆ ನಿಮಗಾಗಿ ಒಂದು...

ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ

ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ

by Shwetha
July 18, 2026
0

ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ದೇಶದ ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಆಡಳಿತಾರೂಢ ಎನ್‌ಡಿಎ ಹಾಗೂ ವಿರೋಧ ಪಕ್ಷಗಳ ಒಕ್ಕೂಟದ ನಡುವೆ ತೀವ್ರ ವಾಕ್ಸಮರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram