ಗ್ರಹಣವನ್ನು ವೀಕ್ಷಿಸಲು ಬಯಸುವಿರಾದರೆ ಇಲ್ಲಿದೆ ಮಾಹಿತಿ
ಜೂನ್ 21, ಬೆಂಗಳೂರು: ಈ ವರ್ಷದ ಮೊದಲ ಸೂರ್ಯ ಗ್ರಹಣ ಇಂದು ನಡೆಯಲಿದ್ದು ಸೂರ್ಯ ಮತ್ತು ಭೂಮಿಯ ನಡುವೆ ಸರಳರೇಖೆಯಲ್ಲಿ ಚಂದ್ರ ಬಂದು ಸೂರ್ಯನು ಕೆಲಕಾಲ ಮರೆಯಾಗುವ ಸನ್ನಿವೇಶವೇ ಸೂರ್ಯಗ್ರಹಣ. ಸೂರ್ಯನು ಸಂಪೂರ್ಣವಾಗಿ ಮರೆಯಾದರೆ ಅದು ಪೂರ್ಣ ಸೂರ್ಯಗ್ರಹಣ ಸೂರ್ಯನ ಸ್ವಲ್ಪ ಭಾಗ ಮಾತ್ರ ಮರೆಯಾದರೆ ಅದು ಭಾಗಶಃ ಸೂರ್ಯಗ್ರಹಣ.
ರಾಜಸ್ಥಾನದ ಅನುಪ್ಗ, ಸೂರತ್ಗರ್, ಹರಿಯಾಣದ ಸಿರ್ಸಾ, ರತಿಯಾ ಮತ್ತು ಕುರುಕ್ಷೇತ್ರ, ಉತ್ತರಾಖಂಡದ ಡೆಹ್ರಾಡೂನ್, ಚಂಬಾ, ಚಮೋಲಿ ಮತ್ತು ಜೋಶಿಮಠದ ಪೂರ್ಣ ಸೂರ್ಯ ಗ್ರಹಣ ಸಂಭವಿಸಿದರೆ , ಭಾರತದ ಉಳಿದ ಭಾಗದಲ್ಲಿ ಭಾಗಶಃ ಗ್ರಹಣ ಮಾತ್ರ ಸಂಭವಿಸಲಿದೆ.
ಭಾರತದಲ್ಲಿ ಮೊದಲಿಗೆ ಭೂಜ್ ಪಟ್ಟಣದಲ್ಲಿ ಬೆಳಿಗ್ಗೆ 9:58 ಕ್ಕೆ ಗ್ರಹಣ ಪ್ರಾರಂಭವಾಗಿ 4 ಗಂಟೆಗಳ ನಂತರ ಅಸ್ಸಾಂನ ದಿಬ್ರುಗದಲ್ಲಿ ಮಧ್ಯಾಹ್ನ 2: 29 ಕ್ಕೆ ಕೊನೆಗೊಳ್ಳುತ್ತದೆ.
ಖಗೋಳದ ಈ ಅಪರೂಪದ ವಿಸ್ಮಯಕಾರಿಯ ಘಟನೆಯನ್ನು ಕಣ್ತುಂಬಿಕೊಳ್ಳಬಯಸುವವರು ಕೆಲವು ಮಾರ್ಗಸೂಚಿಗಳನ್ನು ಅನುಸರಿಸಬೇಕು.
1. ಸೂರ್ಯನನ್ನು ನೋಡಲು ವಿಶೇಷ ಕನ್ನಡಕಗಳಿದ್ದು, ಸುರಕ್ಷಿತ ಗ್ರಹಣ ವೀಕ್ಷಣೆಗಾಗಿ ಈ ಕನ್ನಡಕಗಳನ್ನು ಬಳಸಿ.
2. ಸೂರ್ಯನನ್ನು ನೇರವಾಗಿ ನೋಡಲು ಹೋಗಬೇಡಿ. ಸೂರ್ಯನು ಅತ್ಯಂತ ಪ್ರಕಾಶಮಾನವಾದ ವಸ್ತುವಾಗಿದ್ದು, ನೇರವಾಗಿ ನೋಡುವುದರಿಂದ ನಿಮ್ಮ ಕಣ್ಣು ಮತ್ತು ದೃಷ್ಟಿಗೆ ತೀವ್ರ ಅಪಾಯವಿದೆ.
3. ಗಾಜಿನ ಮೇಲೆ ಸನ್ ಗ್ಲಾಸ್, ಕನ್ನಡಕಗಳು, ಎಕ್ಸ್ ರೇ ಶೀಟ್ ಅಥವಾ ಲ್ಯಾಂಪ್ಬ್ಲಾಕ್ ಅನ್ನು ಬಳಸಿ ಸೂರ್ಯನನ್ನು ವೀಕ್ಷಿಸಬೇಡಿ
4. ನೀರಿನ ಮೇಲ್ಮೈಯಲ್ಲಿ ಸೂರ್ಯನ ಬಿಂಬವನ್ನು ವೀಕ್ಷಿಸಲು ಪ್ರಯತ್ನಿಸಬೇಡಿ.
ನೀವು ಗ್ರಹಣವನ್ನು ವೀಕ್ಷಿಸಲು ಬಯಸುವಿರಾದರೆ ಹೀಗೆ ಮಾಡಿ:
ಕಾರ್ಡ್ ಶೀಟ್ನಲ್ಲಿ ಒಂದು ಪಿನ್ ಹೋಲ್ ಮಾಡಿ ಮತ್ತು ಅದನ್ನು ಸೂರ್ಯನ ಕೆಳಗೆ ಹಿಡಿಯಿರಿ. ಸ್ವಲ್ಪ ದೂರದಲ್ಲಿ, ಬಿಳಿ ಕಾಗದದ ಪರದೆಯನ್ನು ಮಾಡಿ ಆ ಹಾಳೆಯಲ್ಲಿ ಸೂರ್ಯನ ಬಿಂಬವನ್ನು ಕಾಣಬಹುದು.
ಕಾರ್ಡ್ ಶೀಟ್ ಮತ್ತು ಪರದೆಯ ನಡುವಿನ ಅಂತರವನ್ನು ಸರಿಹೊಂದಿಸುವ ಮೂಲಕ ಚಿತ್ರವನ್ನು ದೊಡ್ಡದಾಗಿ ಕಾಣಬಹುದಾಗಿದೆ.
ಪಿನ್ ಹೋಲ್ ಚಿತ್ರಗಳನ್ನು ತಯಾರಿಸಲು ನೀವು ಸ್ಟ್ರೈನರ್ ಅನ್ನು ಬಳಸಬಹುದು ಅಥವಾ ” ಮೇಕಪ್ ಕಿಟ್ ನಲ್ಲಿರುವ ಕಾಂಪ್ಯಾಕ್ಟ್ ಕನ್ನಡಿಯನ್ನು ಕಪ್ಪು ಕಾಗದದಿಂದ ಮರೆ ಮಾಡಿ, ಮಧ್ಯದಲ್ಲಿ ಸಣ್ಣ ರಂಧ್ರವನ್ನು ಮುಚ್ಚಿ.
ನೆರಳಿನಿಂದ ಸೂರ್ಯನ ಬಿಂಬವನ್ನು ದೂರದ ಗೋಡೆಯ ಮೇಲೆ ಪ್ರತಿಫಲಿಸುವಂತೆ ಮಾಡಿ.
ಈ ಮೂಲಕ ಕೂಡ ಗ್ರಹಣವನ್ನು ವೀಕ್ಷಿಸಬಹುದಾಗಿದೆ.