ADVERTISEMENT
Saturday, July 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಜುಲೈ 1ರವರೆಗೂ ಕನಕಪುರ ಸ್ವಯಂಪ್ರೇರಿತ ಲಾಕ್ ಡೌನ್

admin by admin
June 22, 2020
in Newsbeat, Samagra karnataka, ರಾಜ್ಯ
DK Shivakumar Drug Mafia
Share on FacebookShare on TwitterShare on WhatsappShare on Telegram

ಕನಕಪುರ : ಕೊರೊನಾ ಸೋಂಕು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕನಕಪುರ ವಿಧಾನಸಭೆ ಕ್ಷೇತ್ರದ ನಾಗರೀಕರು ಜುಲೈ 1 ರವರೆಗೆ ಸ್ವಯಂ ಪ್ರೇರಿತ ಲಾಕ್ ಡೌನ್ ಗೆ ಸ್ಥಳೀಯ ಶಾಸಕರೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಭಾನುವಾರ ನಡೆದ ತುರ್ತು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ.

ಕನಕಪುರ ನಗರಸಭೆ ಕಚೇರಿಯ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ರಾಮನಗರ ಜಿಲ್ಲಾಧಿಕಾರಿ ಅರ್ಚನಾ, ಎಸ್ಪಿ ಅನೂಪ್ ಶೆಟ್ಟಿ, ಕನಕಪುರ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ್ ಭಾಗವಹಿಸಿದ್ದರು.

ಕ್ಷೇತ್ರದಲ್ಲಿ ದಿನೇ ದಿನೇ ಕಾಳ್ಗಿಚ್ಚಿನಂತೆ ಹಬ್ಬುತ್ತಿರುವ ಕೊರೊನಾ ನಿಯಂತ್ರಣ ಮಾರ್ಗೋಪಾಯಗಳನ್ನು ಕಂಡುಹಿಡಿಯಲು ಈ ಸಭೆ ಕರೆಯಲಾಗಿತ್ತು. ನಾನಾ ರಾಜಕೀಯ ಪಕ್ಷಗಳ ಮುಖಂಡರು, ಇಲಾಖೆಗಳ ಅಧಿಕಾರಿಗಳು, ಸಾಮಾಜಿಕ ಮತ್ತು ನಾಗರೀಕ ಸಂಘಟನೆಗಳ ಪ್ರತಿನಿಧಿಗಳು, ಉದ್ಯಮಿಗಳು, ವರ್ತಕರು ಮತ್ತಿತರರು ಭಾಗವಹಿಸಿದ್ದ ಈ ಸಭೆಯಲ್ಲಿ ಜುಲೈ 1 ರವರೆಗೆ ಕನಕಪುರ ಸ್ವಯಂ ಪ್ರೇರಿತ ಲಾಕ್ ಡೌನ್ (self qurantine) ಬಗ್ಗೆ ಏಕಮತ ನಿರ್ಧಾರಕ್ಕೆ ಬರಲಾಯಿತು.

ಇದು ಮಕ್ಕಳು, ವೃದ್ಧರು ಸೇರಿದಂತೆ ಸ್ಥಳೀಯ ನಾಗರಿಕರ ಹಿತದೃಷ್ಟಿ, ಆರೋಗ್ಯ ರಕ್ಷಣೆ, ಕನಕಪುರ ಕ್ಷೇತ್ರದ ಗೌರವ ಕಾಪಾಡಿಕೊಳ್ಳಲು ಅನಿವಾರ್ಯ. ಜುಲೈ 1 ರ ನಂತರ ಪರಿಸ್ಥಿತಿಯನ್ನು ಅವಲೋಕಿಸಿ, ಇದೇ ರೀತಿ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳೋಣ. ರಾಜ್ಯ ಸರಕಾರದ ಆದೇಶಕ್ಕೂ ಇದಕ್ಕೂ ಸಂಬಂಧವಿಲ್ಲ. ನಾವೆಲ್ಲರೂ ಒಟ್ಟಿಗೆ ಸ್ವಯಿಚ್ಛೆಯಿಂದ ತೆಗೆದುಕೊಂಡಿರುವ ನಿರ್ಣಯ ಇದು ಎಂಬ ನಿಲುವಿಗೆ ಸಭೆಯಲ್ಲಿ ಬರಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದವರ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್ , ಈ ಲೌಕ್ ಡೌನ್ ಗೂ ರಾಜ್ಯ ಸರಕಾರದ ಆದೇಶವಲ್ಲ. ಕನಕಪುರ ಜನತೆ ಮುನ್ನೆಚ್ಚರಿಕೆ ಕ್ರಮವಾಗಿ ತೆಗೆದುಕೊಂಡಿರುವ ಪ್ರಜ್ಞಾಪೂರ್ವಕ ಸ್ವಂತ ನಿರ್ಣಯ. ಜೀವವಿದ್ದರೆ ಜೀವನ ಎಂಬ ನಂಬುಗೆಯ ಆಧಾರದಲ್ಲಿ ಕೈಗೊಂಡಿರುವ ಮಾದರಿ ನಿರ್ಧಾರ. ಅದಕ್ಕಾಗಿ ಅವರನ್ನು ನಾನು ಅಭಿನಂದಿಸುತ್ತೇನೆ.

ಬೆಳಗ್ಗೆ 7 ರಿಂದ 11 ಗಂಟೆವರೆಗೆ ಮಾತ್ರ ದಿನಸಿ ವಸ್ತುಗಳು, ಹಣ್ಣು, ತರಕಾರಿ, ಸೊಪ್ಪು, ಮಾಂಸ ಮತ್ತಿತರ ದಿನಬಳಕೆ ಆಹಾರ ವಸ್ತುಗಳ ಮಾರಾಟಕ್ಕೆ ವರ್ತಕರು ಸಮ್ಮತಿಸಿದ್ದಾರೆ. ಕ್ಲಿನಿಕ್ ಗಳು, ಔಷದ ಅಂಗಡಿಗಳ ಸಮಯಾವಧಿ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು, ಡಿಸಿ, ಎಸ್ಪಿ, ಆಸ್ಪತ್ರೆ ಪ್ರತಿನಿಧಿಗಳು ನಿರ್ಣಯ ಮಾಡುತ್ತಾರೆ. ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಅಸೋಸಿಯೇಷನ್ ನವರು ಮದ್ಯದಂಗಡಿಗಳ ಸಮಯ ನಿಗದಿ ಮಾಡುತ್ತಾರೆ. ಆದರೆ ಎಲ್ಲ ಬಗೆಯ ವರ್ತಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಹಾಗೂ ವ್ಯಾಪಾರ ಸ್ಥಳದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಇದರ ಬಗ್ಗೆ ಪೊಲೀಸ್ ಇಲಾಖೆ ಸಿಬ್ಬಂದಿ ನಿಗಾ ವಹಿಸುತ್ತದೆ.

ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿರುವ ರಾಮನಗರ ಜಿಲ್ಲೆಯ ಆಸ್ಪತ್ರೆಗಳು ಹಾಗೂ ಕ್ವಾರಂಟೈನ್ ಕೇಂದ್ರಗಳಲ್ಲಿ ಅವರ ಊಟೋಪಾಚಾರಗಳಿಗೆ ನಿತ್ಯ ಬರೀ ತಲಾ 60 ರುಪಾಯಿ ಮಾತ್ರ ಸರಕಾರ ನೀಡುತ್ತಿದೆ. ಇದರಿಂದ ಗುಣಮಟ್ಟದ ಆಹಾರ ಸಿಗುತ್ತಿಲ್ಲ ಎಂಬ ದೂರು ಬಂದಿದೆ. ಹೀಗಾಗಿ ಡಿ.ಕೆ.ಎಸ್. ಚಾರಿಟಬಲ್ ಟ್ರಸ್ಟ್ ನಿಂದ ಹೆಚ್ಚುವರಿಯಾಗಿ ತಲಾ 100 ರುಪಾಯಿ ನೀಡಲಾಗುವುದು. ಇದರಿಂದ ಒಟ್ಟಾರೆ ತಲಾ 160 ರುಪಾಯಿ ಸೋಂಕಿತರು, ಕ್ವಾರಂಟೈನ್ ಕೇಂದ್ರಗಳಲ್ಲಿ ಇರುವವರಿಗೆ ಸಿಕ್ಕಂತಾಗುತ್ತದೆ. ಜತೆಗೆ ಕ್ವಾರಂಟೈನ್ ಕೇಂದ್ರಗಳಲ್ಲಿ ಇರುವವರು ಮನೆಯಿಂದ ಹಾಸಿಗೆ, ಹೊದಿಕೆ, ಬಟ್ಟೆ ಮತ್ತಿತರ ವಸ್ತುಗಳನ್ನು ತರಿಸಿಕೊಳ್ಳಬಹುದು. ಇಲ್ಲದಿದ್ದರೆ ನಾನೇ ಟ್ರಸ್ಠ್ ಮೂಲಕ ಅದನ್ನು ಒದಗಿಸಲು ಸಿದ್ಧನಿದ್ದೇನೆ. ರೇಷ್ಮೆ ಮಾರುಕಟ್ಟೆ ತೆರೆದಿರುತ್ತಿದೆ. ಅದಕ್ಕೂ ನಿಗದಿತ ಸಮಯ ಇರುತ್ತದೆ.

ಇನ್ನು ಎಸ್ಸೆಸ್ಸೆಲ್ಸಿ, ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ವಿಚಾರದಲ್ಲಿ ರಾಜ್ಯ ಸರಕಾರದ ನಿರ್ಧಾರವೇ ಅಂತಿಮ. ಇದರಲ್ಲಿ ನಾವ್ಯಾರೂ ತಲೆ ಹಾಕುವುದಿಲ್ಲ. ಆದರೆ ಈ ವಿದ್ಯಾರ್ಥಿಗಳಿಗೆ 1 ಲಕ್ಷ ಮಾಸ್ಕ್ ಗಳನ್ನು ವಿತರಿಸಲಾಗುವುದು. ಈಗಾಗಲೇ ಅದನ್ನು ಸಿದ್ಧಪಡಿಸಿ ಇಟ್ಟುಕೊಳ್ಳಲಾಗಿದೆ. ಈ ಸ್ವಯಂ ಪ್ರೇರಿತ ಲಾಕ್ ಡೌನ್ ಸಂದರ್ಭದಲ್ಲಿ ಅನಗತ್ಯ ಓಡಾಟ ವಾಹನ ಸಙಚಾರಕ್ಕೆ ಕಡಿವಾಣ ಹಾಕಿಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಯಾರೂ ಯಾರ ಮೇಲೂ ದಬ್ಬಾಳಿಕೆ ಮಾಡಬಾರದು.

ಭಾನುವಾರ ರಜಾದಿನವೂ ಸಭೆಗೆ ಹಾಜರಾಗಿರುವ ಅಧಿಕಾರಿಗಳಿಗೆ ಅಭಿನಂದನೆಗಳು. ಕ್ಷೇತ್ರದ ನಾಗರಿಕರ ಹಿತರಕ್ಷಣೆಗೆ ನಾವು ಬದ್ಧ. ನಾಗರಿಕರ ಆಶೀರ್ವಾದ, ಸಹಕಾರ ನಮ್ಮೆಲ್ಲರಿಗೂ ಹೀಗೆಯೇ ಮುಂದುವರಿಯಲಿ ಎಂದರು

Related posts

Luka Modric: Croatia

fifa world cup 2026- 35 ವರ್ಷಗಳ ಇತಿಹಾಸ, ವಿಶ್ವಕಪ್‌ನಲ್ಲಿ ಸೃಷ್ಟಿಸಿದ್ರು ಇತಿಹಾಸ! ಲೂಕಾ ಮಾಡ್ರಿಕ್ ಕಣ್ಣೀರ ವಿದಾಯದೊಂದಿಗೆ ಮುಗಿಯಿತೇ ಕ್ರೊವೇಶಿಯಾದ ಸುವರ್ಣ ಯುಗ?”

July 4, 2026
Romelu Lukaku

fifa world cup 2026- ಬಡತನಕೆಸರಿನಲ್ಲಿ ಅರಳಿದ ಕಪ್ಪು ವಜ್ರ…! ಅಷ್ಟಕ್ಕೂ ನನ್ನ ಹೆಸರು ಏನು ಗೊತ್ತಾ..?

July 4, 2026
Tags: seal down
ShareTweetSendShare
Join us on:

Related Posts

Luka Modric: Croatia

fifa world cup 2026- 35 ವರ್ಷಗಳ ಇತಿಹಾಸ, ವಿಶ್ವಕಪ್‌ನಲ್ಲಿ ಸೃಷ್ಟಿಸಿದ್ರು ಇತಿಹಾಸ! ಲೂಕಾ ಮಾಡ್ರಿಕ್ ಕಣ್ಣೀರ ವಿದಾಯದೊಂದಿಗೆ ಮುಗಿಯಿತೇ ಕ್ರೊವೇಶಿಯಾದ ಸುವರ್ಣ ಯುಗ?”

by admin
July 4, 2026
0

ಕ್ರೊವೇಶಿಯಾ..! ಜಗತ್ತಿನ ಒಂದು ಪುಟ್ಟ ರಾಷ್ಟ್ರ. ಅಂದಾಜು 42 -43 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ದೇಶ. ಆದ್ರೆ ಈ ದೇಶಕ್ಕೆ ತನ್ನದೇ ಆದ ಪ್ರಾಚೀನ ಇತಿಹಾಸವೂ ಇದೆ....

Romelu Lukaku

fifa world cup 2026- ಬಡತನಕೆಸರಿನಲ್ಲಿ ಅರಳಿದ ಕಪ್ಪು ವಜ್ರ…! ಅಷ್ಟಕ್ಕೂ ನನ್ನ ಹೆಸರು ಏನು ಗೊತ್ತಾ..?

by admin
July 4, 2026
0

ಬಡತನಕೆಸರಿನಲ್ಲಿ ಅರಳಿದ ಕಪ್ಪು ವಜ್ರ...! ಅಷ್ಟಕ್ಕೂ ನನ್ನ ಹೆಸರು ಏನು ಗೊತ್ತಾ..? ಅಮ್ಮನ ಎದೆ ಹಾಲು.. ಅಪ್ಪನ ರಕ್ತದ ಬೆವರು... ಅಜ್ಜನ ಪ್ರೀತಿ..! ಆತನೇ ಹೇಳುವಂತೆ ಈ...

sadio mane

fifa worldcup2026- ಫುಟ್‍ಬಾಲ್ ಜಗತ್ತಿನ ಸರದಾರನೂ ಹೌದು.. ಮಾನವಿಯತೆಯ ಸಾಹುಕಾರನೂ ಹೌದು…! ಸ್ಯಾಡಿಯೊ ಮಾನೆ ಎಂಬ ಬಂಗಾರದ ಮನುಷ್ಯ..!

by admin
July 4, 2026
0

ಈತನ ಒಂದು ವರ್ಷದ ಸಂಪಾದನೆ 330 ಕೋಟಿಗೂ ಅಧಿಕ..! ಆದ್ರೆ ಕೈಯಲ್ಲಿರುವುದು ಒಡೆದು ಹೋಗಿರುವ ಹಳೆಯ ಮೊಬೈಲ್..! ಓಡಾಡಲು ಬಳಸುವುದು ಹಳೆಯ ಕಾರು..! ಯಾರವನು...? ಮನಸ್ಸು ಮಾಡಿದ್ರೆ...

argentina vs cabo verde

fifaworldcup:2026- ದೈತ್ಯರನ್ನು ಬೆಚ್ಚಿ ಬೀಳಿಸಿದ ಬ್ಲೂ ಬ್ಲೂ ಶಾರ್ಕ್ಸ್..! ಫಿಫಾ ವಿಶ್ವಕಪ್‍ನಲ್ಲಿ ಇತಿಹಾಸ ಬರೆದ ಕೇಪ್‍ವರ್ಡ್..!

by admin
July 4, 2026
0

ಕೆಲವೊಂದು ಸೋಲುಗಳು ಗೆಲುವಿಗಿಂತಲೂ ಹೆಚ್ಚು ಕಾಲ ನೆನಪಿನಲ್ಲಿರುತ್ತವೆ. ಅದು ಭಗ್ನಗೊಂಡ ಮೊದಲ ಪ್ರೀತಿಯ ಹಾಗೇ..! ಫಿಫಾ ವಿಶ್ವಕಪ್ 2026ರ ಟೂರ್ನಿಯ ನಾಕೌಟ್ ಪಂದ್ಯವೊಂದರಲ್ಲಿ ಆಗಿದ್ದು ಕೂಡ ಅದೇ..!...

Road Safety Awareness

Bng – ವೈಟ್‌ಫೀಲ್ಡ್‌ನ ಪಾರ್ಸೆಕ್‌ನಲ್ಲಿ ಸಂಚಾರ ಸುರಕ್ಷತಾ ಗ್ಯಾಲರಿ ಉದ್ಘಾಟನೆ: ‘ಟ್ರಾಫಿಕ್ ಡಿಸೈನ್ ಚಾಲೆಂಜ್’ ಅಂತಿಮ ಹಂತಕ್ಕೆ!

by admin
July 4, 2026
0

​• ಸುರಕ್ಷಿತ ಸಂಚಾರಕ್ಕಾಗಿ ನೂತನ ಗ್ಯಾಲರಿ ಉದ್ಘಾಟನೆ * ವಾಸ್ತವ ಟ್ರಾಫಿಕ್ ಪರಿಸ್ಥಿತಿಯ ಪ್ರಾಯೋಗಿಕ ಕಲಿಕೆ * 'ಟ್ರಾಫಿಕ್ ಡಿಸೈನ್ ಚಾಲೆಂಜ್'ನ ಸಬ್ಮಿಷನ್ ಮುಕ್ತಾಯ * ಮುಂದಿನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram