ADVERTISEMENT
Saturday, September 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

IND v NZ: ಇಂದು ಟೇಬಲ್‌ ಟಾಪರ್‌ಗಳ ಕದನ: ಧರ್ಮಶಾಲಾದಲ್ಲಿ ಭಾರತಕ್ಕೆ ಕಿವೀಸ್‌ ಸವಾಲು

ಆಡಿರುವ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಉಭಯ ತಂಡಗಳು

C Dinesh by C Dinesh
October 22, 2023
in Sports, ಕ್ರಿಕೆಟ್ ವಿಶ್ವಕಪ್ 2023
Team India

Team India

Share on FacebookShare on TwitterShare on WhatsappShare on Telegram

ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಇಂದು ಟೇಬಲ್‌ ಟಾಪರ್‌ಗಳ ಕದನ ನಡೆಯಲಿದ್ದು, ಧರ್ಮಶಾಲಾದಲ್ಲಿ ನಡೆಯುವ ರೋಚಕ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿ಼ಲೆಂಡ್‌ ತಂಡಗಳು ಮುಖಾಮುಖಿ ಆಗಲಿವೆ.

ಟೂರ್ನಿಯಲ್ಲಿ ಈ ಎರಡು ತಂಡಗಳು ಆಡಿರುವ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಜೇಯ ತಂಡವಾಗಿ ಗುರುತಿಸಿಕೊಂಡಿವೆ. ಹೀಗಾಗಿ ಉಭಯ ತಂಡಗಳ ಇಂದಿನ ಹೈವೋಲ್ಟೇಜ್‌ ಹಣಾಹಣಿಯಲ್ಲಿ ಯಾರಿಗೆ ಮೊದಲ ಸೋಲಿನ ರುಚಿ ಎದುರಾಗಲಿದೆ ಎಂಬ ಕುತೂಹಲ ಮನೆ ಮಾಡಿದೆ. ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಎರಡು ತಂಡಗಳು ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನ ಅಲಂಕರಿಸಿದ್ದು, ನೆಟ್‌ ರನ್‌ ರೇಟ್‌ ಆಧಾರದಲ್ಲಿ ಕಿವೀಸ್‌ ನಂ.1 ಸ್ಥಾನದಲ್ಲಿದ್ದರೆ. ಭಾರತ 2ನೇ ಸ್ಥಾನದಲ್ಲಿದೆ.

Related posts

karnataka-throwball-teams-win-three-gold-medals-at-7th-national-tournament-guntur-2026

ರಾಷ್ಟ್ರೀಯ ತ್ರೋಬಾಲ್ ಕ್ರೀಡಾಕೂಟದಲ್ಲಿ ಕರ್ನಾಟಕದ ಕ್ರೀಡಾಪಟುಗಳ ಭರ್ಜರಿ ಸಾಧನೆ

September 18, 2026
dbipuc-volleyball-team-runner-up-aikyam-cup-2026-27

AIKYAM CUP 2026–27 –  ವಾಲಿಬಾಲ್‌ನಲ್ಲಿ DBIPUC ತಂಡಕ್ಕೆ ರನ್ನರ್‌ಅಪ್ ಗೌರವ

September 8, 2026

ಮೇಲ್ನೋಟಕ್ಕೆ ಉಭಯ ತಂಡಗಳು ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಸಮಬಲದಿಂದ ಕೂಡಿದ್ದರು, ಹಿಂದಿನ ಅಂಕಿಅಂಶಗಳ ಆಧಾರದಲ್ಲಿ ಕಿವೀಸ್‌ ಮೇಲುಗೈ ಹೊಂದಿದ್ದರೆ, ಭಾರತಕ್ಕೆ ತವರಿನಲ್ಲಿ ಆಡುತ್ತಿರುವುದು ಬಲ ನೀಡಿದೆ. ಹೀಗಾಗಿ ಎರಡು ತಂಡಗಳು ಇಂದು ಗೆಲುವಿಗಾಗಿ ಪ್ರಬಲ ಪೈಪೋಟಿ ನಡೆಸುವ ನಿರೀಕ್ಷೆ ಇದೆ. ಪ್ರಸಕ್ತ ವಿಶ್ವಕಪ್‌ನಲ್ಲಿ ಆಡಿರುವ 4 ಪಂದ್ಯಗಳಲ್ಲಿ ಎರಡು ತಂಡಗಳು ಚೇಸಿಂಗ್‌ನಲ್ಲಿ ಗೆಲುವಿನ ಯಶಸ್ಸನ್ನ ಸಾಧಿಸಿದ್ದು, ಇಂದಿನ ಪಂದ್ಯದಲ್ಲೂ ಇದೇ ಪ್ರದರ್ಶನ ಮುಂದುವರಿಸುವ ನಿರೀಕ್ಷೆಯೊಂದಿಗೆ ಸಿದ್ಧತೆ ಮಾಡಿಕೊಂಡಿವೆ.

Indian Team

ಏಕದಿನ ವಿಶ್ವಕಪ್‌ನಲ್ಲಿ ಭಾರತ ಹಾಗೂ ನ್ಯೂಜಿ಼ಲೆಂಡ್‌ 8 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಇದರಲ್ಲಿ ನ್ಯೂಜಿ಼ಲೆಂಡ್‌ 5-3ರ ಮುನ್ನಡೆ ಹೊಂದಿದೆ. ಈ ಹಿಂದೆ 2019ರ ಏಕದಿನ ವಿಶ್ವಕಪ್‌ನಲ್ಲಿ ಕಿವೀಸ್‌ ವಿರುದ್ಧ ಎದುರಾದ ಸೋಲಿನ ಆಘಾತ ಟೀಂ ಇಂಡಿಯಾ ಆಟಗಾರರನ್ನ ಇಂದಿಗೂ ಕಾಡುತ್ತಿದೆ. ಹೀಗಾಗಿ ಈ ಬಾರಿ ತವರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭರ್ಜರಿ ಪ್ರದರ್ಶನದಿಂದ ಗೆದ್ದು, 2019ರ ವಿಶ್ವಕಪ್‌ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳಲು ರೋಹಿತ್‌ ಪಡೆ ಸಜ್ಜಾಗಿದೆ.

Hardik Pandya

ಹಾರ್ದಿಕ್‌ ಪಾಂಡ್ಯ ಅಲಭ್ಯ:
ಬಾಂಗ್ಲಾದೇಶ ವಿರುದ್ಧ ಗಾಯಗೊಂಡಿರುವ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ, ಕಿವೀಸ್‌ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿರುವುದು ಟೀಂ ಇಂಡಿಯಾಕ್ಕೆ ದೊಡ್ಡ ಹಿನ್ನಡೆ ಮೂಡಿಸಿದೆ. ಹೀಗಾಗಿ ಆಲ್ರೌಂಡರ್‌ ಸ್ಥಾನದಲ್ಲಿ ಯಾರು? ಕಣಕ್ಕಿಳಿಯುತ್ತಾರೆ ಎಂಬುದು ಎಲ್ಲರ ಕುತೂಹಲ ಕೆರಳಿಸಿದೆ. ಜೊತೆಗೆ ಈವರೆಗೂ ಆಡಿರುವ 4 ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿರು ಮತ್ತೋರ್ವ ಆಲ್ರೌಂಡರ್‌ ಶಾರ್ದೂಲ್‌ ಥಾಕೂರ್‌, ಇಂದಿನ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಾಗಿದ್ದು, ಇವರ ಸ್ಥಾನಕ್ಕೆ ಮೊಹಮ್ಮದ್‌ ಶಮಿ ಅಥವಾ ಆರ್.‌ ಅಶ್ವಿನ್‌ ಆಡುವ ಸಾಧ್ಯತೆ ಇದೆ.

New Zealand

ಸಜ್ಜಾಗಿರುವ ಕಿವೀಸ್‌ ಪಡೆ:
ಮತ್ತೊಂದೆಡೆ ನ್ಯೂಜಿ಼ಲೆಂಡ್‌ ಸಹ ಟೀಂ ಇಂಡಿಯಾಕ್ಕೆ ಟಕ್ಕರ್‌ ನೀಡಲು ಸಜ್ಜಾಗಿದೆ. ಟೂರ್ನಿಯಲ್ಲಿ ದೊರೆತಿರುವ ಅದ್ಭುತ ಆರಂಭದಿಂದ ತಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಕಿವೀಸ್‌, ಭಾರತದ ವಿರುದ್ಧ ಹಿಂದಿನ ಪ್ರಾಬಲ್ಯ ಮುಂದುವರಿಸುವ ಲೆಕ್ಕಾಚಾರದಲ್ಲಿದೆ. ಕೇನ್‌ ವಿಲಿಯಂಸನ್‌ ಅನುಪಸ್ಥಿತಿಯ ನಡುವೆಯೂ ಕಿವೀಸ್‌ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು, ಹಂಗಾಮಿ ನಾಯಕನಾಗಿ ಟಾಮ್‌ ಲೇಥಂ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ದಾರೆ.

Rahul, Rohit and Kohli

ರೋಹಿತ್-ಕೊಹ್ಲಿ ಮಿಂಚು:
ನ್ಯೂಜಿ಼ಲೆಂಡ್‌ಗೆ ಹೋಲಿಸಿದರೆ ಟೀಂ ಇಂಡಿಯಾದ ಬ್ಯಾಟಿಂಗ್‌ ಬಲಿಷ್ಠವಾಗಿದೆ. ಪ್ರಮುಖವಾಗಿ ರೋಹಿತ್ ಶರ್ಮಾ(265 ರನ್‌) ಮತ್ತು ವಿರಾಟ್ ಕೊಹ್ಲಿ(259 ರನ್‌) ಪ್ರಸಕ್ತ ವಿಶ್ವಕಪ್‌ನಲ್ಲಿ ಅದ್ಭುತ ಫಾರ್ಮ್‌ ಕಂಡುಕೊಂಡಿದ್ದಾರೆ. ಇವರೊಂದಿಗೆ ಆರಂಭಿಕ ಬ್ಯಾಟರ್‌ ಶುಭ್ಮನ್‌ ಗಿಲ್‌, ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌, ಈವರೆಗೂ ನಡೆದಿರುವ ಪಂದ್ಯಗಳಲ್ಲಿ ಭಾರತ ತಂಡಕ್ಕೆ ಬ್ಯಾಟಿಂಗ್‌ನಲ್ಲಿ ಬಲ ತುಂಬಿದ್ದಾರೆ.

ಭಾರತ ತಂಡ: ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಥಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್.

ನ್ಯೂಜಿಲೆಂಡ್ ತಂಡ: ಕೇನ್ ವಿಲಿಯಮ್ಸನ್, ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್, ಡ್ಯಾರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್‌ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ವಿಲ್‌ ಯಂಗ್‌.

ಪಂದ್ಯದ ಸಮಯ: ಮಧ್ಯಾಹ್ನ 2ಕ್ಕೆ

IND v NZ, Team India, New Zealand, ODI Cricket, World Cup

Tags: IND v NZNew ZealandODI cricketteam indiaWorld Cup
ShareTweetSendShare
Join us on:

Related Posts

karnataka-throwball-teams-win-three-gold-medals-at-7th-national-tournament-guntur-2026

ರಾಷ್ಟ್ರೀಯ ತ್ರೋಬಾಲ್ ಕ್ರೀಡಾಕೂಟದಲ್ಲಿ ಕರ್ನಾಟಕದ ಕ್ರೀಡಾಪಟುಗಳ ಭರ್ಜರಿ ಸಾಧನೆ

by admin
September 18, 2026
0

ಮೂರು ವಿಭಾಗಗಳಲ್ಲೂ ಚಿನ್ನದ ಪದಕ – ಕರ್ನಾಟಕಕ್ಕೆ ಹೆಮ್ಮೆಯ ಗೆಲುವು ಗುಂಟೂರು: ಆಂಧ್ರಪ್ರದೇಶದ ಗುಂಟೂರಿನ ಆಂಧ್ರ ಪ್ರದೇಶ್ STEM ಸ್ಕೂಲ್‌ನಲ್ಲಿ ಸೆಪ್ಟೆಂಬರ್ 11 ಮತ್ತು 12ರಂದು ನಡೆದ...

dbipuc-volleyball-team-runner-up-aikyam-cup-2026-27

AIKYAM CUP 2026–27 –  ವಾಲಿಬಾಲ್‌ನಲ್ಲಿ DBIPUC ತಂಡಕ್ಕೆ ರನ್ನರ್‌ಅಪ್ ಗೌರವ

by admin
September 8, 2026
0

AIKYAM CUP 2026–27 -  ವಾಲಿಬಾಲ್‌ನಲ್ಲಿ DBIPUC ತಂಡಕ್ಕೆ ರನ್ನರ್‌ಅಪ್ ಗೌರವ ಬೆಂಗಳೂರು: ಇಂದಿರಾನಗರದ ಜೈನ್ ಪಿಯು ಹಾಗೂ ಡಿಗ್ರಿ ಕಾಲೇಜಿನಲ್ಲಿ ಆಯೋಜಿಸಿದ್ದ AIKYAM CUP 2026–27 ವಾಲಿಬಾಲ್...

aravinda-avengers-wins-bz-cup-media-cricket-trophy

ಅರವಿಂದ ಅವೇಂಜರ್ಸ್‌ಗೆ ಬಿ ಝೆಡ್ ಕಪ್ ಮೀಡಿಯಾ ಕ್ರಿಕೆಟ್ ಟ್ರೋಫಿ

by admin
September 7, 2026
0

ಬೆಂಗಳೂರು: ಅಮೋಘ ಆಟ ಪ್ರದರ್ಶಿಸಿದ ಅರವಿಂದ ಅವೇಂಜರ್ಸ್ ತಂಡವು ಬಿ ಝೆಡ್ ಕಪ್ ಮೀಡಿಯಾ ಕ್ರಿಕೆಟ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. 9ಡ್ರೀಮ್ಸ್ ಸಂಸ್ಥೆ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ...

bizd-cup-media-cricket-tournament-bengaluru-gkvk-ground-zameer-ahmed-khan

ಜಿಕೆವಿಕೆ ಮೈದಾನದಲ್ಲಿ ಬಿಝಡ್ ಕಪ್ ಮೀಡಿಯಾ ಕ್ರಿಕೆಟ್ ಹಬ್ಬ: ಜಮೀರ್ ಅಹ್ಮದ್ ಖಾನ್‌ರಿಂದ ಚಾಲನೆ

by admin
September 5, 2026
0

ಬೆಂಗಳೂರು: ಬೆಂಗಳೂರಿನ ಜಿಕೆವಿಕೆ ಮೈದಾನದಲ್ಲಿ 9 ಡ್ರಿಮ್ಸ್‌ ಸಂಸ್ಥೆ ಆಯೋಜಿಸಿರು ಬಿಝಡ್‌ ಕಪ್ ಮೀಡಿಯಾ ಕ್ರಿಕೆಟ್ ಟೂರ್ನಿಗೆ ವಸತಿ ಸಚಿವ ಜಮೀರ್ ಅಹ್ಮದ್‌ ಖಾನ್‌ ಅವರು ಚಾಲನೆ...

bz-cup-media-cricket-tournament-bengaluru-september-5-6

ಬ್ಯಾಟ್ & ಬಾಲ್ ಸಮರಕ್ಕೆ ಸಜ್ಜಾದ ಮಾಧ್ಯಮ ಲೋಕ..! ಸೆಪ್ಟೆಂಬರ್ 5 ಮತ್ತು 6ರಂದು ಬೆಂಗಳೂರಿನಲ್ಲಿ ಬಿ.ಝಡ್. ಕಪ್ ಮೀಡಿಯಾ ಕ್ರಿಕೆಟ್ ಟೂರ್ನಿ

by admin
September 4, 2026
0

ಮಾಧ್ಯಮ ಆಹ್ವಾನ ಸಂಪಾದಕರು/ ಮುಖ್ಯವರದಿಗಾರರು/ಕ್ರೀಡಾ ಸಂಪಾದಕರು ಸಿಎಂ ಕಪ್ ಆಯೋಜಿಸಿದ್ದ 9 ಡ್ರಿಮ್ಸ್ ತಂಡವು ಸೆಪ್ಟೆಂಬರ್ 5 ಮತ್ತು 6ರಂದು ಬೆಂಗಳೂರಿನ ಬಳ್ಳಾರಿ ರಸ್ತೆ ಜಿಕೆವಿಕೆ ಮೈದಾನದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram