ADVERTISEMENT
Saturday, June 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

PAK v AFG: ಅಫ್ಘಾನಿಸ್ತಾನಕ್ಕೆ ಐತಿಹಾಸಿಕ ಜಯ: ಬಾಬರ್ ನೇತೃತ್ವದ ಪಾಕಿಸ್ತಾನಕ್ಕೆ ಮುಖಭಂಗ

ಅಫ್ಘಾನಿಸ್ತಾನಕ್ಕೆ 8 ವಿಕೆಟ್‌ಗಳ ಭರ್ಜರಿ ಜಯ

C Dinesh by C Dinesh
October 23, 2023
in Sports, ಕ್ರಿಕೆಟ್, ಕ್ರಿಕೆಟ್ ವಿಶ್ವಕಪ್ 2023
Afghanistan'

Afghanistan'

Share on FacebookShare on TwitterShare on WhatsappShare on Telegram

ಪ್ರಸಕ್ತ ವಿಶ್ವಕಪ್‌ನಲ್ಲಿ ಮತ್ತೊಂದು ಅದ್ಭುತ ಪ್ರದರ್ಶನ ನೀಡಿರುವ ಅಫ್ಘಾನಿಸ್ತಾನ ಸಂಘಟಿತ ಆಟದ ಮೂಲಕ ಪಾಕಿಸ್ತಾನದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದೆ.

Afghanistan

ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಪಾಕಿಸ್ತಾನ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಆದರೆ ಪ್ರಮುಖ ಬ್ಯಾಟರ್‌ಗಳ ವೈಫಲ್ಯಕ್ಕೆ ಸಿಲುಕಿದ ಪಾಕಿಸ್ತಾನ ನಿಗದಿ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 282 ರನ್‌ಗಳಿಸಿತು. ಈ ಟಾರ್ಗೆಟ್‌ ಚೇಸ್‌ ಮಾಡಿದ ಅಫ್ಘಾನಿಸ್ತಾನ 49 ಓವರ್‌ಗಳಲ್ಲಿ 2 ವಿಕೆಟ್‌ಗೆ 286 ರನ್‌ಗಳಿಸುವ ಮೂಲಕ ಭರ್ಜರಿ 8 ವಿಕೆಟ್‌ಗಳ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಟೂರ್ನಿಯಲ್ಲಿ 2ನೇ ಗೆಲುವು ಸಾಧಿಸಿದ ಅಫ್ಘಾನಿಸ್ತಾನ ಸೆಮಿಫೈನಲ್‌ ಆಸೆಯನ್ನ ಜೀವಂತ ಇರಿಸಿಕೊಂಡಿದೆ.

Babar Azam

ನಾಯಕ ಬಾಬರ್‌ ಆಸರೆ:
ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ಸಾಧಾರಣ ಆರಂಭ ಕಂಡಿತು. ಆರಂಭಿಕರಾಗಿ ಕಣಕ್ಕಿಳಿದ ಶಫೀಕ್‌(58) ರನ್‌ಗಳ ಅರ್ಧಶತಕ ಬಾರಿಸಿ ಮಿಂಚಿದರೆ. ಇಮಾಮ್‌-ಉಲ್‌-ಹಕ್‌(17) ಬ್ಯಾಟಿಂಗ್‌ ವೈಫಲ್ಯ ಕಂಡರು. ಆದರೆ 1ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಬಾಬರ್‌ ಆಜ಼ಂ(74) ಆಕರ್ಷಕ ಅರ್ಧಶತಕ ಸಿಡಿಸಿ ಜವಾಬ್ದಾರಿಯ ಆಟವಾಡಿದರು. ಆದರೆ ಕಳೆದ ಪಂದ್ಯಗಳಲ್ಲಿ ತಂಡಕ್ಕೆ ಆಸರೆಯಾಗಿದ್ದ ಮೊಹಮ್ಮದ್‌ ರಿಜ್ವಾನ್‌(8) ಬ್ಯಾಟಿಂಗ್‌ ವೈಫಲ್ಯಕ್ಕೆ ಸಿಲುಕಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಸೌದ್‌ ಶಕೀಲ್‌(25) ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರೆ. ಆಲ್ರೌಂಡರ್‌ ಶದಾಬ್‌ ಖಾನ್‌(40) ಮತ್ತು ಇಫ್ತಿಕರ್‌ ಅಹ್ಮದ್‌(40) ಉತ್ತಮ ಆಟವಾಡಿದರು. ಪರಿಣಾಮ ಪಾಕಿಸ್ತಾನ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 282 ರನ್‌ಗಳಿಸಿತು. ಅಫ್ಘಾನಿಸ್ತಾನದ ಪರ ಚೊಚ್ಚಲ ಪಂದ್ಯವಾಡಿದ ನೂರ್‌ ಅಹ್ಮದ್‌(3/49) ಪರಿಣಾಮಕಾರಿ ಬೌಲಿಂಗ್‌ ದಾಳಿ ನಡೆಸಿದರೆ. ನವೀನ್‌-ಉಲ್‌-ಹಕ್‌ 2 ಹಾಗೂ ನಬಿ, ಅಜ್ಮತುಲ್ಲ ತಲಾ 1 ವಿಕೆಟ್‌ ಪಡೆದುಕೊಂಡರು.

Related posts

Basketball courts became makeshift pitches in mexico jail

ಫುಟ್‍ಬಾಲ್ ಸಾಮ್ರಾಜ್ಯದಲ್ಲಿ ಚೆಂಡು ಬ್ಯಾಟ್‍ನ ಸದ್ದು.. ಮೆಕ್ಸಿಕೊ ಜೈಲಿನ ಕೈದಿಗಳ ಮನಪರಿವರ್ತನೆಗೆ ಜಂಟಲ್‍ಮ್ಯಾನ್ ಆಟವೇ ಅಸ್ತ್ರ..!

June 19, 2026
ಫಿಫಾ ವಿಶ್ವಕಪ್‍ನಲ್ಲಿ ಆಡದಿದ್ರೂ ಜಗತ್ತನ್ನೇ ಆಡಿಸುತ್ತಿದೆ ಪಾಕಿಸ್ತಾನ..! ಏನಿದು ಸಿಯಾಲ್‍ಕೋಟ್ ರಹಸ್ಯ..?

ಫಿಫಾ ವಿಶ್ವಕಪ್‍ನಲ್ಲಿ ಆಡದಿದ್ರೂ ಜಗತ್ತನ್ನೇ ಆಡಿಸುತ್ತಿದೆ ಪಾಕಿಸ್ತಾನ..! ಏನಿದು ಸಿಯಾಲ್‍ಕೋಟ್ ರಹಸ್ಯ..?

June 19, 2026

https://twitter.com/ICC/status/1716501527404167252
ಅಫ್ಘಾನ್‌ ಸಂಘಟಿತ ಬ್ಯಾಟಿಂಗ್‌:
ಪಾಕಿಸ್ತಾನ ನೀಡಿದ 283 ರನ್‌ಗಳ ಟಾರ್ಗೆಟ್‌ ಚೇಸ್‌ ಮಾಡಿದ ಅಫ್ಘಾನ್‌, ಸಂಘಿಟಿತ ಬ್ಯಾಟಿಂಗ್‌ ಪ್ರದರ್ಶಿಸಿತು. ತಂಡದ ಪರ ಇನ್ನಿಂಗ್ಸ್‌ ಆರಂಭಿಸಿದ ಗುರ್ಬಾಜ್‌(65) ಹಾಗೂ ಜದ್ರಾನ್‌(87) ಅದ್ಭುತ ಬ್ಯಾಟಿಂಗ್‌ ಮೂಲಕ 130 ರನ್‌ಗಳ ಉತ್ತಮ ಅಡಿಪಾಯ ಹಾಕಿಕೊಟ್ಟರು. ನಂತರ ಜೊತೆಯಾದ ರಹಮತ್‌ ಶಾ(77*) ಹಾಗೂ ನಾಯಕ ಹಶ್ಮತುಲ್ಲಾ ಶಹೀದಿ(48*) ಉತ್ತಮ ಆಟದ ಮೂಲಕ ತಂಡವನ್ನ ಗೆಲುವಿನ ದಡಮುಟ್ಟಿಸಿದರು. ಪಾಕಿಸ್ತಾನದ ಪರ ಶಹೀನ್‌ ಅಫ್ರಿದಿ ಹಾಗೂ ಹಸನ್‌ ಅಲಿ ತಲಾ 1 ವಿಕೆಟ್‌ ಪಡೆದರು.
ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ ಪ್ರಸಕ್ತ ವಿಶ್ವಕಪ್‌ನಲ್ಲಿ 2ನೇ ಹಾಗೂ ಪಾಕಿಸ್ತಾನದ ವಿರುದ್ಧ ಮೊದಲ ಗೆಲುವು ಸಾಧಿಸಿತು. ಅಲ್ಲದೇ ಈ ಜಯದ ಮೂಲಕ ಅಫ್ಘಾನಿಸ್ತಾನ ವಿಶ್ವಕಪ್‌ ಸೆಮಿಫೈನಲ್‌ ರೇಸ್‌ನಲ್ಲಿ ಜೀವಂತ ಇದ್ದರೆ, ಹ್ಯಾಟ್ರಿಕ್‌ ಸೋಲು ಕಂಡ ಪಾಕಿಸ್ತಾನದ ಸೆಮಿಫೈನಲ್‌ ಹಾದಿ ಮತ್ತಷ್ಟು ಕಠಿಣಗೊಂಡಿದೆ.

PAK v AFG, CWC 2023, Pakistan, Afghanistan, ODI Cricket, World Cup

Tags: AfghanistanCWC 2023ODI cricketPAK v AFGPakistanWorld Cup
ShareTweetSendShare
Join us on:

Related Posts

Basketball courts became makeshift pitches in mexico jail

ಫುಟ್‍ಬಾಲ್ ಸಾಮ್ರಾಜ್ಯದಲ್ಲಿ ಚೆಂಡು ಬ್ಯಾಟ್‍ನ ಸದ್ದು.. ಮೆಕ್ಸಿಕೊ ಜೈಲಿನ ಕೈದಿಗಳ ಮನಪರಿವರ್ತನೆಗೆ ಜಂಟಲ್‍ಮ್ಯಾನ್ ಆಟವೇ ಅಸ್ತ್ರ..!

by admin
June 19, 2026
0

ಭಾರತದಲ್ಲಿ ಕ್ರಿಕೆಟ್ ಹೇಗೆ ಧರ್ಮವಾಗಿದೆಯೋ ಹಾಗೇ ಆ ರಾಷ್ಟ್ರದಲ್ಲೂ ಫುಟ್‍ಬಾಲ್ ಆಟ ಧರ್ಮವಾಗಿದೆ. ಭಾರತದ ಗಲ್ಲಿ ಗಲ್ಲಿಗಳಲ್ಲಿ ಕ್ರಿಕೆಟ್ ಆಡುವ ರೀತಿಯಲ್ಲೇ ಆ ದೇಶದ ಗಲ್ಲಿ ಗಲ್ಲಿಗಳಲ್ಲೂ...

ಫಿಫಾ ವಿಶ್ವಕಪ್‍ನಲ್ಲಿ ಆಡದಿದ್ರೂ ಜಗತ್ತನ್ನೇ ಆಡಿಸುತ್ತಿದೆ ಪಾಕಿಸ್ತಾನ..! ಏನಿದು ಸಿಯಾಲ್‍ಕೋಟ್ ರಹಸ್ಯ..?

ಫಿಫಾ ವಿಶ್ವಕಪ್‍ನಲ್ಲಿ ಆಡದಿದ್ರೂ ಜಗತ್ತನ್ನೇ ಆಡಿಸುತ್ತಿದೆ ಪಾಕಿಸ್ತಾನ..! ಏನಿದು ಸಿಯಾಲ್‍ಕೋಟ್ ರಹಸ್ಯ..?

by admin
June 19, 2026
0

ಇದೆಂಥಾ ವಿಪರ್ಯಾಸ ನೋಡಿ...! ಭಾರತದಂತೆ ಈ ದೇಶದಲ್ಲೂ ಫುಟ್‍ಬಾಲ್ ಕ್ರೇಝ್ ಇದ್ರೂ ಅಪ್ರತಿಮ ಅಟಗಾರರನ್ನು ತಯಾರು ಮಾಡಲು ಆಗ್ತಿಲ್ಲ. ಹೀಗಾಗಿ ಅವರು ಕೂಡ ಫಿಫಾ ವಿಶ್ವಕಪ್‍ನಲ್ಲಿ ಅರ್ಹತೆ...

Iran's 33-year-old goalkeeper Alireza Beirand

ಅಂದು ಕುರಿಗಾಯಿ ಬಾಲಕ.. ಇಂದು ವಿಶ್ವದ ಶ್ರೇಷ್ಠ ಗೋಲು ಕೀಪರ್..!

by admin
June 17, 2026
0

ಅಂದು ಕುರಿಗಾಯಿ ಬಾಲಕ.. ಇಂದು ವಿಶ್ವದ ಶ್ರೇಷ್ಠ ಗೋಲು ಕೀಪರ್..! ಸರಿ ಸುಮಾರು 20 ವರ್ಷಗಳ ಹಿಂದೆ ಆತ ಕುರಿಗಾಯಿ ಬಾಲಕ. ಅಲೆಮಾರಿ ಕುಟುಂಬದ ಈ ಹುಡುಗನಿಗೆ...

fifa world cup2026- spain vs capeverde

ಅಂಟ್ಲಾಟಿಕ್ ಮಹಾಸಾಗರವನ್ನು ದಾಟಿ ಬಂದ “ಬ್ಲೂ ಶಾರ್ಕ್ಸ್” ಮೀನುಗಳ ಫುಟ್‍ಬಾಲ್ ಪಯಣ..!

by admin
June 19, 2026
0

ಅಂಟ್ಲಾಟಿಕ್ ಮಹಾಸಾಗರವನ್ನು ದಾಟಿ ಬಂದ "ಬ್ಲೂ ಶಾರ್ಕ್ಸ್" ಮೀನುಗಳ ಫುಟ್‍ಬಾಲ್ ಪಯಣ..! ಕೇಪ್ ವರ್ಡೆ...ನಿನ್ನೆ ಮೊನ್ನೆಯ ತನಕ ಯಾರು ಕೂಡ ಕಣ್ಣೆತ್ತಿ ನೋಡದ ವಿಶ್ವ ಭೂಪಟದ ಒಂದು...

What are the special features of the Adidas Trionda ball for the 2026 FIFA World Cup?

2026ರ ಫಿಫಾ ವಿಶ್ವಕಪ್‍ನ ಅಡಿಡಾಸ್ ಟ್ರಿಯೋಂಡಾ ಚೆಂಡಿನ ವಿಶೇಷತೆಗಳೇನು..?

by admin
June 13, 2026
0

  2026ರ ಫಿಫಾ ವಿಶ್ವಕಪ್‍ನ ಅಡಿಡಾಸ್ ಟ್ರಿಯೋಂಡಾ ಚೆಂಡಿನ ವಿಶೇಷತೆಗಳೇನು..? ಫಿಫಾ ವಿಶ್ವಕಪ್.. ಇದು ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ನಡೆಯುವ ಕಾಲ್ಚೆಂಡಿನ ಮಹಾಕುಂಭಮೇಳ. ವಿಶ್ವ ಕ್ರೀಡಾಲೋಕದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram