ಪ್ರಸಕ್ತ ವಿಶ್ವಕಪ್‌ನಲ್ಲಿ ಮತ್ತೊಂದು ಅದ್ಭುತ ಪ್ರದರ್ಶನ ನೀಡಿರುವ ಅಫ್ಘಾನಿಸ್ತಾನ ಸಂಘಟಿತ ಆಟದ ಮೂಲಕ ಪಾಕಿಸ್ತಾನದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದೆ.

ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಪ್ರಮುಖ ಬ್ಯಾಟರ್‌ಗಳ ವೈಫಲ್ಯಕ್ಕೆ ಸಿಲುಕಿದ ಪಾಕಿಸ್ತಾನ ನಿಗದಿ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 282 ರನ್‌ಗಳಿಸಿತು. ಈ ಟಾರ್ಗೆಟ್ ಚೇಸ್ ಮಾಡಿದ ಅಫ್ಘಾನಿಸ್ತಾನ 49 ಓವರ್‌ಗಳಲ್ಲಿ 2 ವಿಕೆಟ್‌ಗೆ 286 ರನ್‌ಗಳಿಸುವ ಮೂಲಕ ಭರ್ಜರಿ 8 ವಿಕೆಟ್‌ಗಳ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಟೂರ್ನಿಯಲ್ಲಿ 2ನೇ ಗೆಲುವು ಸಾಧಿಸಿದ ಅಫ್ಘಾನಿಸ್ತಾನ ಸೆಮಿಫೈನಲ್ ಆಸೆಯನ್ನ ಜೀವಂತ ಇರಿಸಿಕೊಂಡಿದೆ.

ನಾಯಕ ಬಾಬರ್ ಆಸರೆ:
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಸಾಧಾರಣ ಆರಂಭ ಕಂಡಿತು. ಆರಂಭಿಕರಾಗಿ ಕಣಕ್ಕಿಳಿದ ಶಫೀಕ್(58) ರನ್‌ಗಳ ಅರ್ಧಶತಕ ಬಾರಿಸಿ ಮಿಂಚಿದರೆ. ಇಮಾಮ್-ಉಲ್-ಹಕ್(17) ಬ್ಯಾಟಿಂಗ್ ವೈಫಲ್ಯ ಕಂಡರು. ಆದರೆ 1ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಬಾಬರ್ ಆಜ಼ಂ(74) ಆಕರ್ಷಕ ಅರ್ಧಶತಕ ಸಿಡಿಸಿ ಜವಾಬ್ದಾರಿಯ ಆಟವಾಡಿದರು. ಆದರೆ ಕಳೆದ ಪಂದ್ಯಗಳಲ್ಲಿ ತಂಡಕ್ಕೆ ಆಸರೆಯಾಗಿದ್ದ ಮೊಹಮ್ಮದ್ ರಿಜ್ವಾನ್(8) ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಸೌದ್ ಶಕೀಲ್(25) ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರೆ. ಆಲ್ರೌಂಡರ್ ಶದಾಬ್ ಖಾನ್(40) ಮತ್ತು ಇಫ್ತಿಕರ್ ಅಹ್ಮದ್(40) ಉತ್ತಮ ಆಟವಾಡಿದರು. ಪರಿಣಾಮ ಪಾಕಿಸ್ತಾನ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 282 ರನ್‌ಗಳಿಸಿತು. ಅಫ್ಘಾನಿಸ್ತಾನದ ಪರ ಚೊಚ್ಚಲ ಪಂದ್ಯವಾಡಿದ ನೂರ್ ಅಹ್ಮದ್(3/49) ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸಿದರೆ. ನವೀನ್-ಉಲ್-ಹಕ್ 2 ಹಾಗೂ ನಬಿ, ಅಜ್ಮತುಲ್ಲ ತಲಾ 1 ವಿಕೆಟ್ ಪಡೆದುಕೊಂಡರು.
https://twitter.com/ICC/status/1716501527404167252
ಅಫ್ಘಾನ್ ಸಂಘಟಿತ ಬ್ಯಾಟಿಂಗ್:
ಪಾಕಿಸ್ತಾನ ನೀಡಿದ 283 ರನ್‌ಗಳ ಟಾರ್ಗೆಟ್ ಚೇಸ್ ಮಾಡಿದ ಅಫ್ಘಾನ್, ಸಂಘಿಟಿತ ಬ್ಯಾಟಿಂಗ್ ಪ್ರದರ್ಶಿಸಿತು. ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಗುರ್ಬಾಜ್(65) ಹಾಗೂ ಜದ್ರಾನ್(87) ಅದ್ಭುತ ಬ್ಯಾಟಿಂಗ್ ಮೂಲಕ 130 ರನ್‌ಗಳ ಉತ್ತಮ ಅಡಿಪಾಯ ಹಾಕಿಕೊಟ್ಟರು. ನಂತರ ಜೊತೆಯಾದ ರಹಮತ್ ಶಾ(77*) ಹಾಗೂ ನಾಯಕ ಹಶ್ಮತುಲ್ಲಾ ಶಹೀದಿ(48*) ಉತ್ತಮ ಆಟದ ಮೂಲಕ ತಂಡವನ್ನ ಗೆಲುವಿನ ದಡಮುಟ್ಟಿಸಿದರು. ಪಾಕಿಸ್ತಾನದ ಪರ ಶಹೀನ್ ಅಫ್ರಿದಿ ಹಾಗೂ ಹಸನ್ ಅಲಿ ತಲಾ 1 ವಿಕೆಟ್ ಪಡೆದರು.
ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ ಪ್ರಸಕ್ತ ವಿಶ್ವಕಪ್‌ನಲ್ಲಿ 2ನೇ ಹಾಗೂ ಪಾಕಿಸ್ತಾನದ ವಿರುದ್ಧ ಮೊದಲ ಗೆಲುವು ಸಾಧಿಸಿತು. ಅಲ್ಲದೇ ಈ ಜಯದ ಮೂಲಕ ಅಫ್ಘಾನಿಸ್ತಾನ ವಿಶ್ವಕಪ್ ಸೆಮಿಫೈನಲ್ ರೇಸ್‌ನಲ್ಲಿ ಜೀವಂತ ಇದ್ದರೆ, ಹ್ಯಾಟ್ರಿಕ್ ಸೋಲು ಕಂಡ ಪಾಕಿಸ್ತಾನದ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣಗೊಂಡಿದೆ.
PAK v AFG, CWC 2023, Pakistan, Afghanistan, ODI Cricket, World Cup








