ಏಕದಿನ ವಿಶ್ವಕಪ್‌ನಲ್ಲಿ ಸತತ ಆರನೇ ಗೆಲುವಿನೊಂದಿಗೆ ಜಯದ ಅಲೆಯಲ್ಲಿ ತೇಲುತ್ತಿರುವ ಟೀಂ ಇಂಡಿಯಾ, ಆ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿ಼ಲೆಂಡ್ ತಂಡದ ದಾಖಲೆ ಮುರಿದಿದೆ.
ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನ ಮಣಿಸಿದ ಭಾರತ, ಆ ಮೂಲಕ ಟೂರ್ನಿಯಲ್ಲಿ ತನ್ನ 6ನೇ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಏಕದಿನ ವಿಶ್ವಕಪ್‌ನಲ್ಲಿ 59ನೇ ಗೆಲುವು ಸಾಧಿಸಿದ ಟೀಂ ಇಂಡಿಯಾ, ಗೆಲುವಿನ ಲೆಕ್ಕಾಚಾರದಲ್ಲಿ ನ್ಯೂಜಿ಼ಲೆಂಡ್ ತಂಡವನ್ನ ಹಿಂದಿಕ್ಕಿದೆ. ಏಕದಿನ ವಿಶ್ವಕಪ್‌ನಲ್ಲಿ ಈವರೆಗೂ 90 ಪಂದ್ಯಗಳನ್ನ ಆಡಿರುವ ಭಾರತ, 59 ಪಂದ್ಯಗಳಲ್ಲಿ ಜಯದ ನಗೆಬೀರಿದ್ದರೆ. 95 ಪಂದ್ಯಗಳನ್ನ ಆಡಿರುವ ಕಿವೀಸ್ ಈವರೆಗೂ 58 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ.

ಉಳಿದಂತೆ ಏಕದಿನ ವಿಶ್ವಕಪ್‌ನಲ್ಲಿ ಅತ್ಯಧಿಕ ಗೆಲುವು ಸಾಧಿಸಿರುವ ತಂಡಗಳಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ. ಏಕದಿನ ವಿಶ್ವಕಪ್‌ನ ಐದು ಬಾರಿಯ ಚಾಂಪಿಯನ್ ಎಂಬ ಹೆಗ್ಗಳಿಕೆ ಪಡೆದಿರುವ ಆಸೀಸ್ ಪಡೆ ವಿಶ್ವಕಪ್‌ನಲ್ಲಿ 100 ಪಂದ್ಯಗಳನ್ನ ಆಡಿದ್ದು, ಇದರಲ್ಲಿ 73 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಮಿಂಚಿದೆ. ಆ ಮೂಲಕ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ 74.24ರ ಗೆಲುವಿನ ಸರಾಸರಿ ಹೊಂದಿದ್ದರೆ, ಟೀಂ ಇಂಡಿಯಾ ಶೇ.67.04ರ ಗೆಲುವಿನ ಸರಾಸರಿ ಹೊಂದಿದೆ. ಉಳಿದಂತೆ ನ್ಯೂಜಿ಼ಲೆಂಡ್(62.23%), ಸೌತ್ ಆಫ್ರಿಕಾ(63.76%) ಗೆಲುವಿನ ಸರಾಸರಿ ಹೊಂದುವ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ಶೇ.60ಕ್ಕೂ ಹೆಚ್ಚಿನ ಗೆಲುವಿನ ಸರಾಸರಿ ಹೊಂದಿರುವ ತಂಡಗಳಾಗಿದೆ. ಅಂತೆಯೇ ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ತಂಡಗಳಲ್ಲಿ ಟೀಂ ಇಂಡಿಯಾ 2ನೇ ಸ್ಥಾನಕ್ಕೇರಿದೆ. ಈವರೆಗೂ ಆಡಿರುವ 1047 ಏಕದಿನ ಪಂದ್ಯಗಳಲ್ಲಿ 553ನೇ ಗೆಲುವು ಸಾಧಿಸಿದೆ.
CWC 2023, Team India, ODI Cricket, Most Wins, World Cup








