ವಿಜಯನಗರ: ಅವಧಿ ಮುಗಿಯುವವರೆಗೂ ಐದು ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಮೂಲಕ ಎಲ್ಲ ಊಹಾಪೋಹಗಳಿಗೆ ಅವರು ಹೊಸಪೇಟೆಯಲ್ಲಿ ತೆರೆ ಎಳೆದಿದ್ದಾರೆ. ನಾನು ಸದ್ಯ ಮುಖ್ಯಮಂತ್ರಿ, ಮುಂದಿನ 5 ವರ್ಷ ನಮ್ಮ ಸರ್ಕಾರವೇ ಇರುತ್ತದೆ. ನಾನೇ ಸಿಎಂ ಆಗಿ ಇರುತ್ತೇನೆ. ಡಿಸಿಎಂ ವಿಚಾರ ಹೈಕಮಾಂಡ್ ಗೆ ಬಿಟ್ಟ ವಿಚಾರ. ನಮ್ಮ ನ್ಯಾಷನಲ್ ಪಾರ್ಟಿಯಾಗಿರುವುದರಿಂದಾಗಿ ಹೈಕಮಾಂಡ್ ಜೊತೆ ಚರ್ಚಿಸದೆ ಏನೂ ತೀರ್ಮಾನ ಕೈಗೊಳ್ಳಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಸರ್ಕಾರ ಬೀಳುತ್ತದೆ ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿರುವ ಅವರು, ಅವರ ಪಕ್ಷ ಸೋತಿದ್ದು, ಕೆಲಸ ಇಲ್ಲದ ಕಾರಣ ಹೀಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ರಾಜ್ಯದ ಜನ ನಮಗೆ 136 ಸೀಟು ನೀಡಿ ಗೆಲ್ಲಿಸಿದ್ದಾರೆ. 5 ವರ್ಷ ಸುಭದ್ರ ಸರ್ಕಾರ ಕೊಡುತ್ತೇವೆ. ಹೀಗಾಗಿ ಬಿಜೆಪಿ ಭ್ರಮ ನಿರಸಗೊಂಡಿದೆ. ಈ ನಿಟ್ಟಿನಲ್ಲಿಯೇ ಆಪರೇಷನ್ ಕಮಲಕ್ಕೆ ಕೈ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.








