ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಂತೆ ಪಟ್ರೋಲ್ -ಡೀಸೆಲ್ ದರ ಕಡಿಮೆ ಆಗುವು ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಸತತ 20 ದಿನಗಳಿಂದ ಒಂದೇ ಸಮನೇ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ ಆಗುತ್ತಲೇ ಇದೆ.
ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಗೆ 21 ಪೈಸೆ ಹಾಗೂ ಡಿಸೇಲ್ ನ ಬೆಲೆಯಲ್ಲಿ 17 ಪೈಸೆಯನ್ನು ಹೆಚ್ಚಿಸಿವೆ. ಪರಿಣಾಮ ಪೆಟ್ರೋಲ್ ನ ಬೆಲೆ ದೆಹಲಿಯಲ್ಲಿ ಲೀಟರ್ ಗೆ 80.13 ರೂಪಾಯಿ ಹಾಗೂ ಡೀಸೆಲ್ ಗೆ 80.19 ರೂಪಾಯಿಯಷ್ಟಿದೆ. ಮುಂದಿನ ದಿನಗಳಲ್ಲೂ ಕೂಡಾ ಇಂಧನ ಬೆಲೆ ಏರುಗತಿಯಲ್ಲಿ ಸಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ
ಜನಪರ ಕಾಳಜಿ ಮರೆತ ಕೇಂದ್ರ
ಕೊರೊನಾ ದಿಂದಾಗಿ ಈಗಾಗಲೇ ದೇಶದ ಜನರು ತತ್ತರಿಸಿ ಹೋಗಿದ್ದಾರೆ. ಈ ಸಮಯದಲ್ಲಿ ಜನರಿಗೆ ಧೈರ್ಯ ತುಂಬಬೇಕಿದ್ದ ಸರ್ಕಾರವೇ ಜನಪರ ಕಾಳಜಿ ಮರೆತಂತಿದೆ. ಮಾರ್ಚ್ – ಏಪ್ರಿಲ್ ನಲ್ಲಿ ಕಚ್ಚಾತೈಲ ಬೆಲೆ ಪಾತಾಳಕ್ಕಿಳಿದರೂ ದರ ಇಳಿಸುವ ಕ್ರಮಕ್ಕೆ ತೈಲ ಕಂಪನಿಗಳು ಮುಂದಾಗದೇ ಗ್ರಾಹಕರ ಜೀವ ಹಿಂಡುತ್ತಿವೆ. ಇದು ಒಂದು ಕಡೆಯಾದ್ರೆ, ಬಡ ಜನರನ್ನು ಮರೆತಂತೆ ವರ್ತಿಸುತ್ತಿರುವ ಕೇಂದ್ರ ಸರ್ಕಾರ, ಬಡ ವಾಹನ ಸವಾರರ ಮೇಲೆ ಸವಾರಿ ಮಾಡುತ್ತಿದೆ.








