ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡಲು ಒಂದೇ ದಿನ ಮಾತ್ರ ಬಾಕಿಯಿದೆ. ಭಾರತದ ಪ್ರವಾಸದ ಉತ್ಸಾಹದಲ್ಲಿರುವ ಟ್ರಂಪ್ ವಿಡಿಯೋವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು, ಭಾರತದ ಶ್ರೇಷ್ಠ ಸ್ನೇಹಿತರೊಂದಿಗೆ ಸದಾ ಜೊತೆಗಿರಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಎಸ್‍ಒಐ ಎಂಬ ಟ್ವಿಟರ್ ನಲ್ಲಿ ಬಾಹುಬಲಿ ಚಿತ್ರದ ವಿಡಿಯೋವೊಂದನ್ನು ಎಡಿಟ್ ಮಾಡಿ ಪೋಸ್ಟ್ ಮಾಡಲಾಗಿತ್ತು. ವಿಡಿಯೋದಲ್ಲಿ ಪ್ರಭಾಸ್ ಮುಖಕ್ಕೆ ಟ್ರಂಪ್, ಟ್ರಂಪ್ ಪುತ್ರಿ ಇವಾಂಕಾ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್ ಮುಖವನ್ನು ಜೋಡಿಸಿ ಎಡಿಟ್ ಮಾಡಲಾಗಿದೆ. ಹಾಗೇ ಪ್ರಧಾನಿ ಮೋದಿ ಹಾಗೂ ಅವರ ಪತ್ನಿ ಜಶೋಧಾ ಬೆನ್ ಮುಖವನ್ನೂ ಕೂಡ ಜೋಡಿಸಿ ಎಡಿಟ್ ಮಾಡಲಾಗಿದೆ. ಇದನ್ನ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಟ್ರಂಪ್ ಭಾರತದ ಸ್ನೇಹವನ್ನ ಬಯಸಿ ಟ್ವೀಟ್ ಮಾಡಿದ್ದಾರೆ.
ಈ ವಿಡಿಯೋವನ್ನ ಟ್ರಂಪ್ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಸಕತ್ ವೈರಲ್ ಆಗಿದೆ. ಈ ವಿಡಿಯೋ 54 ಸಾವಿರ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 15.1 ಸಾವಿರ ಮಂದಿ ರೀಟ್ವೀಟ್ ಮಾಡಿಕೊಂಡಿದ್ದಾರೆ. ಇದಕ್ಕೆ 6.7 ಸಾವಿರ ಪ್ರತಿಕ್ರಿಯೆಗಳೂ ಬಂದಿವೆ.








