ಲಂಡನ್ನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ತೀವ್ರ ಪ್ರಕ್ಷುಬ್ಧತೆ ಉಂಟಾದ ಪರಿಣಾಮ ಪ್ರಯಾಣಿಕರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಅಲ್ಲದೇ, ಘಟನೆಯಲ್ಲಿ 30 ಜನ ಗಾಯಗೊಂಡಿದ್ದಾರೆ. ಸದ್ಯ ವಿಮಾನ ಬ್ಯಾಂಕಾಕ್ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಸೋಮವಾರ ಲಂಡನ್ನ ಹೀಥ್ರೂ ವಿಮಾನ ನಿಲ್ದಾಣದಿಂದ ಸಿಂಗಾಪುರಕ್ಕೆ ಹೊರಟಿದ್ದ SQ321 ವಿಮಾನವು ಮಾರ್ಗ ಮಧ್ಯದಲ್ಲಿ ತೀವ್ರ ಪ್ರಕ್ಷುಬ್ಧತೆ ಎದುರಿಸಿದೆ. ವಿಮಾನ ಪ್ರಯಾಣಿಸುವ ವೇಳೆ ವಿಮಾನ ಗಾಳಿಗೆ ತೀವ್ರವಾಗಿ ಅಲುಗಾಡಿದೆ.
ವಿಮಾನದಲ್ಲಿ 211 ಪ್ರಯಾಣಿಕರು ಮತ್ತು 18 ಸಿಬ್ಬಂದಿ ಇದ್ದರು ಎಂದು ಹೇಳಲಾಗಿದೆ. ಇನ್ನು ಸಾವನ್ನಪ್ಪಿದ ಪ್ರಯಾಣಿಕರಿಗೆ ಸಂತಾಪ ಸೂಚಿಸಿದ್ದು, ಅವರ ಕುಟುಂಬಕ್ಕೆ ವಿಷಯವನ್ನು ತಿಳಿಸಿದೆ.