ಬೆಂಗಳೂರು: ಗಂಡನ (Husband) ಅಕ್ರಮ ಸಂಬಂಧಕ್ಕೆ (Illicit Relationship) ನೊಂದ ಪತ್ನಿ (Wife) ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಈ ಘಟನೆ ಇಲ್ಲಿ ಅಂದ್ರಹಳ್ಳಿಯಲ್ಲಿ ನಡೆದಿದೆ. ಮಾನಸ(25)ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ. ಗಂಡನ ಮನೆಯಲ್ಲಿ ವಾಸವಿದ್ದ ಮಾನಸ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಫೋನ್ ನಲ್ಲಿ ವಿಡಿಯೋ ಮಾಡಿದ್ದಾರೆ.
ಕಳೆದ 6 ವರ್ಷಗಳ ಹಿಂದೆ ದಿಲೀಪ್ ಜೊತೆ ಮಾನಸ ವಿವಾಹ ನಡೆದಿತ್ತು. ಈ ದಂಪತಿಗೆ 5 ವರ್ಷದ ಮುದ್ದಾದ ಮಗು ಕೂಡ ಇದೆ. ಸಂಸಾರ ಕೂಡ ಸುಖ- ಸಂತೋಷದಿಂದ ಕೂಡಿತ್ತು. ಆದರೆ, ಅದ್ಯಾಕೋ ಪತಿ ದಿಲೀಪ್ ಗೆ ಇತ್ತೀಚೆಗೆ ಬೇರೊಬ್ಬ ಮಹಿಳೆಯ ಚಪಲ ಶುರುವಾಗಿದೆ. ಈ ವಿಚಾರ ಪತ್ನಿಗೂ ತಿಳಿದಿದೆ. ಈ ವಿಷಯವಾಗಿ ಇಬ್ಬರ ಮಧ್ಯೆ ಆಗಾಗ ಜಗಳ ನಡೆದಿದೆ. ಆದರೂ ಎಷ್ಟು ಹೇಳಿದರೂ ಪತಿ ಮಾತ್ರ ಕೇಳಿಲ್ಲ. ಈ ವಿಚಾರಕ್ಕೆ ಬೇಸತ್ತು ಮಾನಸ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಕುರಿತು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.








