ಚಿಕ್ಕಮಗಳೂರು: ಸರ್ಕಾರದ ಹಣ ಅಧಿಕಾರಿಯ ಪ್ರಿಯತಮೆಯ ಖಾತೆಗೆ ಜಮಾ ಮಾಡಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನಲ್ಲಿ ನಡೆದಿದೆ. ಆನ್ ಲೈನ್ ಟಿಕೆಟ್ ಪೋರ್ಜರಿ ಮಾಡುವ ಮೂಲಕ 9 ಸಾವಿರ ರೂ. ಸರ್ಕಾರದ ಹಣವನ್ನು ಪ್ರಿಯತಮೆಯ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಳಸ ಅರಣ್ಯ ಇಲಾಖೆಯ ಡಿ.ಆರ್.ಎಫ್.ಓ. ಚಂದನ್ ಗೌಡರನ್ನು ಅಮಾನತು ಮಾಡಿ ಕೊಪ್ಪ ಡಿ.ಎಫ್.ಓ. ಉಪೇಂದ್ರ ಪ್ರತಾಪ್ ಸಿಂಗ್ ಆದೇಶಿಸಿದ್ದಾರೆ.
ರಾಣಿಝರಿ ಜಲಪಾತ, ಬಂಡಾಜೆ ಫಾಲ್ಸ್ ಹತ್ತಿರ ಟಿಕೆಟ್ ಗೋಲ್ಮಾಲ್ ಪ್ರಕರಣ ನಡೆದಿದೆ. ಬಂಡಾಜೆ ಫಾಲ್ಸ್ ಹತ್ತಿರ 200ಕ್ಕೂ ಅಧಿಕ ಜನರು ಬಂಡಾಜೆ ಫಾಲ್ಸ್ ನೋಡಲು ತೆರಳಿದ್ದರು. ಈ ವೇಳೆ ಪೊಲೀಸರಿಗೆ ಅವರೆಲ್ಲ ಸಿಕ್ಕಿ ಬಿದ್ದಿದ್ದಾರೆ. ವಿಚಾರಣೆ ನಡೆಸಿದಾಗ ತಿಂಗಳ ಆನ್‌ಲೈನ್ ಟಿಕೆಟ್ ಬುಕ್ಕಿಂಗ್, ಪ್ರವಾಸಿಗರ ನೋಂದಣಿ ಪುಸ್ತಕಕ್ಕೂ ತಾಳೆ ಆಗುತ್ತಿರಲಿಲ್ಲ. ಪೊಲೀಸರು ಪ್ರವಾಸಿಗರನ್ನು ವಿಚಾರಣೆ ನಡೆಸಿದಾಗ ಈ ಅಕ್ರಮ ಬಯಲಾಗಿದೆ.
ಸದ್ಯ ಇಲಾಖೆಯ ಲಕ್ಷಗಟ್ಟಲೇ ಹಣ ಮೋನಿಕಾ ಎಂಬ ಯುವತಿಯ ಖಾತೆಗೆ ಜಮಾ ಆಗಿದ್ದು, ಬೆಳಕಿಗೆ ಬಂದಿದೆ. ಈ ಕುರಿತು ಅಧಿಕಾರಿ ಅಮಾನತು ಮಾಡಿ ತನಿಖೆ ನಡೆಸಲಾಗುತ್ತಿದೆ.








