ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ (Paralympics 2024) ಭಾರತೀಯ ಕ್ರೀಡಾಪಟುಗಳು ಪದಕ ಬೇಟೆ ಮುಂದುವರೆಸಿದ್ದಾರೆ. ಬ್ಯಾಡ್ಮಿಂಟನ್ ನಲ್ಲಿ ಮಹಿಳೆಯರ ಸಿಂಗಲ್ಸ್ ಎಸ್ಯು5 ವಿಭಾಗದಲ್ಲಿ ಭಾರತದ ಮನೀಶಾ ರಾಮದಾಸ್ (Manisha Ramadass) ಕಂಚಿನ ಪದಕ ಗೆಲ್ಲುವುದರ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಲಾ ಚಾಪೆಲ್ಲೆ ಅರೆನಾ ಕೋರ್ಟ್ 3 ರಲ್ಲಿ ಡೆನ್ಮಾರ್ಕ್ನ ಕ್ಯಾಥರೀನ್ ರೋಸೆಂಗ್ರೆನ್ ಅವರನ್ನು 25 ನಿಮಿಷಗಳಲ್ಲಿ 21-12, 21-8 ಸೆಟ್ ಗಳಿಂದ ಮಣಿಸುವ ಮೂಲಕ ಕಂಚಿಗೆ ಕೊರಳೊಡ್ಡಿದ್ದಾರೆ.
ಮೊದಲ ಸುತ್ತಿನಲ್ಲಿ ಕೇವಲ 13 ನಿಮಿಷಗಳಲ್ಲಿ 21-12 ಅಂತರದಲ್ಲಿ ಮುನ್ನಡೆ ಸಾಧಿಸಿದ್ದ ಮನೀಶಾ, 2ನೇ ಸೆಟ್ನಲ್ಲಿ ಕೇವಲ 12 ನಿಮಿಷಗಳಲ್ಲಿ 21-8 ಪಾಯಿಂಟ್ಗಳ ಅಂತರದಲ್ಲಿ ಸೋಲಿಸಿ ಪದಕ ಗೆದ್ದಿದ್ದಾರೆ. ಈ ಗೆಲುವಿನ ಮೂಲಕ ಪ್ಯಾರಾಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಮನೀಶಾ ಪಾತ್ರರಾಗಿದ್ದಾರೆ.
ಮನೀಶಾಗೆ ಚಿನ್ನದ ಪದಕದ ಪಂದ್ಯದಲ್ಲಿ ಸ್ಪರ್ಧಿಸುವ ಅವಕಾಶವಿತ್ತು. ಆದರೆ ಸೆಮಿಸ್ನಲ್ಲಿ ತುಳಸಿಮತಿ ಮುರುಗೇಶನ್ ವಿರುದ್ಧ ಸೋತು ಕಂಚಿನ ಪದಕ ಗೆದ್ದಿದ್ದಾರೆ.