ಕುವೈಟ್, ಜುಲೈ 7: ಕುವೈಟ್ ನಲ್ಲಿ ಹೊಸ ವಿಧೇಯಕದಿಂದ 8 ಲಕ್ಷ ಭಾರತೀಯರು ಕೆಲಸ ಕಳೆದು ಕೊಳ್ಳುವ ಭೀತಿಗೆ ಸಿಲುಕಿಕೊಂಡಿದ್ದಾರೆ.
ಸ್ಥಳೀಯರಿಗೆ ಆದ್ಯತೆ ನೀಡಲು ಕುವೈಟ್ ಸರ್ಕಾರ ನಿರ್ಧಾರಿಸಿದ್ದು, ಇದರಿಂದ ಸುಮಾರು 8 ಲಕ್ಷ ಭಾರತೀಯರು ತಮ್ಮ ಕೆಲಸವನ್ನು ಕಳೆದುಕೊಳ್ಳಲಿದ್ದಾರೆ.
ಕುವೈಟ್ ಸರ್ಕಾರ ನಾನಾ ರಂಗಗಳಲ್ಲಿ ದುಡಿಯುತ್ತಿರುವ ವಿದೇಶಿಯರ ಸಂಖ್ಯೆಯನ್ನು ಕಡಿತಗೊಳಿಸಲು ನಿರ್ಧರಿಸಿದ್ದು, ಈ ಸಂಬಂಧ ಅಲ್ಲಿನ ಸರ್ಕಾರ ಮಂಡಿಸಿದ್ದ ವಲಸಿಗರ ಮೀಸಲು ವಿಧೇಯಕವನ್ನು ಕುವೈಟ್ ಸಂಸತ್ತು, ರಾಷ್ಟ್ರೀಯ ಅಸೆಂಬ್ಲಿ ಸಮಿತಿ ಅಂಗೀಕರಿಸಿದೆ. ಕುವೈಟ್ ನಲ್ಲಿ ಸುಮಾರು 28 ಸಾವಿರ ಭಾರತೀಯರು ಶುಶ್ರೂಷಕಿ, ಎಂಜಿನಿಯರ್ ಮತ್ತು ರಾಷ್ಟ್ರೀಯ ಆಯಿಲ್ ಕಂಪೆನಿಗಳಲ್ಲಿ ಉದ್ಯೋಗಿಗಳಾಗಿದ್ದರೆ, 5.23 ಲಕ್ಷ ಜನರು ಖಾಸಗಿ ಕಂಪನಿ ಉದ್ಯೋಗಿಗಳಾಗಿದ್ದಾರೆ. ಇತರ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯರು ಸೇರಿದಂತೆ ಒಟ್ಟಾರೆ 10.45 ಲಕ್ಷ ಮಂದಿ ಕುವೈಟ್ ನಲ್ಲಿ ದುಡಿಯುತ್ತಿದ್ದಾರೆ.
ಇದೀಗ ಕುವೈಟ್ ನಲ್ಲಿ ದುಡಿಯುವ ವಿದೇಶಿಗರ ಸಂಖ್ಯೆಗೆ ವಿಧೇಯಕ ಮಿತಿ ಹೇರಿದ್ದು, ಅದರಂತೆ ಭಾರತೀಯರ ಕೋಟಾವನ್ನು ಶೇಕಡಾ 15ಕ್ಕೆ ನಿಗದಿಪಡಿಸಿದೆ. ಇದರಿಂದಾಗಿ ಸುಮಾರು 8 ಲಕ್ಷ ಭಾರತೀಯರು ಕೆಲಸ ಕಳೆದುಕೊಳ್ಳಬಹುದೆಂದು ಅಂದಾಜಿಸಲಾಗಿದೆ.
ಸೆ. 26ಕ್ಕೆ ‘ಪರಮ್ ವಿಹಾರ’ದ ವೀಣಾ ನಾದ, ಒಡಿಸ್ಸಿ ನೃತ್ಯ ವೈಭವ
ಸೆ.26ಕ್ಕೆ 'ಪರಮ್ ವಿಹಾರ'ದ ವೀಣಾ ನಾದ, ಒಡಿಸ್ಸಿ ನೃತ್ಯ ವೈಭವ • ಬನಶಂಕರಿಯಲ್ಲಿ ಕಾರ್ಯಕ್ರಮ ಪರಮ್ ವಿಹಾರದ 16ನೇ ಆವೃತ್ತಿ ಕಾರ್ಯಕ್ರಮ • ಬನಶಂಕರಿಯ ಸುಚಿತ್ರಾ ಸಭಾಂಗಣದಲ್ಲಿ...








