ಕುವೈಟ್, ಜುಲೈ 7: ಕುವೈಟ್ ನಲ್ಲಿ ಹೊಸ ವಿಧೇಯಕದಿಂದ 8 ಲಕ್ಷ ಭಾರತೀಯರು ಕೆಲಸ ಕಳೆದು ಕೊಳ್ಳುವ ಭೀತಿಗೆ ಸಿಲುಕಿಕೊಂಡಿದ್ದಾರೆ.
ಸ್ಥಳೀಯರಿಗೆ ಆದ್ಯತೆ ನೀಡಲು ಕುವೈಟ್ ಸರ್ಕಾರ ನಿರ್ಧಾರಿಸಿದ್ದು, ಇದರಿಂದ ಸುಮಾರು 8 ಲಕ್ಷ ಭಾರತೀಯರು ತಮ್ಮ ಕೆಲಸವನ್ನು ಕಳೆದುಕೊಳ್ಳಲಿದ್ದಾರೆ.
ಕುವೈಟ್ ಸರ್ಕಾರ ನಾನಾ ರಂಗಗಳಲ್ಲಿ ದುಡಿಯುತ್ತಿರುವ ವಿದೇಶಿಯರ ಸಂಖ್ಯೆಯನ್ನು ಕಡಿತಗೊಳಿಸಲು ನಿರ್ಧರಿಸಿದ್ದು, ಈ ಸಂಬಂಧ ಅಲ್ಲಿನ ಸರ್ಕಾರ ಮಂಡಿಸಿದ್ದ ವಲಸಿಗರ ಮೀಸಲು ವಿಧೇಯಕವನ್ನು ಕುವೈಟ್ ಸಂಸತ್ತು, ರಾಷ್ಟ್ರೀಯ ಅಸೆಂಬ್ಲಿ ಸಮಿತಿ ಅಂಗೀಕರಿಸಿದೆ. ಕುವೈಟ್ ನಲ್ಲಿ ಸುಮಾರು 28 ಸಾವಿರ ಭಾರತೀಯರು ಶುಶ್ರೂಷಕಿ, ಎಂಜಿನಿಯರ್ ಮತ್ತು ರಾಷ್ಟ್ರೀಯ ಆಯಿಲ್ ಕಂಪೆನಿಗಳಲ್ಲಿ ಉದ್ಯೋಗಿಗಳಾಗಿದ್ದರೆ, 5.23 ಲಕ್ಷ ಜನರು ಖಾಸಗಿ ಕಂಪನಿ ಉದ್ಯೋಗಿಗಳಾಗಿದ್ದಾರೆ. ಇತರ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯರು ಸೇರಿದಂತೆ ಒಟ್ಟಾರೆ 10.45 ಲಕ್ಷ ಮಂದಿ ಕುವೈಟ್ ನಲ್ಲಿ ದುಡಿಯುತ್ತಿದ್ದಾರೆ.
ಇದೀಗ ಕುವೈಟ್ ನಲ್ಲಿ ದುಡಿಯುವ ವಿದೇಶಿಗರ ಸಂಖ್ಯೆಗೆ ವಿಧೇಯಕ ಮಿತಿ ಹೇರಿದ್ದು, ಅದರಂತೆ ಭಾರತೀಯರ ಕೋಟಾವನ್ನು ಶೇಕಡಾ 15ಕ್ಕೆ ನಿಗದಿಪಡಿಸಿದೆ. ಇದರಿಂದಾಗಿ ಸುಮಾರು 8 ಲಕ್ಷ ಭಾರತೀಯರು ಕೆಲಸ ಕಳೆದುಕೊಳ್ಳಬಹುದೆಂದು ಅಂದಾಜಿಸಲಾಗಿದೆ.
444 ಕಿ.ಮೀ ವಿಸ್ತೀರ್ಣ, 1.5 ಲಕ್ಷ ಜನಸಂಖ್ಯೆ.. ಫಿಫಾ ವಿಶ್ವಕಪ್‍ಗೆ ಅರ್ಹತೆ ಪಡೆದ ಪುಟ್ಟ ದೇಶದ ರೋಚಕ ಫುಟ್‍ಬಾಲ್ ಸಾಧನೆಯ ಸ್ಟೋರಿ..!
ಕ್ಯುರಾಸಾವೋ.. ಬಹುತೇಕರಿಗೆ ಈ ಹೆಸರಿನ ಒಂದು ರಾಷ್ಟ್ರವಿದೆ ಅಂತ ಗೊತ್ತಿರಲಿಕ್ಕಿಲ್ಲ. ಆದ್ರೆ ಈ ದೇಶ ಈಗ 2026ರ ಫಿಫಾ ವಿಶ್ವಕಪ್ ಟೂರ್ನಿಯಿಂದ ಚಾಲ್ತಿಗೆ ಬಂದಿದೆ. ಹೌದು. ಕ್ಯುರಾಸಾವೋ...








