ಕಾರವಾರ: ಕ್ರಿಸ್‌ಮಸ್ (Christmas) ಸೇರಿದಂತೆ ಸಾಲು ಸಾಲು ರಜೆ (Holiday)ಗಳು ಬರುತ್ತಿವೆ. ಹೀಗಾಗಿ ಪ್ರವಾಸಿಗರು (Tourist) ಮುರುಡೇಶ್ವರಕ್ಕೆ (Murudeshwar) ಬರುತ್ತಿದ್ದು, ಸಮುದ್ರ ಭಾಗದಲ್ಲಿ ಜಲಸಾಹಸ ಕ್ರೀಡೆಗಳು ಬಂದ್ ಆಗಿರುವುದರಿಂದ ನಿರಾಸೆಯಿಂದ ಮರಳುತ್ತಿದ್ದಾರೆ.
ಲೈಫ್ ಗಾರ್ಡ್, ಭದ್ರತೆ ವ್ಯವಸ್ಥೆ ಕಲ್ಪಿಸಿ ತಕ್ಷಣ ಪ್ರವಾಸಿಗರಿಗೆ ಕಡಲ ತೀರ ಭಾಗಕ್ಕೆ ಪ್ರವೇಶ ನೀಡಬೇಕು ಎಂದು ಪ್ರವಾಸೋದ್ಯಮ ನಂಬಿದ ಸ್ಥಳೀಯ ಉದ್ಯಮಿಗಳು ಜಿಲ್ಲಾಡಳಿತಕ್ಕೆ ಮನವಿ ಸಹ ನೀಡಿದ್ದರು. ಶೀಘ್ರದಲ್ಲೇ ಮುರುಡೇಶ್ವರ ಕಡಲ ತೀರದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿ ಅವಕಾಶ ಮಾಡಿಕೊಡುವುದಾಗಿ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಮಾಹಿತಿ ನೀಡಿದ್ದಾರೆ.
ಮುರುಡೇಶ್ವರದಲ್ಲಿ ಪ್ರವಾಸಿಗರ ರಕ್ಷಣೆಗಾಗಿ ಲೈಫ್ ಗಾರ್ಡ್‌ಗಳನ್ನು ನೇಮಿಸಲಾಗಿದೆ. ಎಸಿ ನೇತೃತ್ವದ ಸಮಿತಿ ಸಹ ಜಾರಿಗೆ ತರಲಾಗಿದೆ. ಬುಧವಾರದಂದು ಕಡಲ ತೀರ ಭಾಗದಲ್ಲಿ ಸುರಕ್ಷಿತ ಮತ್ತು ಅಪಾಯಕಾರಿ ವಲಯವನ್ನು ಗುರುತಿಸಿ ರೋಪ್ ಅಳವಡಿಸಲಾಗುತ್ತಿದೆ. ಹೀಗಾಗಿ ಜನರಿಗೆ ಕಡಲ ತೀರದಲ್ಲಿ ಇಳಿಯಲು ಅವಕಾಶ ನೀಡುತ್ತಿಲ್ಲ. ಹೀಗಾಗಿ ಪ್ರವಾಸಿಗರು ಬೇಸರದಿಂದ ಹೊರ ಹೋಗುತ್ತಿದ್ದಾರೆ..
ಡಿಕೆಶಿ ಮನೆಗೆ ಸತೀಶ್ ಜಾರಕಿಹೊಳಿ ಎಂಟ್ರಿ! ಸಾಹುಕಾರ್ ಎಸೆದ ಡಬಲ್ ಕಾರ್ಡ್ ಹಿಂದೆ ಅಡಗಿದೆಯಾ ಬಿಗ್ ಪ್ಲಾನ್?
ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಈಗ ಸಂಪುಟ ಕಸರತ್ತಿನ ಸುನಾಮಿ ಎದ್ದಿದೆ. ದೆಹಲಿಯಿಂದ ಸಚಿವರ ಪಟ್ಟಿಯನ್ನ ಹೊತ್ತು ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರಿಗೆ ಕಾಲಿಡುತ್ತಿದ್ದಂತೆ, ಅವರ ಸದಾಶಿವನಗರದ ನಿವಾಸ...








