ಕಲಬುರಗಿ: ಗುತ್ತಿಗೆದಾರ ಸಚಿನ್ ಪ್ರಕರಣಕ್ಕೆ (Sachin Panchal Case) ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ಆರೋಪಿ ರಾಜು ಕಪನೂರ್ ಸಹೋದರ ಪ್ರಕಾಶ್ ಕಪನೂರ್ ಕೆಲವು ದಾಖಲೆ ಬಿಡುಗಡೆ ಮಾಡಿದ್ದಾರೆ.
ಸಚಿನ್ RWSSDಯಲ್ಲಿ 12 ಕೋಟಿ ರೂ. ಟೆಂಡರ್ ಪಡೆಯಲು ಇಎಂಡಿ ಹಣ ಕಟ್ಟುವುದಕ್ಕೆ ಕೈ ಮುಖಂಡ (Congress Leader) ಆರೋಪಿ ಸ್ಥಾನದಲ್ಲಿರುವ ರಾಜು ಕಪನೂರ್ ಸ್ನೇಹಿತರಾದ ಮನೋಜ್, ಪ್ರತಾಪ್ ಧೀರ್ ಅವರಿಂದ ಬ್ಯಾಂಕ್ ಮೂಲಕ 58.77 ಲಕ್ಷ ರೂ. ಹಣ ಹಾಕಿಸಿಕೊಂಡಿದ್ದ. ಹೀಗಾಗಿ ಇದಕ್ಕೆ ಸಂಬಂಧಿಸಿದ ಬ್ಯಾಂಕ್ ದಾಖಲೆಗಳನ್ನು (Bank Documents) ಕಲಬುರಗಿ ಮಹಾನಗರ ಪಾಲಿಕೆ ಸದಸ್ಯ ಪ್ರಕಾಶ್ ಕಪನೂರ್ ಬಿಡುಗಡೆ ಮಾಡಿದ್ದಾರೆ. ನಮ್ಮ ಸಹೋದರ ಆತನಿಂದ ಹಣ ಪಡೆದಿಲ್ಲ ಖುದ್ದು ಮೃತ ಸಚಿನ್ ಟೆಂಡರ್ ಆಸೆ ತೋರಿಸಿ ನಮ್ಮ ಸಹೋದರನ ಸ್ನೇಹಿತನಿಂದ 60 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿರುವುದಾಗಿ ತಿಳಿಸಿದ್ದಾರೆ.
ಸಚಿನ್ ಆತ್ಮಹತ್ಯೆ ಸುತ್ತ ಹಲವು ಅನುಮಾನ ವ್ಯಕ್ತಪಡಿಸಿರುವ ಪ್ರಕಾಶ್ ಕಪನೂರ್, ಸಚಿನ್ ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಫೋಟೋ ತೆಗೆದಿದ್ದು, ಆ ಫೋಟೋದಲ್ಲಿ ಮೂರು ಹೆಬ್ಬೆರಳ ಗುರುತುಗಳು ಕಂಡು ಬಂದಿವೆ. ಸಚಿನ್ ಜೊತೆಗೆ ಆ ಡೆತ್ ನೋಟ್ ಬರೆಯುವಾಗ ಹಾಗೂ ಫೋಟೋ ತೆಗೆಯುವಾಗ ಇನ್ನೂ ಕೆಲವರು ಆತನ ಜೊತೆ ಇರುವುದು ಸಹ ಸ್ಪಷ್ಟವಾಗಿದೆ ಎಂದು ಆರೋಪಿಸಿದ್ದಾರೆ.
ಹೆಸರು ಕೆಡಿಸಲು ಸಚಿನ್ರನ್ನ ಕೆಲವರು ಬಳಕ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಪ್ರಕರಣವನ್ನ ಉನ್ನತಮಟ್ಟದಲ್ಲಿ ತನಿಖೆ ಮಾಡಿಸಿದರೆ ಸಚಿನ್ ಆತ್ಮಹತ್ಯೆ ಹಾಗೂ ಡೆತ್ನೋಟ್ ಹಿಂದೆ ಯಾರ ಕೈವಾಡವಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಆಗ್ರಹಿಸಿದ್ದಾರೆ.
ಅನೈತಿಕ ಸಂಬಂಧ ಕೊಲೆಗೆ ಕಾರಣ: ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7 ಮಂದಿ ಅರೆಸ್ಟ್
ಅನೈತಿಕ ಸಂಬಂಧದ ವಿಚಾರವಾಗಿ ನಡೆದ ಗಲಾಟೆಯೊಂದು ಭೀಕರ ಕೊಲೆಯಾಗಿ ಮಾರ್ಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಅವರಗುಪ್ಪ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಖ್ಯಾತ ಜ್ಯೋತಿಷಿ...








