ಜಮ್ಮು ಮತ್ತು ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗವೆಂದು ಭಾರತದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವಿಕಾಸ್ ಸ್ವರೂಪ್ ಪ್ರತಿಪಾದಿಸಿದ್ದಾರೆ.
ಕಾಶ್ಮೀರ ವಿಚಾರದಲ್ಲಿ ಅಂತರರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸಬೇಕು ಎಂದು ಪಾಕಿಸ್ತಾನದ ಮಾನವ ಹಕ್ಕು ಸಚಿವ ವಿಶ್ವಸಂಸ್ಥೆಯ 43ನೇ ಮಾನವಹಕ್ಕುಗಳ ಅಧಿವೇಶನದಲ್ಲಿ ಒತ್ತಾಯಿಸಿದ ಬೆನ್ನಲ್ಲೇ ಭಾರತದ ವಿದೇಶಾಂಗ ಸಚಿವಾಲಯದ ಪಶ್ಚಿಮ ವಿಭಾಗದ ಕಾರ್ಯದರ್ಶಿ ವಿಕಾಸ್ ಸ್ವರೂಪ್ ಜಮ್ಮು-ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗವಾಗಿಯೇ ಉಳಿಯಲಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಪಾಕಿಸ್ತಾನ ಜಗತ್ತಿನಲ್ಲೇ ಭಯೋತ್ಪಾದನೆ ಮತ್ತು ಹಿಂಸೆಯನ್ನು ರಪ್ತು ಮಾಡುವ ಅಗ್ರ ರಾಷ್ಟ್ರವೆಂದು ಕಿಡಿಕಾರಿದ ವಿಕಾಸ್ ಸ್ವರೂಪ್ ಅದು ಮೊದಲು ಬೇರೆಯವರಿಗೆ ಉಪದೇಶ ಕೊಡುವುದನ್ನು ಬಿಟ್ಟು, ತನ್ನ ಪರಿಸ್ಥಿತಿ ಸುಧಾರಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಪಾಕಿಸ್ತಾನಕ್ಕೆ ಮಾತಿನ ಚಾವಟಿ ಬೀಸಿದರು.
ಜಮ್ಮು ಕಾಶ್ಮೀರವನ್ನು ವಿಭಜಿಸಿ ಕೇಂದ್ರಾಡಳಿತ ಮಾಡಿರುವುದು ಭಾರತದ ಅಂತರಿಕ ವಿಚಾರವಾಗಿದ್ದು, ಈಗಾಗಲೇ ಪರಿಸ್ಥಿತಿ ಪೂರ್ಣ ನಿಯಂತ್ರಣದಲ್ಲಿದೆ ಎಂದು ಹೇಳಿದರು.
ಗೃಹಲಕ್ಷ್ಮೀಯರ ಮನೆಬಾಗಿಲಿಗೆ ಬರಲಿದೆ ಮರುಪರಿಶೀಲನೆಯ ಬಿಸಿ ಬ್ಯಾಂಕ್ ಖಾತೆ ಮತ್ತು ಆಧಾರ್ ಜೋಡಣೆಯಲ್ಲಿ ಸಣ್ಣ ತಪ್ಪಾದರೂ ಎರಡು ಸಾವಿರಕ್ಕೆ ಬೀಳಲಿದೆ ಕತ್ತರಿ
ಬೆಂಗಳೂರು: ರಾಜ್ಯದ ಲಕ್ಷಾಂತರ ಮಹಿಳೆಯರ ಆರ್ಥಿಕ ಆಸರೆಯಾಗಿರುವ ಗೃಹಲಕ್ಷ್ಮಿ ಯೋಜನೆಗೆ ಈಗ ಹೊಸ ಕಟ್ಟುನಿಟ್ಟಿನ ನಿಯಮಗಳ ಕಾಲ ಎದುರಾಗಿದೆ. ಚುನಾವಣಾ ಅಖಾಡದಲ್ಲಿ ಹವಾ ಸೃಷ್ಟಿಸಿದ್ದ ಈ ಗ್ಯಾರಂಟಿ...








