2019 ಫೆಬ್ರವರಿ 26ಕ್ಕೆ ಭಾರತದ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್ ಮೇಲೆ ವೈಮಾನಿಕ ದಾಳಿ ನಡೆಸಿ ಉಗ್ರರ ಅಡಗುತಾಣವನ್ನು ಧ್ವಂಸಗೊಳಿಸಿ ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಂಡ ದಿನ. 300ಕ್ಕೂ ಅಧಿಕ ಉಗ್ರರನ್ನು ಅಂದು ಭಾರತದ ವಾಯುಪಡೆ ಸದೆಬಡಿದಿತ್ತು.

ಇದರ ವರ್ಷಾಚರಣೆಯ ಸಂದರ್ಭದಲ್ಲಿ ಭಾಗಿಯಾದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಯೋತ್ಪಾದನೆಯನ್ನು ನಿಭಾಯಿಸುವ ಭಾರತದ ವಿಚಾರ ಧಾರೆ ಸಂಪೂರ್ಣ ಬದಲಾಗಿದೆ. ಪರಿಸ್ಥಿತಿ ವಿಷಮಿಸಿದರೆ, ಗಡಿದಾಟಿ ದಾಳಿ ಮಾಡಲು ಭಾರತ ಹಿಂಜರಿಯುವುದಿಲ್ಲ. ಇಂತಹ ಮನೋಸ್ಥೈರ್ಯಕ್ಕೆ ಕಾರಣರಾದ ಪ್ರಧಾನಿ ಮೋದಿ ಗೆ ಧನ್ಯವಾದ ಎಂದು ಹೇಳಿದರು.








