ದಿನ ಭವಿಷ್ಯ : 21-05-2026
ಮೇಷ ರಾಶಿ
ಇಂದು ಮೇಷ ರಾಶಿಯವರಿಗೆ ಆರ್ಥಿಕವಾಗಿ ಮಿಶ್ರ ಫಲಗಳು ಕಂಡುಬರುತ್ತವೆ ವ್ಯಾಪಾರದಲ್ಲಿ ಹೊಸ ಹೂಡಿಕೆ ಮಾಡುವ ಮುನ್ನ ಯೋಚಿಸುವುದು ಒಳ್ಳೆಯದು ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ ಉದ್ಯೋಗದಲ್ಲಿ ಸಹೋದ್ಯೋಗಿಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗಬಹುದು ಆದರೆ ನಿಮ್ಮ ಸಂಯಮದಿಂದ ಎಲ್ಲವನ್ನೂ ನಿಭಾಯಿಸುತ್ತೀರಿ ಸಂಜೆ ವೇಳೆಗೆ ಶುಭ ಸುದ್ಧಿ ಕೇಳುವಿರಿ ಹಳದಿ ಬಣ್ಣದ ಬಟ್ಟೆ ಧರಿಸುವುದು ನಿಮಗೆ ಶುಭ ತರಲಿದೆ
ವೃಷಭ ರಾಶಿ
ನಿಮ್ಮ ರಾಶಿಯಲ್ಲಿ ರವಿಯ ಸಂಚಾರವಿರುವುದರಿಂದ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ ಯಾವುದೇ ಕಠಿಣ ಕಾರ್ಯವನ್ನೂ ಧೈರ್ಯದಿಂದ ಪೂರ್ಣಗೊಳಿಸುವಿರಿ ಸಮಾಜದಲ್ಲಿ ಗೌರವ ಪ್ರತಿಷ್ಠೆಗಳು ಹೆಚ್ಚಾಗಲಿವೆ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆ ಇದೆ ಆರೋಗ್ಯದ ದೃಷ್ಟಿಯಿಂದ ದಿನವು ಉತ್ತಮವಾಗಿದೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮದ ಅಗತ್ಯವಿದೆ
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಇಂದು ಖರ್ಚುಗಳು ಹೆಚ್ಚಾಗುವ ಸಂಭವವಿದೆ ಅನಗತ್ಯ ಪ್ರಯಾಣಗಳನ್ನು ತಪ್ಪಿಸುವುದು ಉತ್ತಮ ವಿದೇಶಿ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಲಾಭದಾಯಕ ದಿನವಾಗಿದೆ ಮಾನಸಿಕವಾಗಿ ಸ್ವಲ್ಪ ಒತ್ತಡ ಅನುಭವಿಸಬಹುದು ಆದ್ದರಿಂದ ಯೋಗ ಮತ್ತು ಧ್ಯಾನಕ್ಕೆ ಸಮಯ ಮೀಸಲಿಡಿ ನ್ಯಾಯಾಲಯದ ಕೆಲಸಗಳಲ್ಲಿ ಪ್ರಗತಿ ಕಂಡುಬರುತ್ತದೆ ಶತ್ರುಗಳ ಮೇಲೆ ನಿಮ್ಮ ಮೇಲುಗೈ ಇರುತ್ತದೆ
ಕರ್ಕಾಟಕ ರಾಶಿ
ಇಂದು ನಿಮಗೆ ಆದಾಯದ ಮೂಲಗಳು ಹೆಚ್ಚಾಗಲಿವೆ ಹಳೆಯ ಬಾಕಿ ಹಣ ಕೈಸೇರುವ ಸಾಧ್ಯತೆ ಇದೆ ಸ್ನೇಹಿತರಿಂದ ಮತ್ತು ಸಹೋದರರಿಂದ ಸಹಾಯ ಸಿಗಲಿದೆ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಅತ್ಯಂತ ಶುಭ ದಿನವಾಗಿದೆ ಪ್ರೇಮ ಜೀವನದಲ್ಲಿ ಮಧುರತೆ ಇರುತ್ತದೆ ಮಕ್ಕಳ ಕಡೆಯಿಂದ ಹೆಮ್ಮೆಯ ವಿಷಯಗಳನ್ನು ಕೇಳುವಿರಿ ಹಿರಿಯರ ಆಶೀರ್ವಾದ ಪಡೆದು ಕೆಲಸ ಆರಂಭಿಸಿ
ಸಿಂಹ ರಾಶಿ
ಉದ್ಯೋಗ ಕ್ಷೇತ್ರದಲ್ಲಿ ನಿಮಗೆ ದೊಡ್ಡ ಜವಾಬ್ದಾರಿಗಳು ಸಿಗಲಿವೆ ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಉನ್ನತ ಸ್ಥಾನಮಾನ ದೊರೆಯುವ ಸಾಧ್ಯತೆ ಇದೆ ತಂದೆಯ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ ಸರ್ಕಾರಿ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ ನಿಮ್ಮ ಮಾತಿನ ಚಾತುರ್ಯದಿಂದ ಎಲ್ಲರನ್ನೂ ಸೆಳೆಯುವಿರಿ ಮನೆಯಲ್ಲಿ ಮಂಗಳ ಕಾರ್ಯಗಳ ಬಗ್ಗೆ ಚರ್ಚೆ ನಡೆಯಲಿದೆ
ಕನ್ಯಾ ರಾಶಿ
ಭಾಗ್ಯೋದಯದ ದಿನವಾಗಿದ್ದು ಅದೃಷ್ಟ ನಿಮ್ಮ ಪರವಾಗಿದೆ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ ದೂರದ ಪ್ರಯಾಣ ಯೋಗವಿದೆ ಅದು ನಿಮಗೆ ಲಾಭ ತಂದುಕೊಡಲಿದೆ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ ಗುರು ಹಿರಿಯರ ಮಾರ್ಗದರ್ಶನದಿಂದ ಕಷ್ಟದ ಕೆಲಸಗಳನ್ನು ಸುಲಭವಾಗಿ ಮುಗಿಸುವಿರಿ ಆರ್ಥಿಕ ಸ್ಥಿತಿ ಭದ್ರವಾಗಿರುತ್ತದೆ
ತುಲಾ ರಾಶಿ
ಇಂದು ನೀವು ಸ್ವಲ್ಪ ಜಾಗರೂಕರಾಗಿರಬೇಕು ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ವಹಿಸಿ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ ಆದ್ದರಿಂದ ಹೊರಗಿನ ಆಹಾರ ಸೇವಿಸಬೇಡಿ ಹಣಕಾಸಿನ ವಿಚಾರದಲ್ಲಿ ಯಾರನ್ನೂ ಅತಿಯಾಗಿ ನಂಬಬೇಡಿ ಗುಪ್ತ ಶತ್ರುಗಳ ಕಾಟ ಇರಬಹುದು ಮೌನವಾಗಿರುವುದು ಇಂದು ನಿಮಗೆ ಶ್ರೇಯಸ್ಕರ ಹನುಮಾನ್ ಚಾಲೀಸಾ ಪಠಿಸುವುದು ಸಂಕಷ್ಟಗಳನ್ನು ದೂರ ಮಾಡುತ್ತದೆ
ವೃಶ್ಚಿಕ ರಾಶಿ
ವೈವಾಹಿಕ ಜೀವನದಲ್ಲಿ ಸುಖ ಶಾಂತಿ ಇರುತ್ತದೆ ವ್ಯಾಪಾರ ಪಾಲುದಾರಿಕೆಯಲ್ಲಿ ಉತ್ತಮ ಲಾಭ ನಿರೀಕ್ಷಿಸಬಹುದು ಹೊಸ ವ್ಯವಹಾರ ಆರಂಭಿಸಲು ತಜ್ಞರ ಸಲಹೆ ಪಡೆಯಿರಿ ಸಾರ್ವಜನಿಕ ಜೀವನದಲ್ಲಿ ನಿಮ್ಮ ವರ್ಚಸ್ಸು ಹೆಚ್ಚಾಗುತ್ತದೆ ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಬಹುದು ಪ್ರವಾಸದ ಯೋಜನೆ ಹಾಕಿಕೊಳ್ಳುವಿರಿ ದಿನವಿಡೀ ಉತ್ಸಾಹದಿಂದ ಇರುವಿರಿ
ಧನು ರಾಶಿ
ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿರುವವರಿಗೆ ಇಂದು ಶುಭ ಫಲಿತಾಂಶ ಸಿಗಲಿದೆ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯುವಿರಿ ಸಾಲದ ಹೊರೆ ಕಡಿಮೆಯಾಗಲಿದೆ ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತದೆ ಶಿಸ್ತುಬದ್ಧ ಜೀವನ ನಡೆಸಲು ನಿರ್ಧರಿಸುವಿರಿ ನ್ಯಾಯದ ಪರವಾಗಿ ನಿಲ್ಲುವ ನಿಮ್ಮ ಗುಣಕ್ಕೆ ಬೆಲೆ ಸಿಗಲಿದೆ ದಿನದ ಅಂತ್ಯದಲ್ಲಿ ಹಣಕಾಸಿನ ಲಾಭವಿರುತ್ತದೆ
ಮಕರ ರಾಶಿ
ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಲಿದೆ ಪ್ರೀತಿ ಪಾತ್ರರೊಂದಿಗೆ ಪ್ರವಾಸ ಹೋಗುವ ಸಾಧ್ಯತೆ ಇದೆ ಸೃಜನಾತ್ಮಕ ಕೆಲಸಗಳಲ್ಲಿ ತೊಡಗಿರುವವರಿಗೆ ಇಂದು ವಿಶೇಷ ಗೌರವ ಸಿಗಲಿದೆ ಮಕ್ಕಳ ಭವಿಷ್ಯದ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವಿರಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮುನ್ನ ಎಚ್ಚರವಿರಲಿ ಹೊಸ ವ್ಯಕ್ತಿಗಳ ಪರಿಚಯದಿಂದ ಲಾಭವಾಗಲಿದೆ
ಕುಂಭ ರಾಶಿ
ಮಾನಸಿಕ ಶಾಂತಿಗಾಗಿ ದೈವ ಕಾರ್ಯಗಳಲ್ಲಿ ಭಾಗವಹಿಸುವಿರಿ ಭೂಮಿ ಮತ್ತು ವಾಹನ ಖರೀದಿಯ ಯೋಗವಿದೆ ತಾಯಿಯ ಕಡೆಯಿಂದ ಆಸ್ತಿ ಲಾಭವಾಗುವ ಸಾಧ್ಯತೆ ಇದೆ ಮನೆಯ ನವೀಕರಣಕ್ಕಾಗಿ ಹಣ ಖರ್ಚು ಮಾಡುವಿರಿ ಕೌಟುಂಬಿಕ ಜೀವನದಲ್ಲಿ ಸಣ್ಣಪುಟ್ಟ ಕಿರಿಕಿರಿ ಉಂಟಾಗಬಹುದು ಸಮಾಧಾನದಿಂದ ವರ್ತಿಸಿ ಹಸಿರು ಗಿಡಗಳಿಗೆ ನೀರು ಹಾಕುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ
ಮೀನ ರಾಶಿ
ಧೈರ್ಯ ಮತ್ತು ಪರಾಕ್ರಮ ಹೆಚ್ಚಾಗುವ ದಿನ ನಿಮ್ಮ ಕೆಲಸದ ವೇಗ ಎಲ್ಲರಿಗೂ ಆಶ್ಚರ್ಯ ತರಲಿದೆ ಸಣ್ಣ ಪುಟ್ಟ ಪ್ರವಾಸಗಳು ಆನಂದ ನೀಡಲಿವೆ ಸಹೋದರ ಸಹೋದರಿಯರೊಂದಿಗೆ ಬಾಂಧವ್ಯ ವೃದ್ಧಿಯಾಗಲಿದೆ ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಹೊಸ ಅವಕಾಶಗಳು ಸಿಗಲಿವೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವವರಿಗೆ ಜನಪ್ರಿಯತೆ ಹೆಚ್ಚಲಿದೆ ಇಂದು ನೀವು ಕೈಹಾಕಿದ ಕೆಲಸದಲ್ಲಿ ಜಯ ಖಚಿತ







