ADVERTISEMENT
Monday, August 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ದೂರದರ್ಶಕವಿಲ್ಲದೆ ಜುಲೈ 19 ರಂದು ಬುಧ, ಮಂಗಳ, ಶುಕ್ರ, ಗುರು, ಶನಿ ಮತ್ತು ಚಂದ್ರರನ್ನು ವೀಕ್ಷಿಸುವುದು ಹೇಗೆ?

admin by admin
July 18, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ದೂರದರ್ಶಕವಿಲ್ಲದೆ ಜುಲೈ 19 ರಂದು ಬುಧ, ಮಂಗಳ, ಶುಕ್ರ, ಗುರು, ಶನಿ ಮತ್ತು ಚಂದ್ರರನ್ನು ವೀಕ್ಷಿಸುವುದು ಹೇಗೆ?

ಮಂಗಳೂರು, ಜುಲೈ 18: ಜುಲೈ 19 ರ ಭಾನುವಾರದಂದು ಸೂರ್ಯೋದಯಕ್ಕಿಂತ ಸುಮಾರು 45 ನಿಮಿಷಗಳ ಮೊದಲು ಎಚ್ಚರಗೊಳ್ಳಿ. ಅಂದು ನೀವು ದೂರದರ್ಶಕವನ್ನು ಬಳಸದೆ ಐದು ಗ್ರಹಗಳನ್ನು ಮತ್ತು ಅರ್ಧಚಂದ್ರವನ್ನು ನೋಡಬಹುದು. ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ, ಹಾಗೂ ಚಂದ್ರ ಎಲ್ಲವೂ ಗೋಚರಿಸುತ್ತದೆ.

Related posts

ನೈಸ್ ಸಂಸ್ಥೆಯ ಟೋಲ್ ದಗಾಬಾಜಿಗೆ ಬ್ರೇಕ್ ಹಾಕಿ: ಡಿಕೆಶಿ ಸರ್ಕಾರಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಒತ್ತಾಯ

ನೈಸ್ ಸಂಸ್ಥೆಯ ಟೋಲ್ ದಗಾಬಾಜಿಗೆ ಬ್ರೇಕ್ ಹಾಕಿ: ಡಿಕೆಶಿ ಸರ್ಕಾರಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಒತ್ತಾಯ

August 17, 2026
ಕರ್ನಾಟಕದ ಸಿಎಂ ಆಗ್ತಾರಾ ನಟ ಯಶ್? ರಾಜಕೀಯ ಪ್ರವೇಶದ ಕುರಿತು ಯಶ್ ನೀಡಿದ ಮಾಸ್ ರಿಯಾಕ್ಷನ್ ವೈರಲ್

ಕರ್ನಾಟಕದ ಸಿಎಂ ಆಗ್ತಾರಾ ನಟ ಯಶ್? ರಾಜಕೀಯ ಪ್ರವೇಶದ ಕುರಿತು ಯಶ್ ನೀಡಿದ ಮಾಸ್ ರಿಯಾಕ್ಷನ್ ವೈರಲ್

August 17, 2026

ಖಗೋಳವಿಜ್ಞಾನ ಶಿಕ್ಷಣತಜ್ಞ ಮತ್ತು ಮಾಜಿ ತಾರಾಲಯ ನಿರ್ದೇಶಕರಾದ ಜೆಫ್ರಿ ಹಂಟ್, ಈ ಘಟನೆಯ ಬಗ್ಗೆ ತಮ್ಮ ಸೈಟ್‌ನಲ್ಲಿನ ಪೋಸ್ಟ್‌ನಲ್ಲಿ ಮಾಡಿದ್ದಾರೆ.
ಮುಂಜಾನೆ ಸೂರ್ಯೋದಯಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಹೊರಗೆ ಹೆಜ್ಜೆ ಹಾಕಿ ಎಂದು ಹಂಟ್ ಹೇಳಿದ್ದಾರೆ. ಶುಕ್ರ, ಮಂಗಳ, ಶನಿ ಮತ್ತು ಗುರು ಎಂಬ ನಾಲ್ಕು ಪ್ರಕಾಶಮಾನವಾದ ಗ್ರಹಗಳನ್ನು ಹುಡುಕಿ. ಅವು ಅತಿಯಾದ ಪ್ರಕಾಶಮಾನವಾದ ನಕ್ಷತ್ರಗಳಂತೆ ಕಾಣುತ್ತವೆ. ಪೂರ್ವ-ಈಶಾನ್ಯದಲ್ಲಿ ಶುಕ್ರ ಮಂದವಾಗಿ ಗೋಚರಿಸಿದರೆ, ಆಗ್ನೇಯದಲ್ಲಿ ಏಕೈಕ ಗ್ರಹ ಮಂಗಳ ಮತ್ತು ನೈರುತ್ಯ ದಿಕ್ಕಿನಲ್ಲಿ ಗುರು ಮತ್ತು ಶನಿ ನಿಮ್ಮ ಕಣ್ಣಿಗೆ ಅತಿಯಾದ ಪ್ರಕಾಶಮಾನವಾದ ನಕ್ಷತ್ರಗಳಂತೆ ಕಾಣುತ್ತದೆ. ಬುಧನನ್ನು ಬರಿಗಣ್ಣಿನಿಂದ ಗುರುತಿಸಲು ಕಠಿಣವಾಗಬಹುದು. ಬುಧಗ್ರಹ ನೋಡಲು ಬೈನಾಕ್ಯುಲರ್‌ಗಳನ್ನು ಬಳಸಿ ಪ್ರಯತ್ನಿಸಿ ಎಂದು ಹಂಟ್ ಸಲಹೆ ನೀಡಿದ್ದಾರೆ.
ತನ್ನ ವೆಬ್‌ಸೈಟ್‌ನಲ್ಲಿ, ಹಂಟ್ ಪ್ರತಿ ಗ್ರಹವನ್ನು ಹುಡುಕುವ ಸಲಹೆಗಳನ್ನು ನೀಡಿದ್ದು, ಶುಕ್ರ, ಪೂರ್ವ ಈಶಾನ್ಯದಲ್ಲಿ ಗೋಚರಿಸುತ್ತದೆ ಎಂದು ಅವರು ಹೇಳಿದ್ದಾರೆ. ಬುಧವು ಚಂದ್ರನ ಬಲಭಾಗದಲ್ಲಿರುತ್ತದೆ, ಆಗ್ನೇಯ ದಿಕ್ಕಿನಲ್ಲಿ ಕೆಂಪು ಗ್ರಹವಾದ ಮಂಗಳವನ್ನು ನೀವು ನೋಡುತ್ತೀರಿ. ಗುರುವು ನೈರುತ್ಯ ದಿಕ್ಕಿನಲ್ಲಿ ಇದ್ದರೆ, ಶನಿಯು ಗುರುಗ್ರಹದ ಮೇಲಿನ ಎಡಭಾಗದಲ್ಲಿರುತ್ತದೆ. ಯುರೇನಸ್, ನೆಪ್ಚೂನ್ ಮತ್ತು ಪ್ಲುಟೊ ಸಹ ಶುಕ್ರ ಮತ್ತು ಗುರುಗಳ ನಡುವೆ ಕಾಣಸಿಗುತ್ತವೆ ಆದರೆ ಈ ಮೂರು ಗ್ರಹಗಳನ್ನು ನೋಡಲು ದೂರದರ್ಶಕದ ಅಗತ್ಯವಿದೆ ಎಂದು ಹಂಟ್ ಮತ್ತಷ್ಟು ವಿವರಿಸಿದ್ದಾರೆ.

ಒಂದು ವೇಳೆ ನಿಮಗೆ ಜುಲೈ 19 ರಂದು ನೋಡಲು ಸಾಧ್ಯವಾಗದ ಇದ್ದರೆ, ಜುಲೈ 25 ರವರೆಗೆ ನೀವು ಐದು ಗ್ರಹಗಳನ್ನು ಕಾಣಲು ಸಾಧ್ಯವಿದೆ. ‌ಆದರೆ ಚಂದ್ರನನ್ನು ಕಾಣಲು ಸಾಧ್ಯವಿಲ್ಲ. ಈ ಐದು ಗ್ರಹಗಳು ಮತ್ತು ಚಂದ್ರನ ಕೂಟವನ್ನು ವೀಕ್ಷಿಸುವುದನ್ನು ತಪ್ಪಿಸಿಕೊಂಡರೆ, ಮತ್ತು ನೀವು ಮುಂದಿನ ಜೂನ್ 2022 ರ ವರೆಗೆ ಕಾಯಬೇಕು. ಆದ್ದರಿಂದ, ಆಕಾಶದಲ್ಲಿ ನ ಈ ಅದ್ಬುತವನ್ನು ಕಣ್ತುಂಬಿಕೊಳ್ಳಲು ನಿಮ್ಮ ಅಲಾರಾಂ ಗಡಿಯಾರವನ್ನು ಸೂರ್ಯೋದಯಕ್ಕೆ ಮೊದಲು ಹೊಂದಿಸಿಕೊಳ್ಳುವುದನ್ನು ಮರೆಯಬೇಡಿ.

Tags: AstronomyJupiterMarsMercuryMoonSaturnSkysunriseVenus
ShareTweetSendShare
Join us on:

Related Posts

ನೈಸ್ ಸಂಸ್ಥೆಯ ಟೋಲ್ ದಗಾಬಾಜಿಗೆ ಬ್ರೇಕ್ ಹಾಕಿ: ಡಿಕೆಶಿ ಸರ್ಕಾರಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಒತ್ತಾಯ

ನೈಸ್ ಸಂಸ್ಥೆಯ ಟೋಲ್ ದಗಾಬಾಜಿಗೆ ಬ್ರೇಕ್ ಹಾಕಿ: ಡಿಕೆಶಿ ಸರ್ಕಾರಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಒತ್ತಾಯ

by Shwetha
August 17, 2026
0

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿರುವ ನೈಸ್ ರಸ್ತೆಯಲ್ಲಿ (BMICP) ಯಾವುದೇ ನಿಯಮಾವಳಿಗಳಿಲ್ಲದೆ ಅನಧಿಕೃತವಾಗಿ ಸಂಗ್ರಹಿಸುತ್ತಿರುವ ಟೋಲ್ ವಸೂಲಿಯನ್ನು ತಕ್ಷಣವೇ ಜಾರಿಗೆ ಬರುವಂತೆ ನಿಷೇಧಿಸಬೇಕು ಎಂದು ಕೇಂದ್ರ ಸಚಿವ...

ಕರ್ನಾಟಕದ ಸಿಎಂ ಆಗ್ತಾರಾ ನಟ ಯಶ್? ರಾಜಕೀಯ ಪ್ರವೇಶದ ಕುರಿತು ಯಶ್ ನೀಡಿದ ಮಾಸ್ ರಿಯಾಕ್ಷನ್ ವೈರಲ್

ಕರ್ನಾಟಕದ ಸಿಎಂ ಆಗ್ತಾರಾ ನಟ ಯಶ್? ರಾಜಕೀಯ ಪ್ರವೇಶದ ಕುರಿತು ಯಶ್ ನೀಡಿದ ಮಾಸ್ ರಿಯಾಕ್ಷನ್ ವೈರಲ್

by Shwetha
August 17, 2026
0

ಬೆಂಗಳೂರು: ದಳಪತಿ ವಿಜಯ ತಮಿಳುನಾಡಿನಲ್ಲಿ ಸ್ವಂತ ಪಕ್ಷ ಕಟ್ಟಿ ಸಿಎಂ ಪೀಠದತ್ತ ಹೆಜ್ಜೆ ಇಟ್ಟಿರುವ ಬೆನ್ನಲ್ಲೇ, ಸ್ಯಾಂಡಲ್‌ವುಡ್‌ನ ಗಂಡುಗಲಿ ರಾಕಿಂಗ್ ಸ್ಟಾರ್ ಯಶ್ ಕೂಡ ಕರ್ನಾಟಕ ರಾಜಕೀಯಕ್ಕೆ...

2029ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಾನು ಗೃಹಸಚಿವನಾದರೆ RSS ವಿದೇಶಿ ದೇಣಿಗೆ ತನಿಖೆ ಮಾಡಿಸುತ್ತೇನೆ: ಪ್ರಿಯಾಂಕ್ ಖರ್ಗೆ

2029ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಾನು ಗೃಹಸಚಿವನಾದರೆ RSS ವಿದೇಶಿ ದೇಣಿಗೆ ತನಿಖೆ ಮಾಡಿಸುತ್ತೇನೆ: ಪ್ರಿಯಾಂಕ್ ಖರ್ಗೆ

by Shwetha
August 17, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಹಾಗೂ ರಾಜ್ಯ ಸರ್ಕಾರದ ನಡುವಿನ ಶೀತಲ ಸಮರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. 2029ರಲ್ಲಿ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು,...

ಸಕಲ ಐಶ್ವರ್ಯ ಸೌಭಾಗ್ಯ ತರುವ ವರಮಹಾಲಕ್ಷ್ಮಿ ವ್ರತ: ವರಮಹಾಲಕ್ಷ್ಮಿ ಪೂಜೆಯಲ್ಲಿ ಕಂಕಣ ಧಾರಣೆ ಮತ್ತು ಕಲಶ ನೀರಿನ ರಹಸ್ಯ- ಮನೆಯಲ್ಲಿ ಸಿರಿ-ಸಂಪತ್ತು ನೆಲೆಸಲು ಹೀಗೆ ಮಾಡಿ

ಸಕಲ ಐಶ್ವರ್ಯ ಸೌಭಾಗ್ಯ ತರುವ ವರಮಹಾಲಕ್ಷ್ಮಿ ವ್ರತ: ವರಮಹಾಲಕ್ಷ್ಮಿ ಪೂಜೆಯಲ್ಲಿ ಕಂಕಣ ಧಾರಣೆ ಮತ್ತು ಕಲಶ ನೀರಿನ ರಹಸ್ಯ- ಮನೆಯಲ್ಲಿ ಸಿರಿ-ಸಂಪತ್ತು ನೆಲೆಸಲು ಹೀಗೆ ಮಾಡಿ

by Shwetha
August 17, 2026
0

ಸಮೃದ್ಧಿ, ಐಶ್ವರ್ಯ ಮತ್ತು ಸೌಭಾಗ್ಯದ ದೇವತೆಯಾದ ಶ್ರೀ ವರಮಹಾಲಕ್ಷ್ಮಿ ವ್ರತವು ಮುತ್ತೈದೆಯರ ಪಾಲಿಗೆ ಅತ್ಯಂತ ಪವಿತ್ರವಾದ ಹಬ್ಬವಾಗಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಎರಡನೇ ಶುಕ್ರವಾರದಂದು ಆಚರಿಸಲಾಗುವ...

ಯಾರೋ ಒಬ್ಬರ ಅಭಿಪ್ರಾಯದಿಂದ ನನ್ನ ವ್ಯಕ್ತಿತ್ವ ಬದಲಾಗಲ್ಲ: ರಶ್ಮಿಕಾ ‘ಮಿಸ್ಟರ್ ಶೋ ಆಫ್’ ಕಾಮೆಂಟ್‌ಗೆ ನಟ ಯಶ್ ಸೈಲೆಂಟ್ ಕೌಂಟರ್

ಯಾರೋ ಒಬ್ಬರ ಅಭಿಪ್ರಾಯದಿಂದ ನನ್ನ ವ್ಯಕ್ತಿತ್ವ ಬದಲಾಗಲ್ಲ: ರಶ್ಮಿಕಾ ‘ಮಿಸ್ಟರ್ ಶೋ ಆಫ್’ ಕಾಮೆಂಟ್‌ಗೆ ನಟ ಯಶ್ ಸೈಲೆಂಟ್ ಕೌಂಟರ್

by Shwetha
August 17, 2026
0

ಸ್ಯಾಂಡಲ್‌ವುಡ್‌ನಿಂದ ಭಾರತೀಯ ಚಿತ್ರರಂಗದ ಉನ್ನತ ಮಟ್ಟಕ್ಕೆ ಬೆಳೆದು ನಿಂತಿರುವ ರಾಕಿಂಗ್ ಸ್ಟಾರ್ ಯಶ್, ಇಂಡಿಯಾ ಟಿವಿಯ ಜನಪ್ರಿಯ ಕಾರ್ಯಕ್ರಮ ಆಪ್ ಕಿ ಅದಾಲತ್‌ನಲ್ಲಿ ಭಾಗವಹಿಸಿ ಹಲವು ಕುತೂಹಲಕಾರಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram