ಪ್ರೀತಿಸಿ ಕೈ ಕೊಟ್ಟು ಬೇರೊಬ್ಬನ ಜೊತೆ ಮದುವೆಯಾಗುತ್ತಿದ್ದ ಪ್ರೇಯಸಿಗೆ ಭಗ್ನ ಪ್ರೇಮಿಯೊಬ್ಬ ಮದುವೆ ಮನೆಗೆ ನುಗ್ಗಿ ಕಪಾಳ ಮೋಕ್ಷ ಮಾಡಿದ್ದಾನೆ. ಉತ್ತರಾಖಂಡ್ ನ ಲ್ಯಾಂಡೈರಾದಲ್ಲಿ ಈ ಘಟನೆ ನಡೆದಿದೆ. ವಿವಾಹಕ್ಕೆ ಆಗಮಿಸಿದವರೆಲ್ಲಾ ನವ ವಧು-ವರರಿಗೆ ಉಡುಗೊರೆ ನೀಡಿ ಹಾರೈಸುತ್ತಿದ್ದರು. ಇದೇ ವೇಳೆ ಆಗಮಿಸಿದ ಯುವಕ ಉಡುಗೊರೆ ಕೊಡುವ ನೆಪದಲ್ಲಿ ವೇದಿಕೆ ಮೇಲೆ ಬಂದಿದ್ದಾನೆ. ಸ್ವಲ್ಪ ಹೊತ್ತು ವಧುವಿನ ಪಕ್ಕದಲ್ಲಿ ನಿಂತು ಅವಳನ್ನೇ ನೋಡುತ್ತಾ ನಿಂತ ಯುವಕ ಇದ್ದಕ್ಕಿದ್ದಂತೆ ಮದುಮಗಳ ಕಪಾಳಕ್ಕೆ ಹೊಡೆದಿದ್ದಾನೆ.
ಇದನ್ನು ಗಮನಿಸಿದ ಹುಡುಗ-ಹುಡುಗಿಯ ಸಂಬಂಧಿಕರು ಭಗ್ನ ಪ್ರೇಮಿಯನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಅವನನ್ನು ಹಿಡಿದು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ.
https://www.facebook.com/270039313580849/videos/237081677309431/








