ADVERTISEMENT
Monday, August 10, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ನನ್ನನ್ನು ಕೊಂಡುಕೊಳ್ಳುವ ಗಂಡಸು ಇನ್ನೂ ಹುಟ್ಟಿಲ್ಲ- ಲೂಟಿ ಮಾಡುವುದನ್ನೇ ನಿಲ್ಲಿಸದಿದ್ದರೆ ಸರ್ವನಾಶ ಆಗ್ತೀರಿ: ಡಿಕೆಶಿ ಸರ್ಕಾರಕ್ಕೆ ಕುಮಾರಸ್ವಾಮಿ ಖಡಕ್ ಎಚ್ಚರಿಕೆ

Shwetha by Shwetha
August 10, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ನನ್ನನ್ನು ಯಾರೂ ಕೊಂಡುಕೊಳ್ಳಲು ಸಾಧ್ಯವಿಲ್ಲ, ಅಂಥವರು ಈ ರಾಜ್ಯದಲ್ಲಿ ಇನ್ನೂ ಹುಟ್ಟಿಲ್ಲ. ನನ್ನ ಧ್ವನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಡಿಎಲ್‌ಎಫ್ ಕಂಪನಿಯಿಂದ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಭಾನುವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಡಿಎಲ್‌ಎಫ್ ಹಗರಣದ ಬಗ್ಗೆ ಮಾತನಾಡುವವರು ಮೊದಲು ಕೇರಳದ ಕಾಂಗ್ರೆಸ್ ಮುಖ್ಯಮಂತ್ರಿಗೂ, ಪ್ರಧಾನಿಯಾಗಲು ಹವಣಿಸುತ್ತಿರುವ ದೆಹಲಿಯ ವ್ಯಕ್ತಿಗೂ ಆ ಕಂಪನಿಗೂ ಇರುವ ಸಂಬಂಧವೇನು ಎಂಬುದನ್ನು ಬಹಿರಂಗಪಡಿಸಲಿ. ಆಗ ಸತ್ಯ ತಾನಾಗಿಯೇ ಹೊರಬರುತ್ತದೆ. ರಾಜ್ಯದಲ್ಲಿ ಅವರದೇ ಸರ್ಕಾರ ಇರುವುದರಿಂದ ಧೈರ್ಯವಿದ್ದರೆ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು. ನಾನು ಮುಖ್ಯಮಂತ್ರಿಯಾಗಿದ್ದಾಗ ಸಿಂಗಪುರ ಪ್ರವಾಸ ಕೈಗೊಂಡಿದ್ದಾಗ ನೈಸ್ ಕಂಪನಿಯ ವ್ಯಕ್ತಿ ಬಂದಿದ್ದರು, ಅಂದು ನಾನು ಅವರಿಗೆ ಏನು ಹೇಳಿ ಕಳಿಸಿದ್ದೆ ಎಂಬುದು ಅವರಿಗೆ ನೆನಪಿರಲಿ. ಲಾಟರಿ ನಿಷೇಧ ಮಾಡುವಾಗ ತಮಿಳುನಾಡಿನಿಂದ ಹಣದ ಬ್ಯಾಗ್ ಹಿಡಿದು ಬಂದವರನ್ನು ಹೇಗೆ ಉಗಿದು ಕಳಿಸಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.

Related posts

ತುರ್ತು ಪರಿಸ್ಥಿತಿ ಜಾರಿಗೊಳಿಸದಿದ್ದರೆ ಭಾರತ ಅಂದೇ ಛಿದ್ರವಾಗುತ್ತಿತ್ತು: ಆರ್‌ಎಸ್‌ಎಸ್ ಸ್ವಾತಂತ್ರ್ಯ ಹೋರಾಟ ಸಾಬೀತುಪಡಿಸಿದರೆ ಬಿಜೆಪಿಯ ಗುಲಾಮನಾಗುವೆ BK ಹರಿಪ್ರಸಾದ್ ಸವಾಲು

ತುರ್ತು ಪರಿಸ್ಥಿತಿ ಜಾರಿಗೊಳಿಸದಿದ್ದರೆ ಭಾರತ ಅಂದೇ ಛಿದ್ರವಾಗುತ್ತಿತ್ತು: ಆರ್‌ಎಸ್‌ಎಸ್ ಸ್ವಾತಂತ್ರ್ಯ ಹೋರಾಟ ಸಾಬೀತುಪಡಿಸಿದರೆ ಬಿಜೆಪಿಯ ಗುಲಾಮನಾಗುವೆ BK ಹರಿಪ್ರಸಾದ್ ಸವಾಲು

August 10, 2026
ಹೊರಟ್ಟಿ ಅವರಿಂದ ಬಲವಂತವಾಗಿ ರಾಜೀನಾಮೆ ಪಡೆದಿದ್ದಾರೆ- ವಾರಕ್ಕೊಬ್ಬರನ್ನು ಮಂತ್ರಿ ಮಾಡಿ ಬಂಡಾಯ ಶಮನಗೊಳಿಸಿ: ರಾಜ್ಯ ಸರ್ಕಾರದ ವಿರುದ್ಧ ಶ್ರೀರಾಮುಲು ಆಕ್ರೋಶ

ಹೊರಟ್ಟಿ ಅವರಿಂದ ಬಲವಂತವಾಗಿ ರಾಜೀನಾಮೆ ಪಡೆದಿದ್ದಾರೆ- ವಾರಕ್ಕೊಬ್ಬರನ್ನು ಮಂತ್ರಿ ಮಾಡಿ ಬಂಡಾಯ ಶಮನಗೊಳಿಸಿ: ರಾಜ್ಯ ಸರ್ಕಾರದ ವಿರುದ್ಧ ಶ್ರೀರಾಮುಲು ಆಕ್ರೋಶ

August 10, 2026

ಬಿಡದಿ ಟೌನ್‌ಶಿಪ್ ಯೋಜನೆಯು ಕೇವಲ ಕಮಿಷನ್ ಪಡೆಯುವ ದಂಧೆಯಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು. 2006ರಲ್ಲೇ ಈ ಬಗ್ಗೆ ಸದನ ಸಮಿತಿ ವರದಿ ನೀಡಿದ್ದರೂ ಈಗ ಹೊಸ ಸಮಿತಿ ರಚಿಸಿರುವುದು ನಗೆಪಾಟಲಿನ ಸಂಗತಿ. ಈ ಸಮಿತಿಯಲ್ಲಿದ್ದವರೇ ಈಗ ಮುಖ್ಯಮಂತ್ರಿಯಾಗಿದ್ದಾರೆ, ಅವರಿಗೆ ಕನಿಷ್ಠ ಪರಿಜ್ಞಾನ ಬೇಡವೇ? ಎಂದು ಪ್ರಶ್ನಿಸಿದರು. ಹಣದ ಮದದಲ್ಲಿ ಲೂಟಿ ಮಾಡುವುದನ್ನೇ ಕೆಲಸ ಮಾಡಿಕೊಂಡರೆ ಮುಂದಿನ ಚುನಾವಣೆಯಲ್ಲಿ ಸರ್ವನಾಶ ಆಗುತ್ತೀರಿ ಎಂದು ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದರು. ಈ ಯೋಜನೆಯಿಂದ ರೈತರು ಸಾವಿರಾರು ಎಕರೆ ಫಲವತ್ತಾದ ಭೂಮಿ ಕಳೆದುಕೊಳ್ಳಲಿದ್ದಾರೆ. ಇದನ್ನು ವಿರೋಧಿಸಿ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಸಿದ ಕುಮಾರಸ್ವಾಮಿ, ಮುಂಬರುವ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ಹಿಡಿಯುವಂತೆ ಶಾಸಕರಿಗೆ ಸೂಚಿಸಿದರು. ರಾಜ್ಯದಲ್ಲಿ ಬರಗಾಲ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೈತರ ಹಿತವನ್ನು ಬಲಿಗೊಟ್ಟು ಜಾರಿಗೆ ತರಲು ಹೊರಟಿರುವ ಬಿಡದಿ ಟೌನ್‌ಶಿಪ್ ಮತ್ತು ಸರ್ಕಾರದ ಇತರ ಅವ್ಯವಹಾರಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಬೇಕು. ವಿರೋಧ ಪಕ್ಷವಾಗಿ ನಾವು ಜನರ ಪರವಾಗಿ ಗಟ್ಟಿಯಾಗಿ ನಿಲ್ಲಬೇಕು ಎಂದು ಅವರು ಶಾಸಕರಿಗೆ ಕರೆ ನೀಡಿದರು. ದಲಿತರ ಭೂಮಿ ಕಬಳಿಸಲು ದಾಖಲೆ ಸೃಷ್ಟಿಸುವವರ ಬಗ್ಗೆಯೂ ನನಗೆ ಸಂಪೂರ್ಣ ಮಾಹಿತಿಯಿದೆ, ಸಮಯ ಬಂದಾಗ ಎಲ್ಲವನ್ನೂ ಬಯಲಿಗೆಳೆಯುತ್ತೇನೆ ಎಂದು ಅವರು ಗುಡುಗಿದರು.

ShareTweetSendShare
Join us on:

Related Posts

ತುರ್ತು ಪರಿಸ್ಥಿತಿ ಜಾರಿಗೊಳಿಸದಿದ್ದರೆ ಭಾರತ ಅಂದೇ ಛಿದ್ರವಾಗುತ್ತಿತ್ತು: ಆರ್‌ಎಸ್‌ಎಸ್ ಸ್ವಾತಂತ್ರ್ಯ ಹೋರಾಟ ಸಾಬೀತುಪಡಿಸಿದರೆ ಬಿಜೆಪಿಯ ಗುಲಾಮನಾಗುವೆ BK ಹರಿಪ್ರಸಾದ್ ಸವಾಲು

ತುರ್ತು ಪರಿಸ್ಥಿತಿ ಜಾರಿಗೊಳಿಸದಿದ್ದರೆ ಭಾರತ ಅಂದೇ ಛಿದ್ರವಾಗುತ್ತಿತ್ತು: ಆರ್‌ಎಸ್‌ಎಸ್ ಸ್ವಾತಂತ್ರ್ಯ ಹೋರಾಟ ಸಾಬೀತುಪಡಿಸಿದರೆ ಬಿಜೆಪಿಯ ಗುಲಾಮನಾಗುವೆ BK ಹರಿಪ್ರಸಾದ್ ಸವಾಲು

by Shwetha
August 10, 2026
0

ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯನ್ನು ಕೆಪಿಸಿಸಿ ನಾಯಕ ಬಿ ಕೆ ಹರಿಪ್ರಸಾದ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಒಂದು ವೇಳೆ ಅಂದು ತುರ್ತು...

ಹೊರಟ್ಟಿ ಅವರಿಂದ ಬಲವಂತವಾಗಿ ರಾಜೀನಾಮೆ ಪಡೆದಿದ್ದಾರೆ- ವಾರಕ್ಕೊಬ್ಬರನ್ನು ಮಂತ್ರಿ ಮಾಡಿ ಬಂಡಾಯ ಶಮನಗೊಳಿಸಿ: ರಾಜ್ಯ ಸರ್ಕಾರದ ವಿರುದ್ಧ ಶ್ರೀರಾಮುಲು ಆಕ್ರೋಶ

ಹೊರಟ್ಟಿ ಅವರಿಂದ ಬಲವಂತವಾಗಿ ರಾಜೀನಾಮೆ ಪಡೆದಿದ್ದಾರೆ- ವಾರಕ್ಕೊಬ್ಬರನ್ನು ಮಂತ್ರಿ ಮಾಡಿ ಬಂಡಾಯ ಶಮನಗೊಳಿಸಿ: ರಾಜ್ಯ ಸರ್ಕಾರದ ವಿರುದ್ಧ ಶ್ರೀರಾಮುಲು ಆಕ್ರೋಶ

by Shwetha
August 10, 2026
0

ಬಳ್ಳಾರಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಹಾಗೂ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ ಶ್ರೀರಾಮುಲು...

ದೇಶಭಕ್ತಿಯ ಸರ್ಟಿಫಿಕೇಟ್ ಕೊಡಲು ಇವರು ಯಾರು  : ಆರ್ ಎಸ್ ಎಸ್ ಗೆ ಕಾನೂನಿನ ಅಂಕುಶ ಹಾಕಲು ಪ್ರಿಯಾಂಕ್ ಖರ್ಗೆ ಸಜ್ಜು

ದೇಶಭಕ್ತಿಯ ಸರ್ಟಿಫಿಕೇಟ್ ಕೊಡಲು ಇವರು ಯಾರು : ಆರ್ ಎಸ್ ಎಸ್ ಗೆ ಕಾನೂನಿನ ಅಂಕುಶ ಹಾಕಲು ಪ್ರಿಯಾಂಕ್ ಖರ್ಗೆ ಸಜ್ಜು

by Shwetha
August 10, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಆರ್ ಎಸ್ ಎಸ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ವಾಕ್ಸಮರ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಸಂಘ ಪರಿವಾರದ ಚಟುವಟಿಕೆಗಳಿಗೆ ಕಡಿವಾಣ...

ಭಾರತ್ ಮಾತಾ ಕಿ ಜೈ ಎನ್ನುವವರ ಬಳಿ ಮಾತ್ರ ವ್ಯಾಪಾರ ಮಾಡಿ: ಹಿಂದೂಗಳಿಗೆ ಭವ್ಯ ಗೌಡ ಬಹಿರಂಗ ಸಂದೇಶ

ಭಾರತ್ ಮಾತಾ ಕಿ ಜೈ ಎನ್ನುವವರ ಬಳಿ ಮಾತ್ರ ವ್ಯಾಪಾರ ಮಾಡಿ: ಹಿಂದೂಗಳಿಗೆ ಭವ್ಯ ಗೌಡ ಬಹಿರಂಗ ಸಂದೇಶ

by Shwetha
August 10, 2026
0

ಬೆಂಗಳೂರು: ಭಾರತದ ಮಣ್ಣಿನ ಬಗ್ಗೆ ಕೃತಜ್ಞತೆ ಮತ್ತು ಗೌರವ ಉಳ್ಳವರ ಜೊತೆ ಮಾತ್ರ ಹಿಂದೂಗಳು ವ್ಯಾಪಾರ ಮಾಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ವಕ್ತಾರೆ ಭವ್ಯ ಮೋಹನ್...

ದಿನ ಭವಿಷ್ಯ (26-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (10-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
August 10, 2026
0

ದಿನ ಭವಿಷ್ಯ: 10-08-2026. ಮೇಷ ರಾಶಿ ಇಂದು ನಿಮಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ನಿಮ್ಮ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram