ADVERTISEMENT
Monday, August 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಬೆಂಗಳೂರು

ನೈಸ್ ಸಂಸ್ಥೆಯ ಟೋಲ್ ದಗಾಬಾಜಿಗೆ ಬ್ರೇಕ್ ಹಾಕಿ: ಡಿಕೆಶಿ ಸರ್ಕಾರಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಒತ್ತಾಯ

Shwetha by Shwetha
August 17, 2026
in ಬೆಂಗಳೂರು, Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿರುವ ನೈಸ್ ರಸ್ತೆಯಲ್ಲಿ (BMICP) ಯಾವುದೇ ನಿಯಮಾವಳಿಗಳಿಲ್ಲದೆ ಅನಧಿಕೃತವಾಗಿ ಸಂಗ್ರಹಿಸುತ್ತಿರುವ ಟೋಲ್ ವಸೂಲಿಯನ್ನು ತಕ್ಷಣವೇ ಜಾರಿಗೆ ಬರುವಂತೆ ನಿಷೇಧಿಸಬೇಕು ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ತೀವ್ರವಾಗಿ ಆಗ್ರಹಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ 7 ಪುಟಗಳ ಸುದೀರ್ಘ ಪತ್ರ ಬರೆದಿರುವ ಅವರು, ನೈಸ್ ಸಂಸ್ಥೆಯ ಅಕ್ರಮಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ನೈಸ್ ಸಂಸ್ಥೆಯು ಬಿಎಂಐಸಿಪಿ ಯೋಜನೆಯ ಮೂಲ ಒಪ್ಪಂದದ (FWA & PTA) ಷರತ್ತುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಶೇಷ ಶಾಸನವೊಂದನ್ನು ರಚಿಸುವ ಮೂಲಕ ಸಂಪೂರ್ಣ ಬಿಎಂಐಸಿಪಿ ಯೋಜನೆಯನ್ನು ತನ್ನ ವಶಕ್ಕೆ ಪಡೆದುಕೊಳ್ಳಬೇಕು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳು ಹಾಗೂ ಶಾಸನಸಭಾ ಸದನ ಸಮಿತಿಯ ಶಿಫಾರಸುಗಳಂತೆ ನೈಸ್ ಸಂಸ್ಥೆಯು ಒಪ್ಪಂದದ ಒಂದೂ ನಿಯಮವನ್ನು ಸರಿಯಾಗಿ ಪಾಲಿಸಿಲ್ಲ ಎಂದು ಕುಮಾರಸ್ವಾಮಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Related posts

ಕರ್ನಾಟಕದ ಸಿಎಂ ಆಗ್ತಾರಾ ನಟ ಯಶ್? ರಾಜಕೀಯ ಪ್ರವೇಶದ ಕುರಿತು ಯಶ್ ನೀಡಿದ ಮಾಸ್ ರಿಯಾಕ್ಷನ್ ವೈರಲ್

ಕರ್ನಾಟಕದ ಸಿಎಂ ಆಗ್ತಾರಾ ನಟ ಯಶ್? ರಾಜಕೀಯ ಪ್ರವೇಶದ ಕುರಿತು ಯಶ್ ನೀಡಿದ ಮಾಸ್ ರಿಯಾಕ್ಷನ್ ವೈರಲ್

August 17, 2026
2029ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಾನು ಗೃಹಸಚಿವನಾದರೆ RSS ವಿದೇಶಿ ದೇಣಿಗೆ ತನಿಖೆ ಮಾಡಿಸುತ್ತೇನೆ: ಪ್ರಿಯಾಂಕ್ ಖರ್ಗೆ

2029ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಾನು ಗೃಹಸಚಿವನಾದರೆ RSS ವಿದೇಶಿ ದೇಣಿಗೆ ತನಿಖೆ ಮಾಡಿಸುತ್ತೇನೆ: ಪ್ರಿಯಾಂಕ್ ಖರ್ಗೆ

August 17, 2026

23 ವರ್ಷಗಳಿಂದ ಪರಿಹಾರವಿಲ್ಲದೆ ಬೀದಿಗೆ ಬಿದ್ದ ರೈತರು

ಯೋಜನೆಗಾಗಿ ಸಾವಿರಾರು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು 23 ವರ್ಷಗಳು ಕಳೆದಿದ್ದರೂ, ಭೂಮಿ ಕಳೆದುಕೊಂಡ ಬಡ ರೈತರಿಗೆ ಮತ್ತು ಮಾಲೀಕರಿಗೆ ಇದುವರೆಗೂ ಸೂಕ್ತ ಪರಿಹಾರ ನೀಡಲಾಗಿಲ್ಲ. ಇದರಿಂದಾಗಿ ನೂರಾರು ರೈತರ ಕುಟುಂಬಗಳು ಬೀದಿಗೆ ಬಿದ್ದಿವೆ. 30 ವರ್ಷಗಳಾದರೂ ಈ ಯೋಜನೆಯನ್ನು ಪೂರ್ಣಗೊಳಿಸಲು ನೈಸ್ ಸಂಸ್ಥೆಗೆ ಸಾಧ್ಯವಾಗಿಲ್ಲ. ಮೂಲ ಯೋಜನೆಯಂತೆ 2012 ಹಾಗೂ 2014ರೊಳಗೆ ಪೂರ್ಣಗೊಳ್ಳಬೇಕಿದ್ದ ಎಕ್ಸ್‌ಪ್ರೆಸ್ ರಸ್ತೆ ಹಾಗೂ 12 ವರ್ಷಗಳಲ್ಲಿ ಮುಗಿಯಬೇಕಿದ್ದ ನಗರ ಸಮುಚ್ಛಯಗಳನ್ನು ನೈಸ್ ಕಂಪನಿ ಇಂದಿಗೂ ಪೂರ್ಣಗೊಳಿಸಿಲ್ಲ ಎಂದು ದೂರಿದ್ದಾರೆ.

ಜುಲೈ 29 ರಂದು ಹೈಕೋರ್ಟ್ ವಿಭಾಗೀಯ ಪೀಠ ನೀಡಿರುವ ತೀರ್ಪನ್ನು ಪತ್ರದಲ್ಲಿ ನೆನಪಿಸಿರುವ ಕುಮಾರಸ್ವಾಮಿ, ಈ ಯೋಜನೆಯನ್ನು ರದ್ದುಪಡಿಸಲು ನ್ಯಾಯಾಲಯ ಸೂಚಿಸಿದೆ. ಸಂಸ್ಥೆಗೆ ನೀಡಲಾಗಿರುವ ಜಮೀನನ್ನು ವಾಪಸ್ ಪಡೆಯಬೇಕು, ಅನಧಿಕೃತವಾಗಿ ಸಂಗ್ರಹಿಸುತ್ತಿರುವ ಟೋಲ್ ವಸೂಲಿಯನ್ನು ನಿಲ್ಲಿಸಬೇಕು ಹಾಗೂ ಮೂಲ ಒಪ್ಪಂದದಿಂದ ಹೊರಗುಳಿದಿರುವ ಭೂಮಿಯನ್ನು ಅಧಿಸೂಚನೆಯಿಂದ ಕೈಬಿಡಬೇಕು. ಹೆಚ್ಚುವರಿಯಾಗಿ ನೀಡಲಾಗಿರುವ 554 ಎಕರೆ ಭೂಮಿಯನ್ನು ಸರ್ಕಾರ ತಕ್ಷಣವೇ ತನ್ನ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಅಂಜುಂ ಪರ್ವೇಜ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ, 111 ಕಿಮೀ ಉದ್ದದ ಎಕ್ಸ್‌ಪ್ರೆಸ್ ರಸ್ತೆ ಪೈಕಿ ನೈಸ್ ಸಂಸ್ಥೆ ನಿರ್ಮಿಸಿದ್ದು ಕೇವಲ 5 ಕಿಮೀ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ. ಸುಮಾರು 20 ಸಾವಿರ ಎಕರೆ ಭೂಮಿಯನ್ನು ನೈಸ್ ಸಂಸ್ಥೆಗೆ ನೀಡಿರುವುದು ಒಂದು ದೊಡ್ಡ ಹಗರಣ ಎಂದು ಕೋರ್ಟ್ ಉಲ್ಲೇಖಿಸಿದೆ. ಸಂಸ್ಥೆಯು ಮೂಲ ಉದ್ದೇಶಕ್ಕೆ ಭೂಮಿ ಬಳಸದೆ ವಾಣಿಜ್ಯ ಉಪಯೋಗಕ್ಕೆ ಬಳಸಿ ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಂಡಿದೆ. 2016 ರಲ್ಲಿ ಟಿ. ಬಿ. ಜಯಚಂದ್ರ ಅವರ ನೇತೃತ್ವದ ಸದನ ಸಮಿತಿ ನೀಡಿದ ವರದಿಯನ್ನು ಆಧರಿಸಿ ಸರ್ಕಾರ ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ShareTweetSendShare
Join us on:

Related Posts

ಕರ್ನಾಟಕದ ಸಿಎಂ ಆಗ್ತಾರಾ ನಟ ಯಶ್? ರಾಜಕೀಯ ಪ್ರವೇಶದ ಕುರಿತು ಯಶ್ ನೀಡಿದ ಮಾಸ್ ರಿಯಾಕ್ಷನ್ ವೈರಲ್

ಕರ್ನಾಟಕದ ಸಿಎಂ ಆಗ್ತಾರಾ ನಟ ಯಶ್? ರಾಜಕೀಯ ಪ್ರವೇಶದ ಕುರಿತು ಯಶ್ ನೀಡಿದ ಮಾಸ್ ರಿಯಾಕ್ಷನ್ ವೈರಲ್

by Shwetha
August 17, 2026
0

ಬೆಂಗಳೂರು: ದಳಪತಿ ವಿಜಯ ತಮಿಳುನಾಡಿನಲ್ಲಿ ಸ್ವಂತ ಪಕ್ಷ ಕಟ್ಟಿ ಸಿಎಂ ಪೀಠದತ್ತ ಹೆಜ್ಜೆ ಇಟ್ಟಿರುವ ಬೆನ್ನಲ್ಲೇ, ಸ್ಯಾಂಡಲ್‌ವುಡ್‌ನ ಗಂಡುಗಲಿ ರಾಕಿಂಗ್ ಸ್ಟಾರ್ ಯಶ್ ಕೂಡ ಕರ್ನಾಟಕ ರಾಜಕೀಯಕ್ಕೆ...

2029ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಾನು ಗೃಹಸಚಿವನಾದರೆ RSS ವಿದೇಶಿ ದೇಣಿಗೆ ತನಿಖೆ ಮಾಡಿಸುತ್ತೇನೆ: ಪ್ರಿಯಾಂಕ್ ಖರ್ಗೆ

2029ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಾನು ಗೃಹಸಚಿವನಾದರೆ RSS ವಿದೇಶಿ ದೇಣಿಗೆ ತನಿಖೆ ಮಾಡಿಸುತ್ತೇನೆ: ಪ್ರಿಯಾಂಕ್ ಖರ್ಗೆ

by Shwetha
August 17, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಹಾಗೂ ರಾಜ್ಯ ಸರ್ಕಾರದ ನಡುವಿನ ಶೀತಲ ಸಮರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. 2029ರಲ್ಲಿ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು,...

ಸಕಲ ಐಶ್ವರ್ಯ ಸೌಭಾಗ್ಯ ತರುವ ವರಮಹಾಲಕ್ಷ್ಮಿ ವ್ರತ: ವರಮಹಾಲಕ್ಷ್ಮಿ ಪೂಜೆಯಲ್ಲಿ ಕಂಕಣ ಧಾರಣೆ ಮತ್ತು ಕಲಶ ನೀರಿನ ರಹಸ್ಯ- ಮನೆಯಲ್ಲಿ ಸಿರಿ-ಸಂಪತ್ತು ನೆಲೆಸಲು ಹೀಗೆ ಮಾಡಿ

ಸಕಲ ಐಶ್ವರ್ಯ ಸೌಭಾಗ್ಯ ತರುವ ವರಮಹಾಲಕ್ಷ್ಮಿ ವ್ರತ: ವರಮಹಾಲಕ್ಷ್ಮಿ ಪೂಜೆಯಲ್ಲಿ ಕಂಕಣ ಧಾರಣೆ ಮತ್ತು ಕಲಶ ನೀರಿನ ರಹಸ್ಯ- ಮನೆಯಲ್ಲಿ ಸಿರಿ-ಸಂಪತ್ತು ನೆಲೆಸಲು ಹೀಗೆ ಮಾಡಿ

by Shwetha
August 17, 2026
0

ಸಮೃದ್ಧಿ, ಐಶ್ವರ್ಯ ಮತ್ತು ಸೌಭಾಗ್ಯದ ದೇವತೆಯಾದ ಶ್ರೀ ವರಮಹಾಲಕ್ಷ್ಮಿ ವ್ರತವು ಮುತ್ತೈದೆಯರ ಪಾಲಿಗೆ ಅತ್ಯಂತ ಪವಿತ್ರವಾದ ಹಬ್ಬವಾಗಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಎರಡನೇ ಶುಕ್ರವಾರದಂದು ಆಚರಿಸಲಾಗುವ...

ಯಾರೋ ಒಬ್ಬರ ಅಭಿಪ್ರಾಯದಿಂದ ನನ್ನ ವ್ಯಕ್ತಿತ್ವ ಬದಲಾಗಲ್ಲ: ರಶ್ಮಿಕಾ ‘ಮಿಸ್ಟರ್ ಶೋ ಆಫ್’ ಕಾಮೆಂಟ್‌ಗೆ ನಟ ಯಶ್ ಸೈಲೆಂಟ್ ಕೌಂಟರ್

ಯಾರೋ ಒಬ್ಬರ ಅಭಿಪ್ರಾಯದಿಂದ ನನ್ನ ವ್ಯಕ್ತಿತ್ವ ಬದಲಾಗಲ್ಲ: ರಶ್ಮಿಕಾ ‘ಮಿಸ್ಟರ್ ಶೋ ಆಫ್’ ಕಾಮೆಂಟ್‌ಗೆ ನಟ ಯಶ್ ಸೈಲೆಂಟ್ ಕೌಂಟರ್

by Shwetha
August 17, 2026
0

ಸ್ಯಾಂಡಲ್‌ವುಡ್‌ನಿಂದ ಭಾರತೀಯ ಚಿತ್ರರಂಗದ ಉನ್ನತ ಮಟ್ಟಕ್ಕೆ ಬೆಳೆದು ನಿಂತಿರುವ ರಾಕಿಂಗ್ ಸ್ಟಾರ್ ಯಶ್, ಇಂಡಿಯಾ ಟಿವಿಯ ಜನಪ್ರಿಯ ಕಾರ್ಯಕ್ರಮ ಆಪ್ ಕಿ ಅದಾಲತ್‌ನಲ್ಲಿ ಭಾಗವಹಿಸಿ ಹಲವು ಕುತೂಹಲಕಾರಿ...

ಅಕ್ರಮ ಬಾಂಗ್ಲಾದೇಶಿಗರನ್ನ ತಕ್ಷಣ ಗಡಿಪಾರು ಮಾಡಿ- ಈ ಹಾವುಗಳನ್ನು ತಕ್ಷಣ ಓಡಿಸಿ ಇಲ್ಲವೇ ನಾವೇ ರಸ್ತೆಗೆ ಇಳಿಯುತ್ತೇವೆ: ರಾಜ್ಯ ಸರ್ಕಾರಕ್ಕೆ ಸೂಲಿಬೆಲೆ ಪ್ರೀತಿಯ ಎಚ್ಚರಿಕೆ

ಅಕ್ರಮ ಬಾಂಗ್ಲಾದೇಶಿಗರನ್ನ ತಕ್ಷಣ ಗಡಿಪಾರು ಮಾಡಿ- ಈ ಹಾವುಗಳನ್ನು ತಕ್ಷಣ ಓಡಿಸಿ ಇಲ್ಲವೇ ನಾವೇ ರಸ್ತೆಗೆ ಇಳಿಯುತ್ತೇವೆ: ರಾಜ್ಯ ಸರ್ಕಾರಕ್ಕೆ ಸೂಲಿಬೆಲೆ ಪ್ರೀತಿಯ ಎಚ್ಚರಿಕೆ

by Shwetha
August 17, 2026
0

ಬೆಂಗಳೂರು: ರಾಜ್ಯದಲ್ಲಿ ಅಕ್ರಮವಾಗಿ ಆಶ್ರಯ ಪಡೆದಿರುವ ಬಾಂಗ್ಲಾದೇಶಿ ವಲಸಿಗರನ್ನು ತಕ್ಷಣವೇ ಪತ್ತೆ ಹಚ್ಚಿ ದೇಶದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram