ಕಲಬುರಗಿ: ಕೋವಿಡ್ ಆಸ್ಪತ್ರೆಯಾಗಿರುವ ಕಲಬುರಗಿ ಜಿಲ್ಲಾಸ್ಪತ್ರೆ ಜಿಮ್ಸ್‍ನಲ್ಲಿ ಹಂದಿಗಳು ಬಿಂದಾಸ್ ಓಡಾಟ ನಡೆಸಿದ ಘಟನೆ ಬೆಳಿಕಿಗೆ ಬಂದಿದೆ.
ಕಲಬುರ್ಗಿಯ ಜಿಲ್ಲಾಸ್ಪತ್ರೆ ಅಧಿಕಾರಿಗಳು, ಸಿಬ್ಬಂದಿಯ ದಿವ್ಯ ನಿರ್ಲಕ್ಷ್ಯಕ್ಕೆ ರೋಗಿಗಳು ಬೆಚ್ಚಿ ಬಿದ್ದಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಹಂದಿಗಳು ಬಿಂದಾಸ್ ಓಡಾಟ ನಡೆಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಲ್ಲಿಯೇ ಯಾಕಿಷ್ಟು ನಿರ್ಲಕ್ಷ್ಯ ಎಂಬ ಮಾತು ಕೇಳಿ ಬಂದಿದೆ.
ಒಂದು ಸಾರಿ ಕಣ್ಣು ಬಿಟ್ಟು ನೋಡಿ ಈ ಅವ್ಯವಸ್ಥೆಯನ್ನ ಎಂದು ರೋಗಿಗಳು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಜಿಮ್ಸ್ ಆಸ್ಪತ್ರೆಯಲ್ಲಿ ಹಂದಿಗಳ ಉಪಟಳ ಹೆಚ್ಚಾಗಿರುವುದಕ್ಕೆ ಕೊನೆಗೂ ಜಿಲ್ಲಾಡಳಿತ ಎಚ್ಚೆತ್ತಿದೆ.
ಇದರ ಬೆನ್ನ ಹಿಂದೆಯೇ ಜಿಮ್ಸ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಶರತ್ ದಿಢೀರ್ ಭೇಟಿ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಜತೆ ಜಿಲ್ಲಾ ಪಂಚಾಯತ್ ಸಿಇಒ ಪಿ.ರಾಜಾ ಹಾಗು ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಸಹ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜಿಮ್ಸ್ ಆವರಣದಲ್ಲಿ ಅಡ್ಡಾಡುತ್ತಿದ್ದ ಹಂದಿಗಳನ್ನು ಪಾಲಿಕೆ ಸಿಬ್ಬಂದಿ ಹಿಡಿದು ನಗರದ ಹೊರವಲಯಕ್ಕೆ ಸಾಗಿಸಿದ್ದಾರೆ. ಆವರಣದಲ್ಲಿದ್ದ ಹಂದಿಗಳ ಸ್ಥಳಾಂತರಕ್ಕೆ ಅವುಗಳ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಹಂದಿ ಮಾಲೀಕರ ಮೇಲೆ ಎಫ್‍ಐರ್ ದಾಖಲಿಸಲು ಜಿಲ್ಲಾಧಿಕಾರಿ ಶರತ್ ಜಿಮ್ಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಂದಿಗಳು ಹಾಯಾಗಿ ಅಡ್ಡಾಡುತ್ತಿದ್ದರೂ ಜಿಮ್ಸ್ ಸಿಬ್ಬಂದಿ ತಲೆಕೆಡಿಸಿಕೊಂಡಿರಲಿಲ್ಲ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಜಿಮ್ಸ್ ಆವರಣದಲ್ಲಿದ್ದ ಎಲ್ಲ ಹಂದಿಗಳನ್ನು ಹೆಡೆಮುರಿ ಕಟ್ಟಿ ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದೆ. ಒಟ್ಟಿನಲ್ಲಿ ಕೊರೋನಾ ಕಷ್ಟದಿಂದ ಕಂಗಾಲಾಗಿರುವ ಈ ಸಮಯದಲ್ಲಿ ಆಸ್ಪತ್ರೆಗಳಿಗೆ ಹಂದಿಗಳು ನುಗ್ಗಿ ಹಾಯಾಗಿ ಸುತ್ತಾಡುತ್ತಿವೆ ಅಂದ್ರೆ ಇದು ಜಿಲ್ಲಾಡಳಿತದ ವೈಫಲ್ಯ ಎಂಬ ಮಾತುಗಳು ಕೇಳಿ ಬರುತ್ತಿವೆ.
ಜಿಬಿಎ ದಂಡದ ಬಿಸಿ- ಆ.22ರ ಡೆಡ್ಲೈನ್ಗೆ ಹೆದರಿ ಜೆಸಿಬಿಗೆ ಮುಗಿಬಿದ್ದ ಜನ, ಗಂಟೆಗೆ ಸಾವಿರ ಇದ್ದ ಬಾಡಿಗೆ ಈಗ ಹತ್ತು ಸಾವಿರಕ್ಕೆ ಜಂಪ್:ಬೆಂಗಳೂರಿನಲ್ಲಿ ಖಾಲಿ ನಿವೇಶನದಾರರ ಗೋಳು ಕೇಳೋರಾರು?
ಬೆಂಗಳೂರು: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಪಂಚ ಪಾಲಿಕೆಗಳಲ್ಲಿ ಖಾಲಿ ನಿವೇಶನಗಳ ಮಾಲೀಕರಿಗೆ ಜಿಬಿಎ ನೀಡಿದ ಒಂದು ಖಡಕ್ ಎಚ್ಚರಿಕೆ ಇಡೀ ನಗರದಲ್ಲಿ ಭಾರೀ...







