ADVERTISEMENT
Tuesday, September 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಭ್ರಷ್ಟಾಚಾರದ ಪಿತಾಮಹರಿಂದಲೇ ಪಾದಯಾತ್ರೆ: ಸಚಿವ ಶಿವರಾಜ ಎಸ್ ತಂಗಡಗಿ ಕಿಡಿ

admin by admin
September 1, 2026
in Newsbeat, State, ರಾಜ್ಯ
bhraṣṭacharada-pitamaharinda-padayatre-shivaraj-tangadagi

bhraṣṭacharada-pitamaharinda-padayatre-shivaraj-tangadagi

Share on FacebookShare on TwitterShare on WhatsappShare on Telegram

ಕೊಪ್ಪಳ: ‘ಭ್ರಷ್ಟಾಚಾರದ ಪಿತಾಮಹರೇ ಪಾದಯಾತ್ರೆ ನಡೆಸುತ್ತಿದ್ದಾರೆ. ಪಾದಯಾತ್ರೆ ನಡೆಸುತ್ತಿರುವ ನಾಯಕರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ತಂದೆ ಯಾಕೆ ಜೈಲಿಗೆ ಹೋಗಿದ್ದರು? ಅಕ್ರಮಗಳ ಹಿನ್ನೆಲೆ ಜೈಲು ಪಾಲಾಗಿದ್ದ ಜನಾರ್ದನರೆಡ್ಡಿ ಯಾಕೆ ಪಾದಯಾತ್ರೆ ಮಾಡುತ್ತಿದ್ದಾರೆ? ಎಂಬುದನ್ನು ಉತ್ತರಿಸಲಿ’ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ಎಸ್‌. ತಂಗಡಗಿ ಅವರು
ಸವಾಲು ಹಾಕಿದ್ದಾರೆ.

ಬಿಜೆಪಿಯವರು ಪಾದಯಾತ್ರೆ ಯಾಕೆ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಭ್ರಷ್ಟಾಚಾರದ ವಿಷಯವನ್ನಿಟ್ಟುಕೊಂಡು ಪಾದಯಾತ್ರೆ ಮಾಡಲಿ. ರಾಜ್ಯಾದ್ಯಂತ ಬರ ಆವರಿಸಿದೆ. ಕೇಂದ್ರದ ವಿರುದ್ಧ ಬರ ಪರಿಹಾರ ನೀಡುವಂತೆ ಒತ್ತಾಯಿಸಿ ಪಾದಯಾತ್ರೆ ಮಾಡಲಿ. ಅದನ್ನು ಬಿಟ್ಟು ರಾಜಕೀಯ ಮಾಡಲು ಮಾಡಬಾರದು ಎಂದರು.

Related posts

charchge-barada-bjp-eega-padayatre-priyank-kharge

ಚರ್ಚೆಗೆ ಬಾರದ ಬಿಜೆಪಿ ಈಗ ಪಾದಯಾತ್ರೆ ಮಾಡುತ್ತಿದೆ: ಪ್ರಿಯಾಂಕ್ ಖರ್ಗೆ

September 1, 2026
gadag-drought-second-list-soon-cm-dk-shivakumar

ಶೀಘ್ರವೇ ಬರ ಪೀಡಿತ ತಾಲ್ಲೂಕುಗಳ ಎರಡನೇ ಪಟ್ಟಿ ಪ್ರಕಟ: ಸಿಎಂ ಡಿ ಕೆ ಶಿವಕುಮಾರ್

September 1, 2026

ಇವರಿಗೆ ಸದನದಲ್ಲಿ ಜನರ ಸಮಸ್ಯೆಗಳ ಚರ್ಚೆ ಮಾಡಲು ಸಮಯವಿಲ್ಲ. ರೈತರು ಹಾಗೂ ಬಡವರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಇವರಿಗೆ ಬೇಕಾಗಿರುವುದು ಕೇವಲ
ರಾಜಕಾರಣ. ನೂರಕ್ಕೆ ನೂರು ಇದು ಬಿಜೆಪಿಯವರ ಪಾದಯಾತ್ರೆಯಲ್ಲ. ಇದು ಪಶ್ಚಾತ್ತಾಪದ ಯಾತ್ರೆ. ಎಲ್ಲಾ ಭ್ರಷ್ಟಾಚಾರಿಗಳು, ರಾಜ್ಯದ ವಿರುದ್ಧ ಕೆಲಸ ಮಾಡಿದವರು ಸೇರಿಕೊಂಡು ಈ ಪಶ್ಚಾತ್ತಾಪದ ಪಾದಯಾತ್ರೆ ಕೈಗೊಂಡಿದ್ದಾರೆ ಎಂದು ಕಿಡಿ ಕಾರಿದರು.

ಕೆಪಿಎಸ್‌ಸಿ‌ ಅಧ್ಯಕ್ಷರನ್ನು ನೇಮಿಸಿದ್ದು ಯಾರು?
ಕೇಂದ್ರ ಸಚಿವ ಸೋಮಣ್ಣ ಅವರು ಪಾದಯಾತ್ರೆಯ ಬಗ್ಗೆ ವಿರೋಧವಾಗಿ ಮಾತನಾಡುತ್ತಾರೆ. ಕುಮಾರಸ್ವಾಮಿ ಅವರೂ ಈಗ ಪಾದಯಾತ್ರೆ ಯಾಕೆ? ಎಂದು ಪ್ರಶ್ನಿಸುತ್ತಿದ್ದಾರೆ. ಹೀಗಿದ್ದರೂ ಪಾದಯಾತ್ರೆ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.
ಭೋವಿ ಅಭಿವೃದ್ಧಿ ನಿಗಮದ ಹಣವನ್ನು ಲೂಟಿ ಮಾಡಿದ್ದು ಯಾರು? ಅಕ್ರಮ ನೇಮಕಾತಿ ಆರೋಪ ಎದುರಿಸುತ್ತಿರುವವರನ್ನು ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ಮಾಡಿದ್ದು ಯಾರು? ಈ ಪ್ರಕರಣದ ಆರೋಪಿಗಳು ಯಾರು? ಬಿಜೆಪಿಯನ್ನು ಜನರು ಮರೆತುಬಿಟ್ಟಿದ್ದರು. ಅದಕ್ಕಾಗಿ ಮತ್ತೆ ಜನರ ಮುಂದೆ ಕಾಣಿಸಿಕೊಳ್ಳಲು ಪಾದಯಾತ್ರೆ ಕೈಗೊಂಡಿದ್ದಾರೆ. ಬಿಜೆಪಿಯವರಿಗೆ ಮಾನ-ಮರ್ಯಾದೆ ಇದ್ದರೆ ಪಿಎಸ್‌ಐ ಹಗರಣ ಯಾರ ಕಾಲದಲ್ಲಿ ನಡೆಯಿತು ಎಂಬುದನ್ನು ಮೊದಲು ಹೇಳಲಿ ಎಂದರು.

ಎಸ್‌ಟಿಪಿ ಮತ್ತು ಟಿಎಸ್‌ಪಿ ಅನುದಾನವನ್ನು ಹೆಚ್ಚಿಸಿದವರು ನಾವು. ಆ ಹಣವನ್ನು ಎಸ್‌ಸಿ-ಎಸ್‌ಟಿ ಸಮುದಾಯದ ಅಭಿವೃದ್ಧಿಗೆ ನೀಡಿದರೆ ತಪ್ಪೇನು? ಈ ಯೋಜನೆಯನ್ನು ರೂಪಿಸಿ ಜಾರಿಗೆ ತಂದವರು ನಾವು. ಇದರಲ್ಲಿ ನಿಮ್ಮ ಪಾಲು ಏನು?
ತಾಕತ್ತು ಇದ್ದರೆ ಕೇಂದ್ರ ಸರ್ಕಾರಕ್ಕೆ ಹೇಳಿ, ಅಗತ್ಯ ಅನುದಾನವನ್ನು ಬಿಡುಗಡೆ ಮಾಡಿಸಲಿ ಎಂದು ಆಗ್ರಹಿಸಿದರು.

ಕೊಪ್ಪಳ ಪ್ರಾಧಿಕಾರ ಹಗರಣದ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದೇನೆ. ಆರೋಪಿಗಳನ್ನು ಬಂಧಿಸಿರುವ ಮಾಹಿತಿ ಇದೆ. ಈ ಕುರಿತು ಸಭೆ ಕರೆದು ಚರ್ಚೆ ಮಾಡುತ್ತೇನೆ. ಸೈಟ್ ಹಂಚಿಕೆ ವಿಚಾರದಲ್ಲಿ ಎಲ್ಲೆಲ್ಲಿ ಅಕ್ರಮ ನಡೆದಿದೆ ಎಂಬುದರ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ನಡೆಸುತ್ತೇನೆ. ಅಗತ್ಯವಿದ್ದರೆ ತನಿಖೆಗೆ ಅಧಿಕೃತವಾಗಿ ಸೂಚನೆ ನೀಡುತ್ತೇನೆ ಎಂದು ಹೇಳಿದರು.

ಬರ ಘೋಷಣೆಯಲ್ಲಿ ತಾರತಮ್ಯವಿಲ್ಲ:
ಬರ ಘೋಷಣೆ ವಿಚಾರವಾಗಿ ಮಾತನಾಡಿದ ಅವರು, ಬರ ಘೋಷಣೆಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿವೆ. ಆ ಮಾರ್ಗಸೂಚಿಗಳ ಪ್ರಕಾರ ಅರ್ಹವಾಗಿರುವ ತಾಲೂಕುಗಳಲ್ಲಿ ಬರ ಘೋಷಣೆ ಮಾಡಲಾಗಿದೆ. ಇಲ್ಲಿ ಬಿಜೆಪಿ, ಜೆಡಿಎಸ್ ಅಥವಾ ಕಾಂಗ್ರೆಸ್ ಕ್ಷೇತ್ರ ಎಂಬ ಯಾವುದೇ ತಾರತಮ್ಯ ಮಾಡಿಲ್ಲ. ಎರಡನೇ ಸುತ್ತಿನಲ್ಲಿ ಮತ್ತಷ್ಟು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸಚಿವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಯರೆಡ್ಡಿ ಅವರು ಮುಸ್ಲಿಂ ಸಮಾಜದ ಕಾರ್ಯಕ್ರಮಕ್ಕೆ ಹೋದಾಗ ಸಹಜವಾಗಿಯೇ ಆ ಸಮಾಜದ ಬಗ್ಗೆ ಮಾತನಾಡುವುದು ಸಾಮಾನ್ಯ. ಅದನ್ನು ದೊಡ್ಡ ವಿವಾದವನ್ನಾಗಿ ಮಾಡುವುದು ಸರಿಯಲ್ಲ. ಅವರು ಮುಸ್ಲಿಂ ಹಾಗೂ ಹಿಂದೂ ಧರ್ಮ ಸೇರಿ ಎಲ್ಲ ಧರ್ಮವನ್ನೂ ಪ್ರೀತಿಸುತ್ತಾರೆ. ನಾನು ಸಹ ಎಲ್ಲ ಧರ್ಮಗಳನ್ನೂ ಪ್ರೀತಿಸುತ್ತೇನೆ ಎಂದು ಶಿವರಾಜ ತಂಗಡಗಿ ಅವರು ಹೇಳಿದರು.

ಬಿಜೆಪಿಯ ಸುನಿಲ್ ಕುಮಾರ್ ಅವರ ಹೇಳಿಕೆ ಗಮನಿಸಿದ್ದೇನೆ. ಬಿಜೆಪಿಯವರಿಗೆ ಧರ್ಮ ಎಂದ ಕೂಡಲೇ ಅವರ ಕಣ್ಣುಗಳು ದೊಡ್ಡದಾಗುತ್ತವೆ. ಮಾಡಬೇಕಾದ ಚರ್ಚೆಯನ್ನು ಅವರು ಮಾಡುವುದಿಲ್ಲ. ಅಧಿವೇಶನ ನಡೆಯಬೇಕಾದ ಸಂದರ್ಭದಲ್ಲಿ ಬೇರೆ ವಿಚಾರಗಳನ್ನು ಪ್ರಸ್ತಾಪಿಸಿದರು. ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿದರು. ಸದನದಲ್ಲಿ ಚರ್ಚೆ ಮಾಡಲು ವೇದಿಕೆ ಸಿಕ್ಕಿದ್ದರೂ ಅದನ್ನು ಬಳಸಿಕೊಳ್ಳಲಿಲ್ಲ. ಶಾಸಕರು ಸದನದಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಮಾಡಲಿಲ್ಲ. ಒಂದು ವಾರದ ಕಾಲ ಸದನದ ಕಲಾಪವನ್ನು ಹಾಳು ಮಾಡಿದರು ಎಂದು ದೂರಿದರು.

Tags: #ShivrajTangadagi #KarnatakaPolitics #BJP #BJPPadayatra #BYVijayendra #JanardhanaReddy #Corruption #KarnatakaDrought #DroughtDeclaration #KPSC #PSIScam #Koppal #STP #TSP #KarnatakaGovernment
ShareTweetSendShare
Join us on:

Related Posts

charchge-barada-bjp-eega-padayatre-priyank-kharge

ಚರ್ಚೆಗೆ ಬಾರದ ಬಿಜೆಪಿ ಈಗ ಪಾದಯಾತ್ರೆ ಮಾಡುತ್ತಿದೆ: ಪ್ರಿಯಾಂಕ್ ಖರ್ಗೆ

by admin
September 1, 2026
0

ಕಲಬುರಗಿ - ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಹೇಳಿ ಬಿಜೆಪಿ ಆರಂಭಿಸಿರುವ ಪಾದಯಾತ್ರೆಯ ಉದ್ದೇಶವೇನು ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ...

gadag-drought-second-list-soon-cm-dk-shivakumar

ಶೀಘ್ರವೇ ಬರ ಪೀಡಿತ ತಾಲ್ಲೂಕುಗಳ ಎರಡನೇ ಪಟ್ಟಿ ಪ್ರಕಟ: ಸಿಎಂ ಡಿ ಕೆ ಶಿವಕುಮಾರ್

by admin
September 1, 2026
0

ಗದಗ, "ನಾವು ಮಾರ್ಗಸೂಚಿ ಅನುಸಾರ ಬರ ಪ್ರದೇಶ ಘೋಷಣೆ ಮಾಡಬೇಕು. ಅದರನ್ವಯ ಅಧ್ಯಯನ ಮಾಡಿ ಎರಡನೇ ಪಟ್ಟಿಯನ್ನು ಶೀಘ್ರವೇ ಘೋಷಣೆ ಮಾಡುತ್ತೇವೆ" ಎಂದು ಸಿಎಂ ಡಿ ಕೆ ಶಿವಕುಮಾರ್...

dk-shivakumar-gadag-drought-review-public-service-gram-panchayat-panch-garanti

ಗದಗ ಜಿಲ್ಲೆಯಲ್ಲಿ ಬರ ಪರಿಸ್ಥಿತಿ: ಅಧಿಕಾರಿಗಳು ಕೇಂದ್ರ ಸ್ಥಳದಲ್ಲೇ ವಾಸವಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು – ಡಿ.ಕೆ. ಶಿವಕುಮಾರ್

by admin
September 1, 2026
0

ಗದಗ : ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಸೇರಿದಂತೆ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಅಧಿಕಾರಿಗಳು ಕೇಂದ್ರ ಸ್ಥಳದಲ್ಲೇ ವಾಸವಿದ್ದು, ಜನರಿಗೆ ಲಭ್ಯವಾಗಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ...

dk-shivakumar-5-percent-park-land-proposal-lalbagh-drought-declaration

ಪಾರ್ಕ್ ಜಾಗದ ಶೇ.5 ರಷ್ಟು ಬಳಕೆ ಪ್ರಸ್ತಾವನೆ ವಿವರಗಳ ಪರಿಶೀಲನೆ: ಸಿಎಂ ಡಿ.ಕೆ. ಶಿವಕುಮಾರ್

by admin
September 1, 2026
0

ಬೆಂಗಳೂರು, ಉದ್ಯಾನಗಳಲ್ಲಿ ಶೇ.5ರಷ್ಟು ಜಾಗ ನೀಡುವ ಈ ಪ್ರಸ್ತಾವನೆ ಏಕೆ ಬಂತು, ಹಿಂದಿನವರು ಏನು ಮಾಡಿದ್ದಾರೆ, ಯಾವ ಜಾಗವನ್ನು ಯಾರಿಗೆ ನೀಡಿದ್ದಾರೆ ಎಂಬುದನ್ನು ಪರಿಶೀಲಿಸುತ್ತೇನೆ. ಕಡತ ತರಿಸಿಕೊಂಡು...

hv-ramesh-suspended-duty-lapse-bengaluru-street-light-maintenance |

ಕರ್ತವ್ಯ ಲೋಪ: ಕಾರ್ಯಪಾಲಕ ಅಭಿಯಂತರರು (ವಿದ್ಯುತ್) ಹೆಚ್. ವಿ. ರಮೇಶ್ ಅಮಾನತು.

by admin
September 1, 2026
0

ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರು (ವಿದ್ಯುತ್) ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಹೆಚ್. ವಿ. ರಮೇಶ್ ರವರು ಜವಾಬ್ದಾರಿಯುತ ಅಧಿಕಾರಿಯಾಗಿದ್ದು, ಬೀದಿ ದೀಪಗಳ ನಿರ್ವಹಣೆಯ ಉಸ್ತುವಾರಿಯನ್ನು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram