ADVERTISEMENT
Friday, November 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕಬ್ಬಿಗೆ ನ್ಯಾಯಯುತ ಬೆಲೆ ಕೇಳಿದ ರೈತರ ಮೇಲೆ ಪೊಲೀಸ್ ದಬ್ಬಾಳಿಕೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ಆಕ್ರೋಶ

admin by admin
November 6, 2026
in Newsbeat, State, ರಾಜ್ಯ
r-ashoka-slams-congress-government-farmers-protest-sugarcane-price-belagavi

r-ashoka-slams-congress-government-farmers-protest-sugarcane-price-belagavi

Share on FacebookShare on TwitterShare on WhatsappShare on Telegram

ಬೆಳಗಾವಿಯಲ್ಲಿ ‘ಜೈಲ್ ಭರೋ’ ಚಳವಳಿ ನಡೆಸಿದ 1,000ಕ್ಕೂ ಹೆಚ್ಚು ರೈತರ ವಶ; ಸೆಕ್ಷನ್ 163 ಜಾರಿ, ರೈತ ಮುಖಂಡರ ಬಂಧನಕ್ಕೆ ತೀವ್ರ ಖಂಡನೆ

ಬೆಂಗಳೂರು: ಕಬ್ಬಿಗೆ ನ್ಯಾಯಯುತ ಬೆಲೆ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸಿದ ಅನ್ನದಾತರಿಗೆ ಪರಿಹಾರ ನೀಡುವ ಬದಲು ಪೊಲೀಸ್ ದಬ್ಬಾಳಿಕೆ ನಡೆಸಿರುವ ಕಾಂಗ್ರೆಸ್ ಸರ್ಕಾರದ ರೈತವಿರೋಧಿ ಧೋರಣೆ ಮತ್ತೊಮ್ಮೆ ಬಯಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

r-ashoka-slams-congress-government-government-hospitals-fund-shortage-blood-tests

ಸರ್ಕಾರಿ ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆಗೂ ಅನುದಾನವಿಲ್ಲದ ದಿವಾಳಿ ಸ್ಥಿತಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ಕಿಡಿ

November 6, 2026
r-ashoka-alleges-corruption-bengaluru-waste-management-tender-congress-government

ಬೆಂಗಳೂರಿನ ಕಸ ವಿಲೇವಾರಿ ಟೆಂಡರ್‌ನಲ್ಲೂ ಕಮಿಷನ್ ದಂಧೆ ಆರೋಪ: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

November 6, 2026

ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಂಬಲ ಬೆಲೆ ನೀಡಬೇಕು ಹಾಗೂ ಬಾಕಿ ಹಣವನ್ನು ತಕ್ಷಣ ಪಾವತಿಸಬೇಕು ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ‘ಜೈಲ್ ಭರೋ’ ಚಳವಳಿ ನಡೆಸಿದ 1,000ಕ್ಕೂ ಹೆಚ್ಚು ರೈತರನ್ನು ಸರ್ಕಾರ ವಶಕ್ಕೆ ಪಡೆದಿರುವುದು ಖಂಡನೀಯ. ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ನಿಷೇಧಾಜ್ಞೆ, ಪೊಲೀಸ್ ಬಲಪ್ರಯೋಗ ಮತ್ತು ಬಂಧನದ ಮೂಲಕ ಹೋರಾಟವನ್ನು ಹತ್ತಿಕ್ಕಲು ಮುಂದಾಗಿರುವುದು ಯಾವ ರೀತಿಯ ಪ್ರಜಾಪ್ರಭುತ್ವ ಎಂದು ಅವರು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ರೈತರ ಆಕ್ರೋಶಕ್ಕೆ ನಿಮ್ಮ ಸರ್ಕಾರ ನೀಡುತ್ತಿರುವ ಉತ್ತರವೇನು? ನ್ಯಾಯಯುತ ಬೇಡಿಕೆ ಮುಂದಿಟ್ಟ ರೈತರ ಹೋರಾಟವನ್ನು ಹತ್ತಿಕ್ಕಲು ಸೆಕ್ಷನ್ 163 ಜಾರಿಗೊಳಿಸಿ ಪೊಲೀಸ್ ಬಲಪ್ರಯೋಗ ಮಾಡಿದ್ದೇಕೆ? ಮುಂಜಾಗ್ರತಾ ಕ್ರಮದ ಹೆಸರಿನಲ್ಲಿ ರೈತ ಮುಖಂಡರನ್ನು ಬಂಧಿಸಿ ಕಿರುಕುಳ ನೀಡುತ್ತಿರುವುದೇಕೆ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ಕಬ್ಬಿನ ಬೆಲೆ ನಿಗದಿಪಡಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಸಕ್ಕರೆ ಕಾರ್ಖಾನೆಗಳ ಹಿತಾಸಕ್ತಿಗೆ ಮಣೆ ಹಾಕಿ ರೈತರ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿದೆ. ಅಷ್ಟೇ ಅಲ್ಲದೆ, ಮಧ್ಯರಾತ್ರಿ ವಶಕ್ಕೆ ಪಡೆದ ರೈತರನ್ನು ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿ ಬಿಟ್ಟುಬಂದಿರುವುದು ಅಮಾನವೀಯ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವಾಗ ಪ್ರಜಾಪ್ರಭುತ್ವ, ಪ್ರತಿಭಟನೆಯ ಹಕ್ಕು ಮತ್ತು ರೈತರ ಸ್ವಾತಂತ್ರ್ಯದ ಬಗ್ಗೆ ದೊಡ್ಡದಾಗಿ ಮಾತನಾಡುವ ಕಾಂಗ್ರೆಸ್ ನಾಯಕರು, ಕರ್ನಾಟಕದಲ್ಲಿ ರೈತರು ತಮ್ಮ ಹಕ್ಕಿಗಾಗಿ ಧ್ವನಿ ಎತ್ತಿದಾಗ ಸರ್ವಾಧಿಕಾರಿಗಳಂತೆ ವರ್ತಿಸುತ್ತಿರುವುದೇಕೆ? ಅನ್ನದಾತರ ಬೆವರಿನ ದುಡಿಮೆಗೆ ನ್ಯಾಯ ಕೇಳುವುದೂ ಈ ಸರ್ಕಾರದ ಆಡಳಿತದಲ್ಲಿ ಅಪರಾಧವೇ ಎಂದು ಅಶೋಕ್ ಕಿಡಿಕಾರಿದ್ದಾರೆ.

ರೈತರ ಬೆಳೆಗೆ ನ್ಯಾಯಯುತ ಬೆಲೆ ನೀಡದ, ಬಾಕಿ ಹಣ ಕೊಡಿಸದ, ಅವರ ಧ್ವನಿಗೂ ಕಿವಿಗೊಡದ ಸರ್ಕಾರಕ್ಕೆ ರೈತಪರ ಎಂದು ಕರೆದುಕೊಳ್ಳುವ ನೈತಿಕತೆ ಎಲ್ಲಿದೆ? ರೈತರನ್ನು ಬಂಧಿಸಬಹುದು, ಅವರ ಹೋರಾಟವನ್ನು ತಾತ್ಕಾಲಿಕವಾಗಿ ಹತ್ತಿಕ್ಕಬಹುದು. ಆದರೆ ಅನ್ನದಾತರ ಆಕ್ರೋಶ ಮತ್ತು ನ್ಯಾಯದ ಹಕ್ಕಿನ ಧ್ವನಿಯನ್ನು ಶಾಶ್ವತವಾಗಿ ದಮನಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.

ಸರ್ಕಾರ ಕೂಡಲೇ ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸಬೇಕು. ರೈತರಿಗೆ ಬರಬೇಕಿರುವ ಬಾಕಿ ಹಣವನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು. ವಶಕ್ಕೆ ಪಡೆದ ರೈತರಿಗೆ ನ್ಯಾಯ ಒದಗಿಸಬೇಕು. ಪೊಲೀಸ್ ಬಲದ ಮೂಲಕ ಆಡಳಿತ ನಡೆಸುವುದನ್ನು ಬಿಟ್ಟು ಅನ್ನದಾತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಆರ್. ಅಶೋಕ್ ಆಗ್ರಹಿಸಿದ್ದಾರೆ.

ರೈತರ ಶಾಪ ಮತ್ತು ಆಕ್ರೋಶಕ್ಕೆ ಗುರಿಯಾಗಿರುವ ಈ ರೈತವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಅನ್ನದಾತರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ShareTweetSendShare
Join us on:

Related Posts

r-ashoka-slams-congress-government-government-hospitals-fund-shortage-blood-tests

ಸರ್ಕಾರಿ ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆಗೂ ಅನುದಾನವಿಲ್ಲದ ದಿವಾಳಿ ಸ್ಥಿತಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ಕಿಡಿ

by admin
November 6, 2026
0

ಆಸ್ಪತ್ರೆಗಳಲ್ಲಿ ಯಂತ್ರಗಳಿದ್ದರೂ ಪರೀಕ್ಷೆಗೆ ಹಣವಿಲ್ಲ; ಲ್ಯಾಬ್‌ಗಳು ಬಂದ್, ಔಷಧಿಗಳಿಗೂ ತತ್ವಾರ, ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವ ದುಸ್ಥಿತಿ ಬೆಂಗಳೂರು: ರಾಜ್ಯದ ಖಜಾನೆಯನ್ನು ಖಾಲಿ ಮಾಡಿ,...

r-ashoka-alleges-corruption-bengaluru-waste-management-tender-congress-government

ಬೆಂಗಳೂರಿನ ಕಸ ವಿಲೇವಾರಿ ಟೆಂಡರ್‌ನಲ್ಲೂ ಕಮಿಷನ್ ದಂಧೆ ಆರೋಪ: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

by admin
November 6, 2026
0

BSWML ಟೆಂಡರ್‌ಗಳಲ್ಲಿ ಗೋಲ್‌ಮಾಲ್ ಆರೋಪ; ಜಿಎಸ್‌ಟಿ, ಪ್ರೀಮಿಯಂ ಹೆಸರಿನಲ್ಲಿ ಶೇ.14ರಷ್ಟು ಹೆಚ್ಚುವರಿ ಹೊರೆ, ಸಂಪುಟಕ್ಕೆ ತಪ್ಪು ಮಾಹಿತಿ ನೀಡಿರುವ ಶಂಕೆ ಬೆಂಗಳೂರು: ಬ್ರಾಂಡ್ ಬೆಂಗಳೂರು ಹೆಸರಿನಲ್ಲಿ ಬಣ್ಣಬಣ್ಣದ...

r-ashoka-raises-concern-tungabhadra-water-rice-price-hike-karnataka

ತುಂಗಭದ್ರಾ ಜಲಾಶಯದಲ್ಲಿ ನೀರಿದ್ದರೂ ರೈತರ ಬೆಳೆಗಳಿಗೆ ನೀರಿಲ್ಲ, ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಅಕ್ಕಿ ಬೆಲೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ಕಿಡಿ

by admin
November 6, 2026
0

ಮೂರು ತಿಂಗಳ ಹಿಂದೆ ₹40 ಇದ್ದ ಸೋನಾ ಮಸೂರಿ ಅಕ್ಕಿ ಈಗ ₹75ಕ್ಕೆ ಏರಿಕೆ; ಆರ್‌ಎನ್‌ಆರ್ ₹80, ಎಚ್‌ಎಂಟಿ ₹85, ಜೀರಾ ಅಕ್ಕಿ ₹96ಕ್ಕೆ ಹೆಚ್ಚಳ ಬೆಂಗಳೂರು:...

r-ashoka-slams-congress-government-karnataka-financial-crisis-research-students-fellowship

ರಾಜ್ಯದ ಖಜಾನೆ ಖಾಲಿ ಮಾಡಿ ದಿವಾಳಿ ಅಂಚಿಗೆ ತಳ್ಳಿದ ಕಾಂಗ್ರೆಸ್ ಸರ್ಕಾರ: ಆರ್. ಅಶೋಕ್ ವಾಗ್ದಾಳಿ

by admin
November 6, 2026
0

11 ತಿಂಗಳಿಂದ 45 ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಷಿಪ್ ಬಿಡುಗಡೆ ಇಲ್ಲ; ವಿದ್ಯಾರ್ಥಿಗಳು, ರೈತರು, ಸಾರಿಗೆ ನೌಕರರ ಬದುಕಿನ ಜೊತೆ ಸರ್ಕಾರ ಚೆಲ್ಲಾಟ ಬೆಂಗಳೂರು: ರಾಜ್ಯದ ಖಜಾನೆಯನ್ನು ಸಂಪೂರ್ಣ...

₹1,400 ಮಾಸಾಶನಕ್ಕಾಗಿ 42 ವರ್ಷದ ಅಂಗವಿಕಲ ಮಗನನ್ನು ಹೆಗಲ ಮೇಲೆ ಹೊತ್ತು ಅಲೆಯುವ ವೃದ್ಧ ಪೋಷಕರು: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ಆಕ್ರೋಶ ಮೂರು ವರ್ಷಗಳಿಂದ ಸ್ಥಗಿತಗೊಂಡ ಮಾಸಾಶನ; ಇ-ಕೆವೈಸಿ ನೆಪದಲ್ಲಿ ಅಸಹಾಯಕ ಕುಟುಂಬಕ್ಕೆ ಅಧಿಕಾರಿಗಳ ಕಿರುಕುಳ, ತಕ್ಷಣ ಮಾಸಾಶನ ಮರುಸ್ಥಾಪನೆಗೆ ಆಗ್ರಹ ಬೆಂಗಳೂರು: ಒಬ್ಬ ಅಂಗವಿಕಲ ವ್ಯಕ್ತಿಗೆ ಸಿಗಬೇಕಾದ ಕನಿಷ್ಠ ₹1,400 ಮಾಸಾಶನಕ್ಕಾಗಿ ವೃದ್ಧ ತಂದೆ-ತಾಯಿ ತಮ್ಮ 42 ವರ್ಷದ ಮಗನನ್ನು ಹೆಗಲ ಮೇಲೆ ಹೊತ್ತು ಸರ್ಕಾರಿ ಕಚೇರಿಗಳಿಗೆ ಅಲೆಯುವ ದುಸ್ಥಿತಿ ನಿರ್ಮಾಣವಾಗಿದೆ. ಇಂತಹ ಅಸಹಾಯಕ ಕುಟುಂಬದ ಕಣ್ಣೀರು ಒರೆಸಲಾಗದ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆ, ಮಾನ, ಮರ್ಯಾದೆ ಯಾವುದೂ ಇಲ್ಲವೇ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾವೇರಿ ತಾಲೂಕಿನ ಕನಕಾಪುರದ ರಾಜಪ್ಪ ಅವರ ಕುಟುಂಬದ ಗೋಳು ಹೃದಯ ವಿದ್ರಾವಕವಾಗಿದೆ. ಹುಟ್ಟಿನಿಂದಲೇ ಅಂಗವೈಕಲ್ಯ ಹಾಗೂ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ 42 ವರ್ಷದ ಮಗನಿಗೆ ಸಿಗಬೇಕಾದ ಮಾಸಾಶನಕ್ಕಾಗಿ ವೃದ್ಧ ತಂದೆ-ತಾಯಿ ಕಳೆದ ಮೂರು ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. 2010ರಿಂದ ನಿರಂತರವಾಗಿ ಬರುತ್ತಿದ್ದ ಮಾಸಾಶನವನ್ನು 2023ರಲ್ಲಿ ಸ್ಥಗಿತಗೊಳಿಸಲಾಗಿದೆ. ಅಂದು ₹1,000 ಇದ್ದ ಮಾಸಾಶನ ಇಂದು ₹1,400ಕ್ಕೆ ಏರಿಕೆಯಾಗಿದ್ದರೂ, ಆ ಹಣ ಪಡೆಯಲು ಈ ಕುಟುಂಬ ಪರದಾಡುವಂತಾಗಿದೆ ಎಂದು ಅಶೋಕ್ ತಿಳಿಸಿದ್ದಾರೆ. ಬೆರಳಚ್ಚು, ಕಣ್ಣಿನ ಸಮಸ್ಯೆ ಹಾಗೂ ಇ-ಕೆವೈಸಿ ಸೇರಿದಂತೆ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಮಾಸಾಶನ ಸ್ಥಗಿತಗೊಳಿಸಿರುವ ಅಧಿಕಾರಿಗಳಿಗೆ, ಇಂತಹ ತೀವ್ರ ಅಂಗವೈಕಲ್ಯ ಹೊಂದಿರುವವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂಬ ಕನಿಷ್ಠ ಮಾನವೀಯತೆಯೂ ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. 42 ವರ್ಷದ ಅಂಗವಿಕಲ ಮಗನಿಗೆ ಸಿಗಬೇಕಿರುವುದು ಕೇವಲ ₹1,400 ಮಾಸಾಶನ. ಆದರೆ ವೃದ್ಧ ಪೋಷಕರು ಮಗನನ್ನು ಹೆಗಲ ಮೇಲೆ ಹೊತ್ತು ಕಚೇರಿಯಿಂದ ಕಚೇರಿಗೆ ಅಲೆಯಬೇಕಾದ ಪರಿಸ್ಥಿತಿ ಇದೆ. ಅಧಿಕಾರಿಗಳ ಪಾಲಿಗೆ ಮೂರು ವರ್ಷಗಳಾದರೂ ಬಗೆಹರಿಯದ ಇ-ಕೆವೈಸಿ ಸಮಸ್ಯೆ, ಕುಟುಂಬದ ಪಾಲಿಗೆ ಬದುಕಿನ ಬಹುದೊಡ್ಡ ಸಂಕಷ್ಟವಾಗಿ ಪರಿಣಮಿಸಿದೆ ಎಂದು ಕಿಡಿಕಾರಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ನಿಮ್ಮ ಸರ್ಕಾರಕ್ಕೆ ಸಾಧನಾ ಸಮಾವೇಶಗಳು ಹಾಗೂ ಸಚಿವರ ಬಂಗಲೆಗಳ ನವೀಕರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲು ಹಣವಿದೆ. ಆದರೆ ಒಬ್ಬ ಅಸಹಾಯಕ ಅಂಗವಿಕಲನಿಗೆ ತಿಂಗಳಿಗೆ ₹1,400 ಮಾಸಾಶನ ತಲುಪಿಸಲು ಮಾತ್ರ ಸಾಧ್ಯವಾಗುತ್ತಿಲ್ಲವೇ? ಇದೇನಾ ನಿಮ್ಮ ಪ್ರಜಾಸೇವೆ ಎಂದು ಅಶೋಕ್ ಪ್ರಶ್ನಿಸಿದ್ದಾರೆ. ಅಂಗವಿಕಲರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸುವುದಲ್ಲ ಸರ್ಕಾರದ ಕೆಲಸ. ಅವರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ತಲುಪಿಸುವುದು ಸರ್ಕಾರದ ಕರ್ತವ್ಯ. ಬಡವರು, ಅಂಗವಿಕಲರು ಮತ್ತು ವೃದ್ಧರ ಬದುಕಿಗೆ ಆಸರೆಯಾಗಬೇಕಾದ ಮಾಸಾಶನವನ್ನೇ ಹೀಗೆ ಸತಾಯಿಸಿ ಸ್ಥಗಿತಗೊಳಿಸುವುದು ಯಾವ ರೀತಿಯ ಸಾಮಾಜಿಕ ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ರಾಜಪ್ಪ ಅವರ ಸ್ಥಗಿತಗೊಂಡಿರುವ ಮಾಸಾಶನವನ್ನು ಮರುಸ್ಥಾಪಿಸಿ, ಬಾಕಿ ಹಣ ಬಿಡುಗಡೆ ಮಾಡಬೇಕು. ಇಂತಹ ಅಸಹಾಯಕ ಫಲಾನುಭವಿಗಳಿಗೆ ಇ-ಕೆವೈಸಿ ಸೇರಿದಂತೆ ತಾಂತ್ರಿಕ ಸಮಸ್ಯೆಗಳಿಂದ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆರ್. ಅಶೋಕ್ ಆಗ್ರಹಿಸಿದ್ದಾರೆ. ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಮಾಡುವುದನ್ನು ಬಿಟ್ಟು, ಅಸಹಾಯಕರ ಬದುಕಿನಲ್ಲಿ ಬೆಳಕು ಮೂಡಿಸುವ ಕೆಲಸವನ್ನು ಸರ್ಕಾರ ಮಾಡಲಿ. ಅದೇ ನಿಜವಾದ ಸಾಮಾಜಿಕ ನ್ಯಾಯ ಮತ್ತು ಜನಪರ ಆಡಳಿತ ಎಂದು ಅವರು ಹೇಳಿದ್ದಾರೆ

₹1,400 ಮಾಸಾಶನಕ್ಕಾಗಿ 42 ವರ್ಷದ ಅಂಗವಿಕಲ ಮಗನನ್ನು ಹೆಗಲ ಮೇಲೆ ಹೊತ್ತು ಅಲೆಯುವ ವೃದ್ಧ ಪೋಷಕರು: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ಆಕ್ರೋಶ

by admin
November 6, 2026
0

ಮೂರು ವರ್ಷಗಳಿಂದ ಸ್ಥಗಿತಗೊಂಡ ಮಾಸಾಶನ; ಇ-ಕೆವೈಸಿ ನೆಪದಲ್ಲಿ ಅಸಹಾಯಕ ಕುಟುಂಬಕ್ಕೆ ಅಧಿಕಾರಿಗಳ ಕಿರುಕುಳ, ತಕ್ಷಣ ಮಾಸಾಶನ ಮರುಸ್ಥಾಪನೆಗೆ ಆಗ್ರಹ ಬೆಂಗಳೂರು: ಒಬ್ಬ ಅಂಗವಿಕಲ ವ್ಯಕ್ತಿಗೆ ಸಿಗಬೇಕಾದ ಕನಿಷ್ಠ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram