ಬೆಂಗಳೂರು : ಕೋವಿಡ್ 19 ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಚಿವ ಶ್ರೀರಾಮುಲು ಸ್ಪಷ್ಟೀಕರಣ ನೀಡಿದ್ದು, ಈ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾತಿನಲ್ಲಿ ಹೇಳದೇ ದಾಖಲೆ ತೋರಿಸಲಿ ಎಂದಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಯಾರೇ ಆಗಲೀ ಬಾಯಿ ಮಾತಿನಲ್ಲಿ ಲೆಕ್ಕ ನೀಡಿದರೇ ಆಗುತ್ತಾ. ಏನೇನು ಖರೀದಿ ಮಾಡಿದ್ದಾರೆ, ಯಾವುದಕ್ಕೆ ಎಷ್ಟು ಖರ್ಚು ಮಾಡಿದ್ದಾರೆ ಎನ್ನುವುದು ನೀಡುವುದು ಬೇಡವೇ ಎಂದು ಪ್ರಶ್ನಿಸಿ ಬಾಯಿ ಮಾತಿನಲ್ಲಿ ಹೇಳದೇ ಆರೋಗ್ಯ ಸಚಿವ ಬಿ. ಶ್ರೀರಾಮುಲು ದಾಖಲೆ ತೋರಿಸಲಿ ಎಂದು ಕುಟುಕಿದರು.
ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್ ಅಕ್ತರ್ ನನಗೆ ಪತ್ರ ಬರೆದಿದ್ದಾರೆ. ಈ ಸಂಬಂಧ ಬೇಗ ದಾಖಲೆ ತೋರಿಸಲಿ. ಅವ್ಯವಹಾರ ಆರೋಪ ಸಾಬೀತುಪಡಿಸಿದರೆ ರಾಜೀನಾಮೆ ನೀಡುತ್ತೇನೆಂದು ಬಿ. ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ರಾಜೀನಾಮೆ ಕೊಡಬೇಕಿದಿದ್ದರೆ ಇವರು ಇಲ್ಯಾಕೇ ಇರಬೇಕಿತ್ತು ಎಂದು ರಾಮುಲು ವಿರುದ್ಧ ಸಿದ್ದರಾಮಯ್ಯ ಗರಂ ಆದರು.








