ಕೊಲಂಬಿಯಾ – ಮಿಲಿಟರಿಯ 9 ಸೈನಿಕರು ಹೆಲಿಕಾಪ್ಟರ್ ಅಪಘಾತದಲ್ಲಿ ಸಾವು
ಕೊಲಂಬಿಯಾ, ಜುಲೈ 23: ಆಘಾತಕಾರಿ ಘಟನೆಯಲ್ಲಿ, ಕೊಲಂಬಿಯಾದ ಮಿಲಿಟರಿಯ 9 ಸೈನಿಕರು ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ವರದಿಗಳ ಪ್ರಕಾರ, ಗುವಿಯರೆ ಪ್ರಾಂತ್ಯದ ಎಫ್‌ಎಆರ್‌ಸಿ ಗೆರಿಲ್ಲಾ ಭಿನ್ನಮತೀಯರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಯುಹೆಚ್ -60 ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಅಪಘಾತಕ್ಕೀಡಾಯಿತು ಹಾಗೂ ಆರು ಸೈನಿಕರು ಗಾಯಗೊಂಡಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ.

ಸರ್ಕಾರದೊಂದಿಗಿನ ಸಂಘರ್ಷವನ್ನು ಕೊನೆಗೊಳಿಸಲು 2016 ರ ಶಾಂತಿ ಒಪ್ಪಂದವನ್ನು ತಿರಸ್ಕರಿಸಿದ ಕೊಲಂಬಿಯಾದ ಕ್ರಾಂತಿಕಾರಿ ಸಶಸ್ತ್ರ ಪಡೆಗಳ (ಎಫ್‌ಎಆರ್‌ಸಿ) ಭಿನ್ನಮತೀಯ ಮಾಜಿ ಸದಸ್ಯರು – ಅಪಘಾತ ಸಂಭವಿಸಿದ ಪ್ರದೇಶದಲ್ಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಭದ್ರತಾ ಮೂಲಗಳ ಪ್ರಕಾರ, ಎಫ್’ಎಆರ್’ಸಿ ಭಿನ್ನಮತೀಯ ಗುಂಪುಗಳು ಮಾದಕವಸ್ತು ಕಳ್ಳಸಾಗಣೆ ಚಟುವಟಿಕೆಗಳು ಮತ್ತು ಚಿನ್ನ ಸೇರಿದಂತೆ ಖನಿಜಗಳ ಅಕ್ರಮ ಶೋಷಣೆಯತ್ತ ಗಮನ ಹರಿಸುತ್ತಿವೆ








