ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಸುನೀಲ್ ಶೆಟ್ಟಿ ಈಗ ಮತ್ತೆ ಕನ್ನಡದತ್ತ ಮುಖ ಮಾಡಿದ್ದಾರೆ. ಅದರಲ್ಲೂ ಈ ಬಾರಿ ಖಾಕಿ ತೊಟ್ಟು ಖಡಕ್ ಪೊಲೀಸ್ ಅಧಿಕಾರಿಯಾಗಿ ಮಿಂಚಲಿದ್ದಾರೆ. ಆದ್ರೆ ಸುನೀಲ್ ಈಗ ಸಿನಿಮಾದಲ್ಲಿ ನಟಿಸುತ್ತಿಲ್ಲ. ಬದಲಾಗಿ ಕನ್ನಡದ ವೆಬ್ ಸೀರಿಸ್ ನಲ್ಲಿ ನಟಿಸಲಿದ್ದಾರೆ.
ಹೌದು..! ಸುನೀಲ್ ಶೆಟ್ಟಿ ಅವರು, ಕಾಡುಗಳ್ಳ ವೀರಪ್ಪನ್ ಕಥೆ ಆಧರಿಸಿದ ಎ.ಎಂ.ಆರ್ ರಮೇಶ್ ಅವರು ನಿರ್ದೇಶನದ ವೀರಪ್ಪನ್ ಹಂಗರ್ ಫಾರ್ ಕಿಲ್ಲಿಂಗ್ ಎಂಬ ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಸುನೀಲ್ ಶೆಟ್ಟಿ ಅವರು, ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದಿರಿ ಅವರ ಪಾತ್ರದಲ್ಲಿ ಮಿಂಚಲಿದ್ದಾರೆ. ಇನ್ನುಳಿದಂತೆ ವೀರಪ್ಪನ್ ಪಾತ್ರದಲ್ಲಿ ಕಿಶೋರ್ ಅವರೇ ನಟಿಸಲಿದ್ದಾರೆ.








