ಮಂಗಳೂರು :ಶಾಂತರಾಮ ಸಿದ್ದಿಯವರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಿದ್ದು ನಮ್ಮ ಸರ್ಕಾರಕ್ಕೊಂದು ಹೆಮ್ಮೆ ಎಂದು ಸಚಿವ ಶ್ರೀನಿವಾಸ ಪೂಜಾರಿ ಅವರು ಹೇಳಿದ್ದಾರೆ.
ರಾಜ್ಯ ವಿಧಾನ ಪರಿಷತ್ತಿನ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಸಿದ್ದಿ ಬುಡಕಟ್ಟು ಜನಾಂಗದ ಶಾಂತರಾಮ ಸಿದ್ದಿಯವರ ಮನೆಗೆ ಇಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಚಿವರು, ಕಾಡಿನ ಮಕ್ಕಳೆಂದೆ ಪರಿಗಣಿಸಲ್ಪಟ್ಟಿರುವ ವನವಾಸಿಗಳನ್ನು ಒಟ್ಟುಗೂಡಿಸಿ ಆ ಜನಾಂಗದಲ್ಲಿ ರಾಷ್ಟ್ರೀಯತೆ ಮತ್ತು ರಾಷ್ಟ್ರಭಕ್ತಿ ಮೂಡಿಸುತ್ತಿರುವ ಶಾಂತರಾಮ ಸಿದ್ದಿಯವರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಿದ್ದು ನಮ್ಮ ಸರ್ಕಾರಕ್ಕೊಂದು ಹೆಮ್ಮೆ ಎಂದರು.








