ನೈಟ್ ನ್ಯೂಸ್ ಅಪ್ಡೇಟ್
1.
ಲಕ್ಷದ ಗಡಿ ದಾಟಿದ ಕೊರೋನಾ :
ಇಂದು ರಾಜ್ಯದಲ್ಲಿ 5324 ಮಂದಿಗೆ ಪಾಸಿಟಿವ್
ರಾಜ್ಯದಲ್ಲಿ ಕೊರೊನಾ ಹೆಮ್ಮಾರಿಯ ಮಹಾಸ್ಫೋಟ ಮುಂದುವರೆದಿದ್ದು, ಇಂದು ಕೊರೊನಾ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ.
ಇಂದು ರಾಜ್ಯದಲ್ಲಿ ಹೊಸದಾಗಿ 5324 ಮಂದಿಗೆ ಕೊರೊನಾ ವಕ್ಕರಿಸಿದ್ದು, ಒಟ್ಟು ಸೋಂಕಿತರ ಸಂಖ್ಯೆ 1 ಲಕ್ಷದ 1465ಕ್ಕೆ ಏರಿಕೆಯಾಗಿದೆ.
2.
ಪಿ.ವಿ. ಸಿಂಧೂ ವೃತ್ತಿ ಬದುಕಿಗೆ ಹೊಸ ತಿರುವು ಸಿಕ್ಕಿದ್ದ ಟೂರ್ನಿ ಯಾವುದು .?ಪಿ.ವಿ. ಸಿಂಧೂ.. ಭಾರತದ ಬ್ಯಾಡ್ಮಿಂಟನ್ ಕ್ರೀಡೆಯ ಆಶಾ ಕಿರಣ. ಸಣ್ಣ ಪ್ರಾಯದಲ್ಲೇ ದೊಡ್ಡ ಸಾಧನೆ ಮಾಡಿದ್ದ ಪಿ.ವಿ. ಸಿಂಧೂ ಮಾಡಿರುವುದು ಅಪ್ರತಿಮ ಸಾಧನೆಯೇ ಸರಿ. ಹೈದ್ರಬಾದ್ ನ ಪಿ.ವಿ. ಸಿಂಧೂ ಅವರು ಈಗ ಮನೆಯಲ್ಲೇ ಇದ್ದಾರೆ. ಕೋವಿಡ್ ನಿಂದಾಗಿ ಯಾವುದೇ ಟೂರ್ನಿಗಳನ್ನು ಆಡುತ್ತಿಲ್ಲ.
3.
ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ – ಪ್ರತಿ 10 ಗ್ರಾಂಗೆ 51,000 ರೂ .ಜಾಗತಿಕ ಆರ್ಥಿಕತೆಯ ಕುಸಿತದೊಂದಿಗೆ, ಸೋಮವಾರ ಬಹು-ಸರಕು ವಿನಿಮಯ ಕೇಂದ್ರದಲ್ಲಿ (ಎಂಸಿಎಕ್ಸ್) ಚಿನ್ನದ ಬೆಲೆ ಹೊಸ ದಾಖಲೆಯ ಮಟ್ಟವನ್ನು ಏರಿದೆ. ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡಿದ್ದು ಪ್ರತಿ 10 ಗ್ರಾಂಗೆ 51,000 ರೂ ಆಗಿದೆ.
4.
100 ಸಂಕಷ್ಟದಲ್ಲಿ ಗಾಂಧಿ – ನೆಹರು ಕುಟುಂಬದ ಟ್ರಸ್ಟ್ಮಹತ್ವದ ಬೆಳವಣಿಗೆಯೊಂದರಲ್ಲಿ ಹರ್ಯಾಣ ಸರಕಾರ ಗಾಂಧಿ ಮತ್ತು ನೆಹರು ಮನೆತನದ ಅಸ್ತಿ ಒಡೆತನದ ತನಿಖೆಗೆ ಆದೇಶ ನೀಡಿದೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಕೇಶನಿ ಆನಂದ್ ಅರೋರಾ, ಹರ್ಯಾಣ ನಗರ ಸ್ಥಳೀಯ ಸಂಸ್ಥೆಗಳ ಇಲಾಖೆಗಳಿಗೆ ನೆಹರು ಗಾಂಧಿ ಒಡೆತನಕ್ಕೆ ಸಂಬಂಧಿಸಿದ ಆಸ್ತಿಗಳ ತನಿಖೆಗೆ ಆದೇಶ ನೀಡಿದ್ದಾರೆ.
5.
ಜಗತ್ತಿಗೆ ಬೆದರಿಕೆ ಒಡ್ಡುತ್ತಿರುವ ಚೀನಾದ ಅತ್ಯಂತ ಶಕ್ತಿಶಾಲಿ ಕ್ಷಿಪಣಿ ಶಕ್ತಿಯೆಷ್ಟು ಗೊತ್ತಾ ? ಕೊರೋನಾವನ್ನು ಪ್ರಪಂಚದಾದ್ಯಂತ ಹರಡುವ ಮೂಲಕ ಚೀನಾ ಸೂಪರ್ ಪವರ್ ಆಗಲು ಬಯಸಿತ್ತಾ ಎಂಬ ಕುರಿತಾಗಿ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಚೀನಾ ವಿಶ್ವದ ದೊಡ್ಡಣ್ಣ ಅಮೇರಿಕಾವನ್ನೇ ಕ್ಯಾರೆ ಎನ್ನುತ್ತಿಲ್ಲ. ಇದರಿಂದಾಗಿ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ.