ADVERTISEMENT
Sunday, May 10, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಡರ್ಬಾನ್ ನಲ್ಲಿ ಕಣ್ಣೀರು…ಮ್ಯಾಂಚೆಸ್ಟರ್ ನಲ್ಲಿ ಆನಂದ ಭಾಷ್ಪ…! ಇದು ಸ್ಟುವರ್ಟ್ ಬ್ರಾಡ್ ನ ಕ್ರಿಕೆಟ್ ಕಥೆ..!

admin by admin
July 29, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಡರ್ಬಾನ್ ನಲ್ಲಿ ಕಣ್ಣೀರು…ಮ್ಯಾಂಚೆಸ್ಟರ್ ನಲ್ಲಿ ಆನಂದ ಭಾಷ್ಪ…! ಇದು ಸ್ಟುವರ್ಟ್ ಬ್ರಾಡ್ ನ ಕ್ರಿಕೆಟ್ ಕಥೆ..!

ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ. ಅದು ಸೆಪ್ಟಂಬರ್ 19, 2007. ದಕ್ಷಿಣ ಆಫ್ರಿಕಾದ ಕಿಂಗ್ಸ್ ಮೇಡ್ ಡರ್ಬಾನ್ ಕ್ರೀಡಾಂಗಣ. ಟೀಮ್ ಇಂಡಿಯಾದ ಯುವರಾಜ್ ಸಿಂಗ್ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದರು. ಆಂಡ್ರ್ಯೂ ಫ್ಲಿಂಟಾಫ್ ಮೇಲಿನ ಸಿಟ್ಟನ್ನು ಯುವಿ ತೀರಿಸಿಕೊಂಡಿದ್ದು ಇಂಗ್ಲೆಂಡ್‍ನ 21ರ ಹರೆಯದ ಯುವಕನ ಮೇಲೆ. ಆಗ ಆ ಯುವಕನ ಪರಿಸ್ಥಿತಿಯನ್ನು ಒಂದು ಬಾರಿ ಯೋಚಿಸಿದಾಗ ಅಯ್ಯೋ ಅನ್ನಿಸುತ್ತಿತ್ತು.
ಯುವರಾಜ್ ಸಿಂಗ್ ನ ಬ್ಯಾಟಿಂಗ್ ಅಬ್ಬರವನ್ನು ಇಡೀ ವಿಶ್ವ ಕ್ರಿಕೆಟ್ ಕೊಂಡಾಡಿತ್ತು. ಆದ್ರೆ ಆರು ಸಿಕ್ಸರ್ ಹೊಡೆಸಿಕೊಂಡವನ ಪರಿಸ್ಥಿತಿ ಏನಾಗಬೇಕು ? ಆಗ ಆ ಯುವಕ ಕಣ್ಣೀರು ಹಾಕಿದ್ದ. ಎಷ್ಟೇ ಸಮಾಧಾನಪಡಿಸಿದ್ರೂ ಮನಸ್ಸಿಂದ ಆ ಪಂದ್ಯ ಮಾಸಿ ಹೋಗಲಿಲ್ಲ. ಅದು ಹೋಗುವಂತಹುದ್ದು ಅಲ್ಲ. ಹಾಗಂತ ಆತ್ಮವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ಆತನ ಕ್ರಿಕೆಟ್ ಬದುಕಿಗೆ ಅದೇ ಪಂದ್ಯ ಹೊಸ ಭರವಸೆ ಮೂಡಿಸುವಂತೆ ಮಾಡಿತ್ತು. ನೋಡ ನೋಡುತ್ತಲೇ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾರಕ ವೇಗಿಯಾದ್ರು ಆಷಸ್ ಟೆಸ್ಟ್ ಸರಣಿ ಸೇರಿದಂತೆ ಹಲವು ಪಂದ್ಯಗಳಿಗೆ ಇಂಗ್ಲೆಂಡ್ ತಂಡದ ಗೆಲುವಿಗೂ ಕಾರಣನಾದ್ರು. ಇದೀಗ ಟೆಸ್ಟ್ ಕ್ರಿಕೆಟ್ ನಲ್ಲಿ 500 ವಿಕೆಟ್ ಪಡೆದ ಹೆಗ್ಗಳಿಕೆಗೆ ಪಾತ್ರನಾದ್ರು.
ಆತನ ಹೆಸರು ಸ್ಟುವರ್ಟ್ ಬ್ರಾಡ್. 20ರ ಹರೆಯದಲ್ಲೇ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದ ನ್ಯಾಟಿಂಗ್ ಹ್ಯಾಮ್‍ನ ಹುಡುಗ. 2006ರಲ್ಲಿ ಟಿ-ಟ್ವೆಂಟಿ ಮತ್ತು ಏಕದಿನ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದ. ನಿಖರವಾದ ಮತ್ತು ಲಯಬದ್ಧವಾದ ಬೌಲಿಂಗ್ ಮೂಲಕ ಗಮನ ಸೆಳೆದಿದ್ದ ಸ್ಟುವರ್ಟ್ ಬ್ರಾಡ್ ಚೊಚ್ಚಲ ಟಿ-ಟ್ವೆಂಟಿ ಪಂದ್ಯದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದ. ಆದ್ರೆ ಯುವರಾಜನ ಅಬ್ಬರದ ಬ್ಯಾಟಿಂಗ್‍ನಿಂದ ಇನ್ನೇನೂ ಸ್ಟುವರ್ಟ್ ಬ್ರಾಡ್ ಅವರ ಬದುಕು ಅಂತ್ಯಗೊಂಡಿತ್ತು ಎಂದು ಅನೇಕ ಮಂದಿ ಭಾವಿಸಿದ್ದರು.
ಆದ್ರೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಸ್ಟುವರ್ಟ್ ಬ್ರಾಡ್ ಮೇಲೆ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. 2007ರಲ್ಲಿ ಶ್ರೀಲಂಕಾ ವಿರುದ್ಧ ಆಡುವ ಮೂಲಕ ಟೆಸ್ಟ್ ಕ್ರಿಕೆಟ್‍ಗೆ ಎಂಟ್ರಿಕೊಟ್ಟರು. ಆರಂಭದ ನಾಲ್ಕೈದು ವರ್ಷಗಳಲ್ಲಿ ತಂಡದಲ್ಲಿ ಖಾಯಂ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಆದ್ರೆ ಸ್ಟುವರ್ಟ್ ಬ್ರಾಡ್ ತನ್ನ ಹಠವನ್ನು ಬಿಡಲಿಲ್ಲ. ಹೀಗಾಗಿ 2012ರಿಂದ ಇಂಗ್ಲೆಂಡ್ ಟೆಸ್ಟ್ ತಂಡದ ಖಾಯಂ ಬೌಲರ್ ಆಗಿ ರೂಪುಗೊಂಡ್ರು.
ಸತತ ಎಂಟು ವರ್ಷಗಳಲ್ಲಿ ಸ್ಟುವರ್ಟ್ ಬ್ರಾಡ್ ತನ್ನ ಮಾರಕ ದಾಳಿಯ ಮೂಲಕ ಇಂಗ್ಲೆಂಡ್‍ಗೆ ಹಲವು ಪಂದ್ಯಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈಗ ತಾನೇ ಮುಗಿದ ವೆಸ್ಟ್ ಇಂಡೀಸ್ ಸರಣಿಯೂ ಹೊರತಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ 11ರ ಬಳಗದಲ್ಲಿ ಸ್ಥಾನ ಪಡೆದುಕೊಳ್ಳಲಿಲ್ಲ. ಹೀಗಾಗಿ ಬ್ರಾಡ್ ಕುಪಿತಗೊಂಡಿದ್ದರು. ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಥಾನ ನೀಡದಿರುವ ಬಗ್ಗೆ ಹಂಗಾಮಿ ನಾಯಕನಾಗಿದ್ದ ಬೆನ್ ಸ್ಟೋಕ್ಸ್ ಮೇಲೂ ಅಸಮಾಧಾನ ಹೊರಹಾಕಿದ್ದರು.
ಆದ್ರೆ ಜಾಯ್ ರೂಟ್ ನಾಯಕನಾಗಿ ಮುಂದುವರಿದಾಗ ಸ್ಟುವರ್ಟ್ ಬ್ರಾಡ್‍ಗೆ ತಂಡದ 11ರ ಬಳಗದಲ್ಲಿ ಕಾಣಿಸಿಕೊಂಡ್ರು. ಮೊದಲ ಟೆಸ್ಟ್ ಪಂದ್ಯದ ಸೇಡು, ಬೇಸರಕ್ಕೆ ಎರಡನೇ ಮತ್ತು ಮೂರನೇ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡುವ ಮೂಲಕ ತನ್ನ ಸಾಮಥ್ರ್ಯ ಏನು ಎಂಬುದನ್ನು ತೋರಿಸಿಕೊಟ್ಟವರು ಸ್ಟುವರ್ಟ್ ಬ್ರಾಡ್.
ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನವೇ ಎರಡು ವಿಕೆಟ್ ಪಡೆದು ಸ್ಟುವರ್ಟ್ ವಿಂಡೀಸ್ ಸೋಲಿಗೆ ಮುನ್ನುಡಿ ಬರೆದಿದ್ದರು. ನಾಲ್ಕನೇ ದಿನ ಪಂದ್ಯ ಮಳೆಗೆ ಆಹುತಿಯಾಯ್ತು. ಹಾಗೇ ಐದನೇ ದಿನ ಸ್ಟುವರ್ಟ್ ಬ್ರಾಡ್ ಇತಿಹಾಸ ನಿರ್ಮಿಸಲು ಅವಕಾಶ ಸಿಕ್ಕಿತ್ತು. ವೆಸ್ಟ್ ಇಂಡೀಸ್‍ನ ಕ್ರೇಗ್ ಬ್ರಾತ್‍ವೇಟ್ ಅವರ ವಿಕೆಟ್ ಅನ್ನು ಪಡೆಯುವ ಮೂಲಕ ತನ್ನ ಟೆಸ್ಟ್ ವಿಕೆಟ್‍ಗಳ ಸಂಖ್ಯೆಯನ್ನು 500ಕ್ಕೇರಿಸಿಕೊಂಡ್ರು. 34ರ ಹರೆಯದ ಸ್ಟುವರ್ಟ್ ಈ ಸಾಧನೆ ಮಾಡಿದ ಏಳನೇ ಬೌಲರ್ ಆಗಿ ಹೊರಹೊಮ್ಮಿದ್ರು. ಅಲ್ಲದೆ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ ನಲ್ಲಿ ಒಟ್ಟು ನಾಲ್ಕು ವಿಕೆಟ್ ಕಬಳಿಸಿದ್ದರು.
500ನೇ ವಿಕೆಟ್ ಬಲಿ ಯಾರಾಗಬಹುದು ಎಂಬ ಕುತೂಹಲವಿತ್ತು. ಪಂದ್ಯಕ್ಕೆ ವಾರ್ಮ್ ಅಪ್ ಮಾಡುತ್ತಿರುವಾಗ ಜೇಮ್ಸ್ ಆಂಡರ್ಸನ್ ಕ್ರೇಗ್ ಬ್ರಾತ್‍ವೇಟ್ ವಿಕೆಟ್ ಪಡೆಯಬೇಕು ಎಂದು ಹೇಳಿದ್ದರು. ಅದೇ ರೀತಿ ಆಯ್ತು. ಹಾಗಂತ ನಾನೇನು ಯಾವ ಗುರಿಯನ್ನು ಹೊಂದಿರಲಿಲ್ಲ. ನಾನು ನನ್ನ ಕ್ರಿಕೆಟ್ ಬದುಕಿನಲ್ಲಿ ಅನೇಕ ಪಾಠಗಳನ್ನು ಕಲಿತಿದ್ದೇನೆ. ನಾನು ಕೆಲವೊಂದು ತಾಂತ್ರಿಕತೆಗಳನ್ನು ಕಲಿಯಲು ಆಸಕ್ತಿ ಹೊಂದಿದ್ದೆ. ಹೀಗಾಗಿ ನಾನು ಲಯವನ್ನು ಕಂಡುಕೊಳ್ಳಲು ಸಾಧ್ಯವಾಯ್ತು. ಮುಂಬರುವ ಪಾಕಿಸ್ತಾನ ಸರಣಿಯನ್ನು ಎದುರು ನೋಡುತ್ತಿದ್ದೇನೆ ಎಂದು ಸ್ಟುವರ್ಟ್ ಬ್ರಾಡ್ ಹೇಳಿದ್ದಾರೆ.
ಸ್ಟುವರ್ಟ್ ಬ್ರಾಡ್ ಒಟ್ಟು 140 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 28,440 ಎಸೆತಗಳನ್ನು ಹಾಕಿದ್ದಾರೆ. 14002 ರನ್ ನೀಡಿ ಒಟ್ಟು 501 ವಿಕೆಟ್‍ಗಳನ್ನು ಪಡೆದಿದ್ದಾರೆ. ಇನ್ನು 121 ಏಕದಿನ ಪಂದ್ಯಗಳಲ್ಲಿ 178 ವಿಕೆಟ್ ಹಾಗೂ 56 ಟಿ-ಟ್ವೆಂಟಿ ಪಂದ್ಯಗಳಲ್ಲಿ 65 ವಿಕೆಟ್‍ಗಳನ್ನು ಉರುಳಿಸಿದ್ದಾರೆ. ಹಾಗೇ ಸ್ಟುವರ್ಟ್ ಬ್ರಾಡ್ ಅನೇಕ ಬಾರಿ ಬ್ಯಾಟಿಂಗ್‍ನಲ್ಲೂ ಮಿಂಚು ಹರಿಸಿದ್ದಾರೆ. ತಂಡ ಸಂಕಷ್ಟದಲ್ಲಿದ್ದಾಗ ಪಾರು ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಒಂದು ಶತಕ ಮತ್ತು 13 ಅರ್ಧಶತಕಗಳನ್ನು ಸಿಡಿಸಿದ್ದಾರೆ. 15 ರನ್‍ಗೆ 8 ವಿಕೆಟ್ ಉರುಳಿಸಿರುವುದು ಅವರ ಟೆಸ್ಟ್ ಕ್ರಿಕೆಟ್ ನ ಶ್ರೇಷ್ಠ ಸಾಧನೆಯಾಗಿದೆ. ಅದು ಕೂಡ ಆಸ್ಟ್ರೇಲಿಯಾ ವಿರುದ್ಧ.
ಒಟ್ಟಿನಲ್ಲಿ 13 ವರ್ಷಗಳ ಹಿಂದೆ ಮೈದಾನದಲ್ಲಿ ಕಣ್ಣೀರು ಸುರಿಸಿದ್ದ ಸ್ಟುವರ್ಟ್ ಬ್ರಾಡ್ ಇಂದು ಟೆಸ್ಟ್ ಕ್ರಿಕೆಟ್ ನಲ್ಲಿ 500 ವಿಕೆಟ್ ಪಡೆದು ಸಂತಸದಿಂದ ಕುಪ್ಪಳಿಸಿದ್ದರು.

Related posts

ನಾನು ಚುನಾವಣೆಗೆ ಸ್ಪರ್ಧಿಸಲ್ಲ ಯಾಕೆ ಗೊತ್ತಾ? ರಿಯಲ್ ಸ್ಟಾರ್ ಉಪೇಂದ್ರ ನೀಡಿದ ಉತ್ತರ ಕೇಳಿ ದಂಗಾದ ಅಭಿಮಾನಿಗಳು

ನಾನು ಚುನಾವಣೆಗೆ ಸ್ಪರ್ಧಿಸಲ್ಲ ಯಾಕೆ ಗೊತ್ತಾ? ರಿಯಲ್ ಸ್ಟಾರ್ ಉಪೇಂದ್ರ ನೀಡಿದ ಉತ್ತರ ಕೇಳಿ ದಂಗಾದ ಅಭಿಮಾನಿಗಳು

May 10, 2026
ಮೌನವಾಗಿಯೇ ಸೋಲು ಒಪ್ಪಿಕೊಂಡ್ರಾ ಮಮತಾ ಬ್ಯಾನರ್ಜಿ ಸುವೇಂದು ಅಧಿಕಾರ ಹಿಡಿಯುತ್ತಿದ್ದಂತೆ ಬದಲಾಯ್ತು ದೀದಿ ಪ್ರೊಫೈಲ್

ಮೌನವಾಗಿಯೇ ಸೋಲು ಒಪ್ಪಿಕೊಂಡ್ರಾ ಮಮತಾ ಬ್ಯಾನರ್ಜಿ ಸುವೇಂದು ಅಧಿಕಾರ ಹಿಡಿಯುತ್ತಿದ್ದಂತೆ ಬದಲಾಯ್ತು ದೀದಿ ಪ್ರೊಫೈಲ್

May 10, 2026
Tags: #westindies500 Test wicketsAnil KumbleEnglandMuralitharanOld Traffordshen WarneStuart Broad bWest Indies' Kraigg Brathwaite
ShareTweetSendShare
Join us on:

Related Posts

ನಾನು ಚುನಾವಣೆಗೆ ಸ್ಪರ್ಧಿಸಲ್ಲ ಯಾಕೆ ಗೊತ್ತಾ? ರಿಯಲ್ ಸ್ಟಾರ್ ಉಪೇಂದ್ರ ನೀಡಿದ ಉತ್ತರ ಕೇಳಿ ದಂಗಾದ ಅಭಿಮಾನಿಗಳು

ನಾನು ಚುನಾವಣೆಗೆ ಸ್ಪರ್ಧಿಸಲ್ಲ ಯಾಕೆ ಗೊತ್ತಾ? ರಿಯಲ್ ಸ್ಟಾರ್ ಉಪೇಂದ್ರ ನೀಡಿದ ಉತ್ತರ ಕೇಳಿ ದಂಗಾದ ಅಭಿಮಾನಿಗಳು

by Shwetha
May 10, 2026
0

ಕನ್ನಡ ಚಿತ್ರರಂಗದ ವಿಭಿನ್ನ ಆಲೋಚನೆಗಳ ಸರದಾರ ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರಜಾಕೀಯ ಎಂಬ ಹೊಸ ರಾಜಕೀಯ ಕ್ರಾಂತಿಗೆ ನಾಂದಿ ಹಾಡಿದ್ದಾರೆ. ಪ್ರಜಾಕೀಯ ಪಕ್ಷ ಸ್ಥಾಪನೆಯಾದಾಗಿನಿಂದಲೂ ಎಲ್ಲರ...

ಮೌನವಾಗಿಯೇ ಸೋಲು ಒಪ್ಪಿಕೊಂಡ್ರಾ ಮಮತಾ ಬ್ಯಾನರ್ಜಿ ಸುವೇಂದು ಅಧಿಕಾರ ಹಿಡಿಯುತ್ತಿದ್ದಂತೆ ಬದಲಾಯ್ತು ದೀದಿ ಪ್ರೊಫೈಲ್

ಮೌನವಾಗಿಯೇ ಸೋಲು ಒಪ್ಪಿಕೊಂಡ್ರಾ ಮಮತಾ ಬ್ಯಾನರ್ಜಿ ಸುವೇಂದು ಅಧಿಕಾರ ಹಿಡಿಯುತ್ತಿದ್ದಂತೆ ಬದಲಾಯ್ತು ದೀದಿ ಪ್ರೊಫೈಲ್

by Shwetha
May 10, 2026
0

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ದಶಕಗಳ ಕಾಲ ರಾಜ್ಯವನ್ನು ಆಳಿದ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಅಧಿಕಾರದಿಂದ ಕೆಳಗಿಳಿದಿದೆ. ಬಿಜೆಪಿಯ...

ಇನ್ನು ಹೆದ್ದಾರಿಯಲ್ಲಿ ವಾಹನ ನಿಲ್ಲಿಸುವ ಕಿರಿಕಿರಿ ಇಲ್ಲ ಟೋಲ್ ಪ್ಲಾಜಾಗಳಿಗೆ ಬೀಳಲಿದೆ ಕಾಯಂ ಬೀಗ

ಇನ್ನು ಹೆದ್ದಾರಿಯಲ್ಲಿ ವಾಹನ ನಿಲ್ಲಿಸುವ ಕಿರಿಕಿರಿ ಇಲ್ಲ ಟೋಲ್ ಪ್ಲಾಜಾಗಳಿಗೆ ಬೀಳಲಿದೆ ಕಾಯಂ ಬೀಗ

by Shwetha
May 10, 2026
0

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾಗುವಾಗ ಟೋಲ್ ಪ್ಲಾಜಾಗಳ ಮುಂದೆ ಗಂಟೆಗಟ್ಟಲೆ ಕಾಯುವ ಕಿರಿಕಿರಿಗೆ ಈಗ ಕೊನೆಗಾಲ ಬಂದಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ...

ಪಿಎಫ್ ಗ್ರಾಹಕರಿಗೆ ಬಂಪರ್ ಸುದ್ದಿ: ನಿಮ್ಮ ಹಳೆಯ ಪಿಎಫ್ ಖಾತೆಯಲ್ಲಿ ಹಣ ಉಳಿದಿದೆಯೇ? ಆಧಾರ್ ಮೂಲಕ ಬಾಕಿ ಹಣ ಪತ್ತೆಹಚ್ಚಲು ಬರಲಿದೆ ಹೊಸ ವ್ಯವಸ್ಥೆ

ಪಿಎಫ್ ಗ್ರಾಹಕರಿಗೆ ಬಂಪರ್ ಸುದ್ದಿ: ನಿಮ್ಮ ಹಳೆಯ ಪಿಎಫ್ ಖಾತೆಯಲ್ಲಿ ಹಣ ಉಳಿದಿದೆಯೇ? ಆಧಾರ್ ಮೂಲಕ ಬಾಕಿ ಹಣ ಪತ್ತೆಹಚ್ಚಲು ಬರಲಿದೆ ಹೊಸ ವ್ಯವಸ್ಥೆ

by Shwetha
May 10, 2026
0

ಉದ್ಯೋಗಸ್ಥರಿಗೆ ಮತ್ತು ಕೆಲಸ ಬಿಟ್ಟಿರುವ ಲಕ್ಷಾಂತರ ಜನರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಿದೆ. ನಿಮ್ಮ ಹಳೆಯ ಪಿಎಫ್ ಖಾತೆಯಲ್ಲಿ ಹಣ ಬಾಕಿ ಉಳಿದಿದ್ದು, ಅದನ್ನು ಪಡೆಯಲು...

ವರ್ಷಾಂತ್ಯದೊಳಗೆ ಗ್ರಾಮ ಪಂಚಾಯತ್ ಚುನಾವಣೆ ಪೂರ್ಣ: ಗ್ರಾಮೀಣ ಸಮರಕ್ಕೆ ಸಜ್ಜಾಗುವಂತೆ ಸಚಿವ ಪ್ರಿಯಾಂಕ್ ಖರ್ಗೆ ಕರೆ

ವರ್ಷಾಂತ್ಯದೊಳಗೆ ಗ್ರಾಮ ಪಂಚಾಯತ್ ಚುನಾವಣೆ ಪೂರ್ಣ: ಗ್ರಾಮೀಣ ಸಮರಕ್ಕೆ ಸಜ್ಜಾಗುವಂತೆ ಸಚಿವ ಪ್ರಿಯಾಂಕ್ ಖರ್ಗೆ ಕರೆ

by Shwetha
May 10, 2026
0

ಕಲಬುರಗಿ: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರುವ ಸಮಯ ಹತ್ತಿರವಾಗಿದ್ದು, ಪ್ರಸಕ್ತ ಕ್ಯಾಲೆಂಡರ್ ವರ್ಷದ ಅಂತ್ಯದೊಳಗೆ ಗ್ರಾಮ ಪಂಚಾಯತ್ ಚುನಾವಣಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲಾಗುವುದು ಎಂದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram