ADVERTISEMENT
Saturday, June 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

‘ಆ ಅಪರಿಚಿತ ವ್ಯಕ್ತಿಯೂ.. ನಿಗೂಢ ಟಾರಡ್ ದೇಶವೂ !’ (A Mystery man from Taured); ದೇಶಕಾಲಗಳನ್ನು ದಾಟಿದ ಟೈಂ ಟ್ರಾವಲರ್ ಕಥೆ

admin by admin
August 4, 2020
in Newsbeat, Saaksha Special, ಕ್ರೀಡೆ
Share on FacebookShare on TwitterShare on WhatsappShare on Telegram

‘ಆ ಅಪರಿಚಿತ ವ್ಯಕ್ತಿಯೂ.. ನಿಗೂಢ ಟಾರಡ್ ದೇಶವೂ !’ (A Mystery man from Taured); ದೇಶಕಾಲಗಳನ್ನು ದಾಟಿದ ಟೈಂ ಟ್ರಾವಲರ್ ಕಥೆ

ಇಡೀ ಬ್ರಹ್ಮಾಂಡವೇ ಕೌತುಕದ ಆಗರ ಎನ್ನುತ್ತಾರೆ. ಇದರ ಎಷ್ಟೋ ರಹಸ್ಯಗಳು ಇನ್ನೂ ಸಹ ಮಾನವನಿಗೆ ಅಪರಿಚಿತವಾಗಿಯೇ ಉಳಿದು ಹೋಗಿವೆ. ಮಾನವ ಬ್ರಹ್ಮಾಂಡದ ಒಡಲನ್ನ ತಿಳಿಯಲು ಯತ್ನಿಸಿದಷ್ಟೂ ಹೊಸ ಹೊಸ ಗೊಂದಲಗಳು ತಲೆಯೆತ್ತುತ್ತವೆ. ಬ್ರಹ್ಮಾಂಡದ ಬಗೆಗೆ ಮಾನವ ತಳೆದ ಆಸಕ್ತಿ ಹಾಗೂ ಕುತೂಹಲಗಳಿಗೆ ಕೊನೆ ಮೊದಲಿಲ್ಲ. ಬ್ರಹ್ಮಾಂಡದ ಹುಟ್ಟು ಹೇಗಾಯ್ತು? ಭೂಮಿಯ ಮೇಲಿನ ಜೀವೋದ್ಭವಕ್ಕೆ ಅಸಲಿ ಕಾರಣವೇನು? ಬ್ರಹ್ಮಾಂಡದ ಇತರೆ ಯಾವ ಮೂಲೆಯಲ್ಲಾದರೂ ಜೀವಸೆಲೆ ಚಿಗುರೊಡೆದಿದೆಯೆ‌? ಎಂಬಿಂಥ ಪ್ರಶ್ನೆಗಳು ನಾಗರೀಕತೆಯ ಆರಂಭದಿಂದಲು ಮಾನವನನ್ನ ಕಾಡಲಾರಂಭಿಸಿದ ಪ್ರಶ್ನೆಗಳು.

Related posts

80 ಲಕ್ಷದ ವಾಚ್ ಅಲ್ಲ ಇದು ಅಂಬೇಡ್ಕರ್ ಚಿತ್ರವಿರುವ ಎಚ್ ಎಂಟಿ ವಾಚ್ ಅನುಮಾನವಿದ್ದರೆ ಮನೆಗೆ ಎಸ್‌ಐಟಿ ಕಳಿಸಿ ಎಂದು ಕುಮಾರಸ್ವಾಮಿ ಸವಾಲು

80 ಲಕ್ಷದ ವಾಚ್ ಅಲ್ಲ ಇದು ಅಂಬೇಡ್ಕರ್ ಚಿತ್ರವಿರುವ ಎಚ್ ಎಂಟಿ ವಾಚ್ ಅನುಮಾನವಿದ್ದರೆ ಮನೆಗೆ ಎಸ್‌ಐಟಿ ಕಳಿಸಿ ಎಂದು ಕುಮಾರಸ್ವಾಮಿ ಸವಾಲು

June 27, 2026
ಕೋರ್ಟ್ ನಲ್ಲಿ ಕ್ಷಮೆ ಕೇಳಲು ನಿರಾಕರಿಸಿದ ಪ್ರದೀಪ್ ಈಶ್ವರ್: ಕಾನೂನು ಸಮರದಲ್ಲಿ ಪ್ರತಾಪ್ ಸಿಂಹಗೆ ಮೇಲುಗೈ?- ಚಿಕ್ಕಬಳ್ಳಾಪುರ ಶಾಸಕರಿಗೆ ಕಾನೂನು ಶಾಕ್

ಕೋರ್ಟ್ ನಲ್ಲಿ ಕ್ಷಮೆ ಕೇಳಲು ನಿರಾಕರಿಸಿದ ಪ್ರದೀಪ್ ಈಶ್ವರ್: ಕಾನೂನು ಸಮರದಲ್ಲಿ ಪ್ರತಾಪ್ ಸಿಂಹಗೆ ಮೇಲುಗೈ?- ಚಿಕ್ಕಬಳ್ಳಾಪುರ ಶಾಸಕರಿಗೆ ಕಾನೂನು ಶಾಕ್

June 27, 2026

ಇಪ್ಪತ್ತನೆ ಶತಮಾನದಲ್ಲಿ, ನಮ್ಮ ಬ್ರಹ್ಮಾಂಡದಂತೆಯೇ ಇತರೆ ಬ್ರಹ್ಮಾಂಡಗಳೂ ನಮ್ಮ ಸುತ್ತ ಇರಬಹುದೆ ? ಮಾನವ ಸಮಯ ಯಾತ್ರೆ (Time travel) ಮಾಡಿ ಈ ಬ್ರಹ್ಮಾಂಡಗಳಿಗೆ ಜಿಗಿಯಬಹುದೆ ? ಎಂಬ ಹೊಸ ಮಾದರಿಯ ಸಂಶಯಗಳು ಹುಟ್ಟಿಕೊಂಡವು. ಇದರ ಕುರಿತಾಗಿ ಅನೇಕ ಸಿದ್ಧಾಂತಗಳು. ವಾದ ವಿವಾದಗಳೂ ತಙ್ಞರ ವಲಯದಲ್ಲಿ ಹುಟ್ಟಿಕೊಂಡವು. ನಮ್ಮ ವಿಶ್ವವನ್ನೇ ಹೋಲುವ ಪರ್ಯಾಯ ಅಥವಾ ಪ್ರತಿ ವಿಶ್ವವೊಂದರ ಇರುವಿಕೆಯ ಸಾಧ್ಯತೆಯ ಬಗ್ಗೆ ವಿಙ್ಞಾನಿಗಳು ಚಿಂತಿಸಿದರು. 1930 ರಿಂದಲೇ ಈ ಹೊಸ ಬಗೆಯ ಚಿಂತನೆಯು ತಲೆಯೆತ್ತಿತಾದರೂ ಪ್ರಾಯೋಗಿಕವಾದ ಅಂಕಿ ಅಂಶಗಳು ದೊರೆಯಲಿಲ್ಲ. ಪ್ರತಿ ವಿಶ್ವದಲ್ಲಿ ಇರಬಹುದಾದ ಪ್ರತಿ ಅಣು ಅಥವಾ ಪ್ರತ್ಯಾಣುಗಳನ್ನ 1932 ರಲ್ಲಿ ಸಂಶೋಧಿಸಿದ ನಂತರವಂತೂ ಈ ಎಲ್ಲ ವಾದಗಳಿಗೆ ಇನ್ನಷ್ಟು ಪುಷ್ಟಿ ಸಿಕ್ಕಂತಾಯ್ತು.

ಹಾಗಾದರೆ ನಮ್ಮ ಸುತ್ತ ಪ್ರತಿ ವಿಶ್ವ ಇರಲು ಸಾಧ್ಯವೆ? ಅಲ್ಲಿಯೂ ಸಹ ಮಾನವ ಇದ್ದಾನೆಯೆ? ಅಲ್ಲಿಯೂ ನಾಗರೀಕತೆ ಅರಳಿದೆಯೆ? ಸಮಯ ಯಾತ್ರೆಯ ಮೂಲಕ ಅಲ್ಲಿಂದ ಇಲ್ಲಿಗೂ, ಇಲ್ಲಿಂದ ಅಲ್ಲಿಗೂ ಪ್ರಯಾಣ ಮಾಡಬಹುದೆ? ತಙ್ಞರು ಈ ಪ್ರಶ್ನೆಗಳಿಗೆ ಉತ್ತರ ಸಾಧಿಸುವ ಸಮಯದಲ್ಲೇ ಈ ಸಂಶಯಗಳಿಗೆ ಉತ್ತರ ಎಂಬಂತೆ ಆ ಒಂದು ನಿಗೂಢ ಘಟನೆ ಜರುಗಿ ಎಲ್ಲರನ್ನೂ ಇನ್ನಷ್ಟು ಗೊಂದಲಕ್ಕೀಡು ಮಾಡಿತು.

1954 ರಲ್ಲಿ ಜಪಾನಿನಲ್ಲಿ ನಡೆದ ಈ ಘಟನೆಯ ಸತ್ಯಾಸತ್ಯತೆ ಇಂದಿಗೂ ಸಹ ನಿಗೂಢವಾಗಿ ಉಳಿದಿದೆ. ಸಮಯ ಯಾತ್ರೆ ಹಾಗೂ ಪ್ರತಿ ವಿಶ್ವದ ಇರುವಿಕೆಯ ಸಿದ್ಧಾಂತಗಳಿಗೊಂದು ಅಸ್ಪಷ್ಟ ಉದಾಹರಣೆಯೂ ಆಗಿ ವಲಯದಲ್ಲಿ ಗುರುತಿಸಿಕೊಂಡಿದೆ. ಏನು ಆ ಘಟನೆ ? ಅದರ ಹಿನ್ನೆಲೆ ಏನು ? ಬನ್ನಿ ಅವಲೋಕಿಸೋಣ.

ಈ ಘಟನೆ ನಡೆದದ್ದು ಜಪಾನಿನ ಟೋಕಿಯೋ ನಗರದಲ್ಲಿ‌. ಅದು 1954 ನೆ ಇಸವಿಯ ಜುಲೈ ಮಾಹೆ. ಆ ದಿನ ಟೋಕಿಯೋದ ಹನೇಡಾ ವಿಮಾನ ನಿಲ್ದಾಣ ಎಂದಿನಂತೆ ಪ್ರಯಾಣಿಕರಿಂದ ಗಿಜಿಗುಡುತ್ತಿತ್ತು. ಆಕರ್ಷಕವಾದ ದಿರಿಸಿನೊಂದಿಗೆ ಒಬ್ಬ ಬಿಳಿ ವರ್ಣದ ಎತ್ತರದ ಜೆಂಟಲ್ ಮನ್ ಒಬ್ಬ ಚೆಕ್ ಇನ್ ಮಾಡಿಕೊಂಡು ಒಳ ಬಂದ. ಅವನ ಬಳಿ ದೊಡ್ಡ ಲಗೇಜ್ ಇದ್ದಿದ್ದರಿಂದ ಅಲ್ಲಿನ‌ ಕಸ್ಟಮ್ಸ್ ಅಧಿಕಾರಿಗಳ ಚೆಕ್ಕಿಂಗ್ ಮುಗಿಸಿಯೇ ಒಳಹೋಗಬೇಕಿತ್ತು. ಕಸ್ಟಮ್ಸ್ ಅಧಿಕಾರಿಗಳ ಬಳಿ ಬಂದವನೇ ವ್ಯಕ್ತಿ ತನ್ನ ಪಾಸ್ ಪೋರ್ಟ್ ತೋರಿಸಿದ. ಪಾಸ್ ಪೋರ್ಟಿನ ಮೇಲೆ ‘ಟಾರಡ್’ ಎಂಬ ಹೆಸರಿನ ಸ್ಥಳದ ಗುರುತಿತ್ತು. ಅಧಿಕಾರಿಗಳು ಅವನನ್ನ ಎಲ್ಲಿಂದ ಬಂದೆ ಎಂದು ಪ್ರಶ್ನಿಸಿದರು. ಆ ವ್ಯಕ್ತಿ ಸ್ವಾಭಾವಿಕವಾಗಿ ತಾನು ಟಾರಡ್ ನಿಂದ ಬಂದವನೆಂದು ಹೇಳಿದ. ಅವರಿಗೆ ವ್ಯಕ್ತಿ ಹೇಳಿದ ಆ ಸ್ಥಳದ ಬಗ್ಗೆ ಸಂಶಯವಾಯ್ತು. ಕಾರಣ, ಅವರ‌್ಯಾರೂ ಆ ಸ್ಥಳದ ಹೆಸರನ್ನ ಈ ಹಿಂದೆ ಎಲ್ಲಿಯೂ ಕೇಳಿರಲಿಲ್ಲ. ಆದರೂ ಅವನ‌ ಪಾಸ್ ಪೋರ್ಟ್ ನ ಮೇಲೆ ಆ ಸ್ಥಳದ ಸೀಲ್ ಇತ್ತು !

ಅಲ್ಲಿನ ಸಿಬ್ಬಂದಿ ಸ್ಥಳೀಯ ಅಥಾರಿಟಿಗಳಿಗು ಫೋನ್ ಮಾಡಿ ಆ ಸ್ಥಳದ ಬಗ್ಗೆ ಕೇಳಿದರು. ಆದರೆ ಯಾರಿಂದಲು ಅದರ ಇರುವಿಕೆಯ ಬಗ್ಗೆ ನಿಖರ ಮಾಹಿತಿ ಸಿಗಲಿಲ್ಲ. ಆ ವ್ಯಕ್ತಿಯಾದರೋ ತಾನು ಇದು ಮೂರನೇ ಬಾರಿ ಟೋಕಿಯೋಗೆ ಬರುತ್ತಿರುವುದಾಗಿಯೂ, ತಾನು ಹೇಳಿದ ಸ್ಥಳ ಸತ್ಯವಾಗಿಯೂ ಇದೆಯೆಂದೂ, ಸಾವಿರ ವರ್ಷಗಳಿಂದಲೂ ಅದು ರಾಷ್ಟ್ರದ ಮಾನ್ಯತೆ ಪಡೆದಿದೆಯೆಂದೂ ವಾದಿಸಿದ! ಆ ವ್ಯಕ್ತಿಯು ನೋಡಲು ಎಲ್ಲಾ ವಿಧದಲ್ಲಿಯೂ ಸಹಜವಾಗಿಯೇ ಕಂಡ. ಅವನು ಯೂರೋಪ್ ಮೂಲದ ಕಕೇಶಿಯನ್ ಜನಾಂಗದವರ ಹಾಗೆ ಕೆಂಪು ಮಿಶ್ರಿತ ಬಿಳಿ ವರ್ಣದ ಎತ್ತರ ಕಾಯನಾಗಿದ್ದೂ. ಫ್ರೆಂಚ್ ಭಾಷೆಯನ್ನ ಮಾತಾಡುತ್ತಿದ್ದ. ಅದರ ಜತೆಗೆ ಜಪಾನೀ ಹಾಗೂ ಇತರ ಭಾಷೆಗಳನ್ನೂ ಸಹ ಮಾತಾಡುತ್ತಿದ್ದ.

ಆದರೆ ಅವನು ಉಲ್ಲೇಖಿಸಿದ ಸ್ಥಳದ ವಿವರಣೆ ಅಸಹಜವಾಗಿತ್ತು. ತಲೆ ಕೆರೆದುಕೊಂಡ ಕಸ್ಟಮ್ಸ್ ಅಧಿಕಾರಿಗಳು ಗ್ಲೋಬ್ ಮ್ಯಾಪ್ ತರಿಸಿ ಅವನ ಜಾಗ ಎಲ್ಲಿದೆ ಎಂದು ತೋರಿಸುವಂತೆ ಕೇಳಿಕೊಂಡರು. ಕೂಡಲೇ ವ್ಯಕ್ತಿಯು ಒಂದು ಜಾಗದತ್ತ ಬೆರಳು ತೋರಿಸಿದ. ಅದು ನೋಡಿದರೆ ಈಗಿನ ಫ್ರಾನ್ಸ್ ಹಾಗೂ ಸ್ಪೇನ್ ರಾಷ್ಟ್ರಗಳ ಗಡಿ ಮಧ್ಯೆ ಇತ್ತು. ಆದರೆ ಮ್ಯಾಪಿನಲ್ಲಿ ಅದರ ಹೆಸರು ‘ಟಾರಡ್’ ಬದಲಿಗೆ ‘ಆಂಡೋರಾ’ ಎಂದು ತೋರಿಸುತ್ತಿತ್ತು. ಇದರ ಬಗ್ಗೆ ಕೇಳಿದಾಗ ಆ ಸ್ಥಳ ಏಕೆ ಈ ಮ್ಯಾಪ್ ನಲ್ಲಿ ಆಂಡೋರಾ ಎಂದು ತೋರಿಸುತ್ತಿದೆ ಎಂದು ಆ ವ್ಯಕ್ತಿಯೂ ಸಹ ಅಚ್ಚರಿ ವ್ಯಕ್ತ ಪಡಿಸಿದ !

ವ್ಯಕ್ತಿಯ ಬ್ಯಾಗಿನಲ್ಲಿ ವಿವಿಧ ದೇಶಗಳ ಕರೆನ್ಸಿಗಳಿದ್ದವು. ಹಾಗೂ ಒಂದಷ್ಟು ಬಿಳಿ ಹಾಳೆಗಳಿದ್ದ ಡಾಕ್ಯುಮೆಂಟ್ ಫೈಲ್ ಸಹ ಇತ್ತು. ವ್ಯಕ್ತಿ ಅಂತರ್ರಾಷ್ಟ್ರೀಯ ಉದ್ಯಮಿಯಿರಬೇಕೆಂದು ಅವರು ಭಾವಿಸಿದರು. ನೋಡಲು ಪ್ರಾಯದ ಗಂಡಸಿನಷ್ಟು ಸಮರ್ಥನಾಗಿಯೂ, ನಸು ಗಡ್ಢಧಾರಿಯಾಗಿದ್ದ ಈ ಸ್ಫುರದ್ರೂಪಿ ವ್ಯಕ್ತಿ ಹಲವು ಬ್ಯುಸಿನೆಸ್ ಟ್ರಿಪ್ ಕೈಗೊಂಡಿದ್ದಿರಬೇಕೆಂದು ಭಾವಿಸಲಾಯ್ತು. ಅವನ ಪಾಸ್ ಪೋರ್ಟ್ ನ ವಿವರಗಳೂ ಕೂಡ ಅನುಮಾನಾಸ್ಪದವಾಗಿ ಕಂಡರೂ ಅಥೆಂಟಿಕ್ ಆಗಿದ್ದವು. ಆದರೂ ಅವನ ವಿವರಣೆ ವಿವಾದಾತ್ಮಕವಾಗಿದ್ದುದರಿಂದ ಅವನನ್ನ ಕೂರಿಸಿ ಮತ್ತಷ್ಟು ಪ್ರಶ್ನೆಗಳನ್ನ ಒಡ್ಡಲಾಯ್ತು. ಆ ವ್ಯಕ್ತಿಯು ತಾನು ಕೆಲಸ ಮಾಡ್ತಿದ್ದ ಕಂಪನಿ ಹಾಗೂ ತಾನು ಇಳಿದುಕೊಂಡಿದ್ದ ಹೊಟೇಲ್ ಈ ಎಲ್ಲದರ ವಿವರಗಳನ್ನೂ ಸಹ ಕೊಟ್ಟ. ಆತ ತಾನು ಕೆಲಸ ಮಾಡ್ತಿದ್ದ ಕಂಪನಿಯು ಟಾರಡ್ ನಲ್ಲಿದೆ ಎಂದಿದ್ದ. ವಿಚಾರಿಸಿದಾಗ ಅದು ಇದ್ದುದು ಜಪಾನಿನ ಟೋಕಿಯೋದಲ್ಲಿ ಎಂಬ ವಿವರ ಸಿಕ್ಕಿತು.

ಇನ್ನು ಆತ ಹೇಳಿದ್ದ ಹೋಟೆಲ್ ಇದ್ದುದು ನಿಜವಾದರೂ ಸಹ ಅಲ್ಲಿ ವಿಚಾರಿಸಿದಾಗ ಈ ವ್ಯಕ್ತಿಯು ತಮ್ಮ ಹೊಟೇಲ್ ನಲ್ಲಿ ಇಳಿದುಕೊಂಡಿಲ್ಲ ಎಂಬ ಉತ್ತರ ಕೇಳಿ ಬಂತು. ಈ ಬಗ್ಗೆ ವ್ಯಕ್ತಿಯನ್ನ ಕೂಲಂಕುಷವಾಗಿ ಬಹಳ ಹೊತ್ತು ವಿಚಾರಣೆ ಮಾಡಲಾಯ್ತು. ಎಷ್ಟು ಸಲ ಕೇಳಿದರೂ ಸಹ ವ್ಯಕ್ತಿ ತಾನು ಟಾರಡ್ ನವನೆಂದೂ. ತಾನು ನೀಡಿದ ವಿವರಣೆಗಳೆಲ್ಲವೂ ನಿಜವೆಂದೂ ವಾದ ಮಾಡಿದ. ಅನೇಕಾರು ಘಂಟೆಗಳ ಕಾಲ ಅವನೊಟ್ಟಿಗೆ ವಾದ ವಿವಾದ ಏರ್ಪಟ್ಟಿತು. ಕಡೆಗೆ ವ್ಯಕ್ತಿಯ ವಿವರಣೆಗಳು ಸಂಶಯಾಸ್ಪದವಾಗಿದ್ದರಿಂದ ಅವನನ್ನ ಬಂಧಿಸಿದ ಅಧಿಕಾರಿಗಳು ತಮ್ಮ ಕಸ್ಟಡಿಗೆ ತೆಗೆದುಕೊಂಡರು. ಅಲ್ಲಿನ ಎರಡು ಸ್ಟೋರೇ ಕಟ್ಟಡವೊಂದರಲ್ಲಿ ವ್ಯಕ್ತಿಯನ್ನ ಬಂಧಿಸಿ ಕಾವಲಿಗೆ ಇಬ್ಬರು ಗಾರ್ಡ್ ಗಳನ್ನ ನೇಮಿಸಲಾಯ್ತು.

ಆದರೆ ಮರುದಿನ ಅಷ್ಟೆಲ್ಲ ಸೆಕ್ಯುರಿಟಿಯ ನಡುವೆಯೂ ವ್ಯಕ್ತಿ ಹಾಗೂ ಅವನ ಲಗೇಜ್ ದಿಡೀರನೆ ಯಾರಿಗು ಸಹ ಅರ್ಥವಾಗದ ಹಾಗೆ ಮಾಯವಾಗಿದ್ದವು ! ಎಷ್ಟು ಹುಡುಕಿದರೂ ಸಹ ವ್ಯಕ್ತಿಯಾಗಲೀ ಅವನ ವಸ್ತುಗಳಾಗಲೀ ಮುಂದೆ ಯಾರಿಗು ಸಿಗಲಿಲ್ಲ. ಬಾಲ್ಕನಿಯೇ ಇಲ್ಲದಿದ್ದ ಆ ಕಟ್ಟಡದ ಮೇಲಿನ ಅಂತಸ್ತಿನಲ್ಲಿದ್ದ ವ್ಯಕ್ತಿ ಒಂದೇ ರಾತ್ರಿಯಲ್ಲಿ ಗಾರ್ಡ್ ಗಳನ್ನ ಏಮಾರಿಸಿ ಪಾರಾಗಲು ಸಾಧ್ಯವೆ ಇರಲಿಲ್ಲ! ಆದರೂ ಸಹ ಆತ ಪಾರಾಗಿದ್ದು ಹೇಗೆ? ಎಂಬ ಪ್ರಶ್ನೆ ಎಲ್ಲರನ್ನೂ ದಂಗು ಪಡಿಸಿತು. ಈ ವ್ಯಕ್ತಿ ಬಹುಶಃ ಟಾರಡ್ ಎಂಬ ದೇಶದವನೇ ಇರಬೇಕು. ಆದರೆ ಅದು ಇದ್ದುದು ಪ್ರತಿ ವಿಶ್ವದಲ್ಲಿ. ಕಾಲ ದೇಶದ ವಿಚಿತ್ರ ಸ್ಥಿತಿಗೆ ಸಿಲುಕಿದ ಈ ವ್ಯಕ್ತಿ ತಪ್ಪಿ ನಮ್ಮ ವಿಶ್ವದೊಳಕ್ಕೆ ಬಂದಿದ್ದಾನೆ. ಪುನಃ ಮರುದಿನ ತನ್ನ ವಿಶ್ವಕ್ಕೆ ಜಿಗಿದಿದ್ದಾನೆ. ಈತ ಒಬ್ಬ ಅನಿಶ್ಚಿತ ಸಮಯ ಯಾತ್ರಿಕ (time traveller) ಎಂದು ಕೆಲವು ತಜ್ಞರು ಈ ಘಟನೆಯ ಕುರಿತು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ!

ಈ ಘಟನೆಯ ಬಗ್ಗೆ ಇದಕ್ಕಿಂತ ಹೆಚ್ಚಿನ ಯಾವ ವಿವರಣೆಯನ್ನೂ ಸಹ ಕೊಡಲಾಗಿಲ್ಲ. ಇದೊಂದು ಅಂತರ್ಜಾಲದ ಕಟ್ಟು ಕತೆ ಅಷ್ಟೆ ಎಂದೂ ಸಹ ಹಲವರು ದೂರಿದ್ದಾರಾದರೂ, ಸಮಯ ಯಾತ್ರೆಯ ಸಾಧ್ಯತೆಯ ಬಗ್ಗೆ ಈ ಘಟನೆ ಒಂದು ಪ್ರಮುಖ ಉಲ್ಲೇಖ ಎಂಬುದನ್ನ ಮಾತ್ರ ಅಲ್ಲಗಳೆಯುವಂತಿಲ್ಲ !

ಮಾಹಿತಿ ಸಂಗ್ರಹ ಮತ್ತು ಲೇಖನ : ಇಂದೂದರ್ ಒಡೆಯರ್ ಚಿತ್ರದುರ್ಗ (ಡುಗ್ಗು)

Tags: civilizationHuman interesthuman universeTaured from A Mystery ManTime Traveler
ShareTweetSendShare
Join us on:

Related Posts

80 ಲಕ್ಷದ ವಾಚ್ ಅಲ್ಲ ಇದು ಅಂಬೇಡ್ಕರ್ ಚಿತ್ರವಿರುವ ಎಚ್ ಎಂಟಿ ವಾಚ್ ಅನುಮಾನವಿದ್ದರೆ ಮನೆಗೆ ಎಸ್‌ಐಟಿ ಕಳಿಸಿ ಎಂದು ಕುಮಾರಸ್ವಾಮಿ ಸವಾಲು

80 ಲಕ್ಷದ ವಾಚ್ ಅಲ್ಲ ಇದು ಅಂಬೇಡ್ಕರ್ ಚಿತ್ರವಿರುವ ಎಚ್ ಎಂಟಿ ವಾಚ್ ಅನುಮಾನವಿದ್ದರೆ ಮನೆಗೆ ಎಸ್‌ಐಟಿ ಕಳಿಸಿ ಎಂದು ಕುಮಾರಸ್ವಾಮಿ ಸವಾಲು

by Shwetha
June 27, 2026
0

ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಐಷಾರಾಮಿ ವಾಚ್ ಗಳ ಬಗ್ಗೆ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ತಮ್ಮದೇ ಶೈಲಿಯಲ್ಲಿ ಖಡಕ್ ತಿರುಗೇಟು ನೀಡಿದ್ದಾರೆ. ಇತ್ತೀಚೆಗೆ...

ಕೋರ್ಟ್ ನಲ್ಲಿ ಕ್ಷಮೆ ಕೇಳಲು ನಿರಾಕರಿಸಿದ ಪ್ರದೀಪ್ ಈಶ್ವರ್: ಕಾನೂನು ಸಮರದಲ್ಲಿ ಪ್ರತಾಪ್ ಸಿಂಹಗೆ ಮೇಲುಗೈ?- ಚಿಕ್ಕಬಳ್ಳಾಪುರ ಶಾಸಕರಿಗೆ ಕಾನೂನು ಶಾಕ್

ಕೋರ್ಟ್ ನಲ್ಲಿ ಕ್ಷಮೆ ಕೇಳಲು ನಿರಾಕರಿಸಿದ ಪ್ರದೀಪ್ ಈಶ್ವರ್: ಕಾನೂನು ಸಮರದಲ್ಲಿ ಪ್ರತಾಪ್ ಸಿಂಹಗೆ ಮೇಲುಗೈ?- ಚಿಕ್ಕಬಳ್ಳಾಪುರ ಶಾಸಕರಿಗೆ ಕಾನೂನು ಶಾಕ್

by Shwetha
June 27, 2026
0

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ನಡುವಿನ ಕಾನೂನು ಸಂಘರ್ಷ ಈಗ ಹೊಸ ತಿರುವು ಪಡೆದುಕೊಂಡಿದೆ. ಪ್ರದೀಪ್ ಈಶ್ವರ್ ಅವರು ತಮ್ಮ...

CM Yogi Adityanath

ಸನಾತನ ಧರ್ಮದ ಜೊತೆ ಆಟವಾಡಿದರೆ ಸುಮ್ಮನಿರಲ್ಲ: ಅಯೋಧ್ಯೆ ದೇಣಿಗೆ ಹಗರಣದ ಬೆನ್ನಲ್ಲೇ ಗುಡುಗಿದ ಸಿಎಂ ಯೋಗಿ

by Shwetha
June 27, 2026
0

ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ವಿಶ್ವದಾದ್ಯಂತ ಇರುವ ಕೋಟ್ಯಂತರ ಭಕ್ತರು ಶ್ರದ್ಧಾಭಕ್ತಿಯಿಂದ ಸಮರ್ಪಿಸಿದ ದೇಣಿಗೆ ಮತ್ತು ಕಾಣಿಕೆಯನ್ನು ದುರುಪಯೋಗಪಡಿಸಿಕೊಂಡ ಘಟನೆ ಈಗ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ಅಕ್ರಮದ...

ಅಡ್ಡ ಮತದಾನಕ್ಕೆ ನಾನೇ ಕಾರಣ ಎಂಬ ಆರೋಪ ಸುಳ್ಳು : ನನ್ನ ಟೈಮ್ ಚೆನ್ನಾಗಿದೆ, ಪಕ್ಷ ವಿರೋಧಿಗಳಿಗೆ ಹೆದರಲ್ಲ- ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿರೋಧಿಗಳಿಗೆ ವಿಜಯೇಂದ್ರ ಖಡಕ್ ಉತ್ತರ

ಅಡ್ಡ ಮತದಾನಕ್ಕೆ ನಾನೇ ಕಾರಣ ಎಂಬ ಆರೋಪ ಸುಳ್ಳು : ನನ್ನ ಟೈಮ್ ಚೆನ್ನಾಗಿದೆ, ಪಕ್ಷ ವಿರೋಧಿಗಳಿಗೆ ಹೆದರಲ್ಲ- ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿರೋಧಿಗಳಿಗೆ ವಿಜಯೇಂದ್ರ ಖಡಕ್ ಉತ್ತರ

by Shwetha
June 27, 2026
0

ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಬೆಳವಣಿಗೆಯಿಂದ ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲಗಳಿಗೆ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಈಗ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ...

ಇಡಿ ಸಿಬಿಐ ಭಯಕ್ಕೆ ತಾಯಿಯಂತಾ ಪಕ್ಷವನ್ನೇ ಮಾರಿಕೊಂಡ್ರು: ಹೆತ್ತ ತಾಯಿಗೆ ದ್ರೋಹ ಬಗೆದಂತೆ ಪಕ್ಷಾಂತರ- ದ್ರೋಹಿಗಳಿಗೆ ಜನರೇ ಪಾಠ ಕಲಿಸ್ತಾರೆ ಎಂದು ಗುಡುಗಿದ ಮಮತಾ ಬ್ಯಾನರ್ಜಿ

ಇಡಿ ಸಿಬಿಐ ಭಯಕ್ಕೆ ತಾಯಿಯಂತಾ ಪಕ್ಷವನ್ನೇ ಮಾರಿಕೊಂಡ್ರು: ಹೆತ್ತ ತಾಯಿಗೆ ದ್ರೋಹ ಬಗೆದಂತೆ ಪಕ್ಷಾಂತರ- ದ್ರೋಹಿಗಳಿಗೆ ಜನರೇ ಪಾಠ ಕಲಿಸ್ತಾರೆ ಎಂದು ಗುಡುಗಿದ ಮಮತಾ ಬ್ಯಾನರ್ಜಿ

by Shwetha
June 27, 2026
0

ಪಕ್ಷದ ಸಂಕಷ್ಟದ ಸಮಯದಲ್ಲಿ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿರುವ ಶಾಸಕರು ಮತ್ತು ಸಂಸದರ ವಿರುದ್ಧ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram