ಬೆಳಗಾವಿ: ಬೆಳಗಾವಿಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನಲೆ, ನೀರಾವರಿ ನಿಗಮ ಪ್ರವಾಹದ ಮುನ್ಸೂಚನೆ ನಿಡಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಹಿಡಕಲ ಜಲಾಶಯಕ್ಕೆ ಶೇ 80% ರಷ್ಟು ಒಳ ಹರಿವು ಹೆಚ್ಚಳವಾಗಿದ್ದು, ಒಳ ಹರಿವು ಹೆಚ್ಚಳದಿಂದ ಕ್ರಸ್ಟ್ ಗೇಟ್ ಮೂಲಕ ನೀರು ಹರಿ ಬಿಡುವಂತೆ ಸೂಚನೆ ನೀಡಲಾಗಿದೆ. ಇನ್ನೂ ನೆರೆ ಭೀತಿ ಇರುವ ಹಿನ್ನೆಲೆ ಹಿರಣ್ಯಕೇಶಿ ನದಿ ದಂಡದಲ್ಲಿ ಇರುವ ಗ್ರಾಮಸ್ಥರು ಜಾನುವಾರ ಸಮೇತ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ನೀರಾವರಿ ನಿಗಮ ಸೂಚಿಸಿದೆ. ಇಂಗಳಗಿ, ಲೇಬರ್ ಕ್ಯಾಂಪ್ ಶಿಂದೀಹಟ್ಟಿ, ನಿರ್ವಾನಟ್ಟಿ, ನದಿಗುಡಿಕೇತರ, ಘೋಡಗೇರಿ, ಶಿವಾಪೂರ, ಸುಲ್ತಾನಪೂರ, ನೋಗಿನಹಾಳ, ಅವರಗೋಳ, ಸೇರಿದಂತೆ ಕೋಟಬಾಗಿ, ಗುಡಸ, ಜಂಗಟಿಹಾಳ, ಶಿರಡಾಣ, ನಂದಗಾವ , ಮುತ್ತ್ನಾಳ, ಖಾನಾಪೂರ ಹಾಗೂ ಸಾವಳಗಿ , ಧುಪದಾಳ ಗ್ರಾಮಗಳು ಅಪಾಯದ ಅಂಚಿನಲ್ಲಿದ್ದು, ಈ ಗ್ರಾಮಗಳಲ್ಲಿನ ಜನರಿಗೆ ಸೂಚನೆ ಪ್ರಕಟಿಸಲಾಗಿದೆ.
ನಾಗೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿದ್ದೇ ದೊಡ್ಡ ತಪ್ಪು: ನಾಗೇಂದ್ರರನ್ನು ಎರಡು ಬಾರಿ ಬಲಿಪಶು ಮಾಡಲಾಗಿದೆ- ಸ್ವಪಕ್ಷದ ನಿರ್ಧಾರದ ವಿರುದ್ಧವೇ ಗುಡುಗಿದ ಕೆ ಎನ್ ರಾಜಣ್ಣ
ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಕಿಚ್ಚು ರಾಜ್ಯ ರಾಜಕಾರಣದಲ್ಲಿ ಇನ್ನೂ ಆರಿಲ್ಲ. ಇದರ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ಅವರು ಎರಡನೇ...








