ಮಾಸ್ಕ್ ಧರಿಸದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದ್ದೇವೆ – ಸಚಿವ ಸುಧಾಕರ್ ಮಾಹಿತಿ
ಮಾಸ್ಕ್ ಧರಿಸದಿರುವುದು ಸೇರಿದಂತೆ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಲಾಗಿದೆ. 2,05,029 ಪ್ರಕರಣ ದಾಖಲಿಸಿದ್ದು, 6.65 ಕೋಟಿ ರೂ. ದಂಡ ಸಂಗ್ರಹವಾಗಿದೆ.
ಕ್ವಾರಂಟೈನ್ ನಿಯಮ ಉಲ್ಲಂಘಿಸಿದವರ ವಿರುದ್ಧ 5,821 ಎಫ್ ಐಆರ್ ದಾಖಲಾಗಿದೆ. ಕ್ವಾರಂಟೈನ್ ನಲ್ಲಿದ್ದ 5.7 ಲಕ್ಷ ಜನರಿಗೆ ಎಚ್ಚರಿಕೆ ನೀಡಲಾಗಿದೆ. 3,246 ಮಂದಿಯನ್ನು ಮನೆಯಿಂದ ಸಾಂಸ್ಥಿಕ ಕ್ವಾರಂಟೈನ್ ಗೆ ಕಳುಹಿಸಲಾಗಿದೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರಣೆ ನೀಡಿದ್ರು.
ಮರಣ ಪ್ರಮಾಣ ಕಡಿಮೆ ಮಾಡಲು ಕೈಗೊಂಡ ಕ್ರಮಗಳಿಂದ ಜುಲೈ ನಲ್ಲಿದ್ದ 2.1 ಮರಣ ಪ್ರಮಾಣವು ಆಗಸ್ಟ್ ನಲ್ಲಿ 1.8 ಕ್ಕೆ ಇಳಿಕೆಯಾಗಿದೆ. ಕೋವಿಡ್ ಕೇರ್ ಸೆಂಟರ್ ಗಳಲ್ಲಿ 1.14 ಲಕ್ಷ ಹಾಸಿಗೆ, 20,000 ಜನರಲ್ ಹಾಸಿಗೆ, 8,000 ಆಕ್ಸಿಜನ್ ಹಾಸಿಗೆ, 3,000 ಐಸಿಯು ಹಾಸಿಗೆ, 1,500 ವೆಂಟಿಲೇಟರ್ ಸಹಿತ ಹಾಸಿಗೆಯೊಂದಿಗೆ ಕೊರೊನಾ ಪಿಡುಗು ನಿಯಂತ್ರಣ ಮಾಡುತ್ತಿದ್ದೇವೆ. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ 2,025 ವೆಂಟಿಲೇಟರ್ ನೀಡಿರುವುದಕ್ಕೆ ಧನ್ಯವಾದ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಹೇಳಿದ್ರು.








