ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದೆ ಶೋಭಾ ಕರಂದ್ಲಾಜೆ ಅವರು ಪ್ರತಿಕ್ರಿಯೆ ನೀಡಿದ್ದು, ಉತ್ತರ ಪ್ರದೇಶದಲ್ಲಿ ಅಪರಾಧಿಗಳ ಆಸ್ತಿಯ ಮುಟ್ಟುಗೋಲು ಹಾಕಿದ ಆದೇಶ ಕರ್ನಾಟಕದಲ್ಲೂ ಆಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ಈ ಘಟನೆ ಮಂಗಳೂರು, ಪಾದಾರಾಯನಪುರ ಗಲಭೆಯ ಮುಂದುವರೆದ ಭಾಗ ಎಂದಿದ್ದಾರೆ.
ಇನ್ನೂ ಮುಂದುವರೆದು ಮಾತನಾಡಿರುವ ಅವರು ಕಾಂಗ್ರೆಸ್ ಈಗ ಅರ್ಥ ಮಾಡಿಕೊಳ್ಳಬೇಕಾಗಿದೆ. ಇದೊಂದು ವ್ಯವಸ್ಥಿತ ಕುಕೃತ್ಯ. ಮುಜಾಮಿಲ್ ಪಾಷಾ ಮೂಲ ವ್ಯಕ್ತಿ. ಎಸ್ ಡಿ ಪಿ ಐ, ಪಿ ಎಫ್ ಐ ಚುನಾವಣಾ ದೃಷ್ಟಿಯಲ್ಲಿ ಮಾಡುತ್ತಿದೆ. ಒಂದು ಸಂಘಟನೆಗೆ ಇಷ್ಟು ಧೈರ್ಯ ಹೇಗೆ ಸಾಧ್ಯ? ಬಿಜೆಪಿ ಸರ್ಕಾರ ಇದೆ ಅಂತಾ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಿಡಿಕಾರಿದ್ದಾರೆ.







