ರಾಮನಗರ : ಬಿಡದಿಯ ನಿತ್ಯಾನಂದ ಸ್ವಾಮಿ ರಾಮನಗರ ನ್ಯಾಯಾಲಯದ ವಿಚಾರಣೆಗೆ ಪ್ರತಿ ಬಾರಿ ಗೈರಾಗುತ್ತಿರುವ ಹಿನ್ನೆಲೆಯಲ್ಲಿ ಆತನಿಗೆ ಸೇರಿದ ಆಸ್ತಿಗಳನ್ನು ಪರಿಶೀಲನೆ ಮಾಡಿ ಮುಟ್ಟಗೋಲು ಹಾಕಿಕೊಳ್ಳಲು ಸಿಐಡಿ ಅಧಿಕಾರಿಗಳಿಗೆ ರಾಮನಗರ ನ್ಯಾಯಾಲಯ ಸೂಚನೆ ನೀಡಿದೆ. ಇಂದು ನಿತ್ಯಾನಂದನ ರಾಸಲೀಲೆ ಪ್ರಕರಣದ ವಿಚಾರಣೆಗೆ ಒಂದನೇ ಆರೋಪಿ ನಿತ್ಯಾನಂದ, ಎರಡನೇ ಆರೋಪಿ ಗೋಪಾಲ ಶೀಲಂ ರೆಡ್ಡಿ ಇಬ್ಬರು ಸೇರಿದಂತೆ ಎಲ್ಲಾ ಆರೋಪಿಗಳು ಗೈರಾಗಿದ್ದರು. ದೂರುದಾರ ಲೆನಿನ್ ನ್ಯಾಯಾಲಯದಲ್ಲಿ ಹಾಜರಿದ್ದರು. ನ್ಯಾಯಾಲಯಕ್ಕೆ ಆರೋಪಿಗಳು ಗೈರಾದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಇದೇ ತಿಂಗಳ 23 ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ. ಇನ್ನು ಅಧಿಕಾರಿಗಳು ಆಸ್ತಿಗಳನ್ನು ಪರಿಶೀಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ನಂತರ ಕೋರ್ಟ್, ಜಿಲ್ಲಾಧಿಕಾರಿಗಳಿಗೆ ನಿತ್ಯಾನಂದನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ನೀಡಲಿದೆ.
ಗೃಹಲಕ್ಷ್ಮೀಯರ ಮನೆಬಾಗಿಲಿಗೆ ಬರಲಿದೆ ಮರುಪರಿಶೀಲನೆಯ ಬಿಸಿ ಬ್ಯಾಂಕ್ ಖಾತೆ ಮತ್ತು ಆಧಾರ್ ಜೋಡಣೆಯಲ್ಲಿ ಸಣ್ಣ ತಪ್ಪಾದರೂ ಎರಡು ಸಾವಿರಕ್ಕೆ ಬೀಳಲಿದೆ ಕತ್ತರಿ
ಬೆಂಗಳೂರು: ರಾಜ್ಯದ ಲಕ್ಷಾಂತರ ಮಹಿಳೆಯರ ಆರ್ಥಿಕ ಆಸರೆಯಾಗಿರುವ ಗೃಹಲಕ್ಷ್ಮಿ ಯೋಜನೆಗೆ ಈಗ ಹೊಸ ಕಟ್ಟುನಿಟ್ಟಿನ ನಿಯಮಗಳ ಕಾಲ ಎದುರಾಗಿದೆ. ಚುನಾವಣಾ ಅಖಾಡದಲ್ಲಿ ಹವಾ ಸೃಷ್ಟಿಸಿದ್ದ ಈ ಗ್ಯಾರಂಟಿ...








