ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಇನ್ನೇಏನು ಸಮೀಪದಲ್ಲೇ ಇದೆ. ಇದರ ನಡುವೆಯೇ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಪತ್ನಿ ಮಿಷೆಲ್ ಒಬಾಮಾ ಅವರು ಟ್ರಂಪ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಡೊನಾಲ್ಡ್ ಟ್ರಂಪ್ ನಮ್ಮ ದೇಶಕ್ಕೆ ಅಧ್ಯಕ್ಷರಾಗಿರುವುದು ದೊಡ್ಡ ಪ್ರಮಾದ ಎಂದು ಕಿಡಿಕಾರಿದ್ದಾರೆ. ಟ್ರಂಪ್ ಅವರಿಗೆ ಅನೇಕ ಕೆಲಸಗಳನ್ನು ಮಾಡಬಲ್ಲೆ ಎಂದು ತೋರಿಸಲು ಸಾಕಷ್ಟು ಸಮಯವಿತ್ತು. ಆದರೆ ಅವರು ನೀರಿಕ್ಷೆಗಳನ್ನ ತಲುಪುವಲ್ಲಿ ವಿಫಲರಾಗಿದ್ದಾರೆ ಎಂದು ಮಿಷೆಲ್ ಒಬಾಮಾ ಅವರು ಟೀಕಿಸಿದ್ದಾರೆ.
ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿರುವ ಅವರು ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಅವರಿಗೆ ಮತ ಹಾಕಿ ಎಂದು ಮನವಿ ಮಾಡಿಕೊಮಡಿದ್ದಾರೆ. ಅಲ್ಲದೇ ಟ್ರಂಪ್ ಅವರ ವಿಭಜನೆಯ ರಾಜಕೀಯವನ್ನು ತಿರಸ್ಕರಿಸುವಂತೆ ಮತದಾರರಿಗೆ ಕರೆ ಕೊಟ್ಟಿದ್ದಾರೆ.









