ಕೊರೊನಾ ಹಾವಳಿಗೆ ಕಡಿವಾಣ ಹಾಕಲು ಕೇರಳ ಸರ್ಕಾರ ಮತ್ತೊಂದು ಮಹತ್ವದ ತೀರ್ಮಾನ ಕೈಗೊಂಡಿದೆ. ಹೇಳಿ ಕೇಳಿ ಕೇರಳ ಅಂದ್ರೇನೆ ಮೀನಿಗೆ ಫೇಮಸ್ ಆದ್ರೆ ಇನ್ಮುಂದೆ ರಾಜ್ಯದಲ್ಲಿ ರಸ್ತೆ ಬದಿ ಮೀನು ಮಾರಾಟ ಮಾಡುವಂತಿಲ್ಲ ಎಂದು ಕೇರಳ ಸರರ್ಕಾರ ಆದೇಶ ಹೊರೆಡಿಸುವ ಮೂಲಕ ಮೀನು ಬೀದಿ ಬದಿ ಮೀನು ವ್ಯಾಪಾರಿಗಳಿಗೆ ಬಿಗ್ ಸಾಕ್ ಕೊಟ್ಟಿದೆ.
ಮೀನುಗಾರಿಕಾ ಸಚಿವರಾದ ಜೆ.ಮರ್ಸಿಕುಟ್ಟಿ ಅಮ್ಮಾ ಅವರು ಈ ಸೂಚನೆ ನೀಡಿದ್ದು, ರಸ್ತೆ ಬದಿ ಅಲ್ಲಲ್ಲಿ ಕುಳಿತು ಮೀನು ಮಾರಾಟ ಮಾಡುತ್ತಿರುವವರು ಈಗಲೇ ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ. ಇದನ್ನು ಮೀರಿಯೂ ಎಲ್ಲಾದರೂ ಈ ಮೀನು ಮಾರುಕಟ್ಟೆಗಳು ಕಾರ್ಯ ನಿರ್ವಹಿಸುತ್ತಿದ್ದರೆ ಸ್ಥಳೀಯ ಆಡಳಿತಗಳು ಅದನ್ನು ನಮ್ಮ ಗಮನಕ್ಕೆ ತಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.









