ಇತ್ತೀಚೆಗಷ್ಟೇ ಮತ್ತೊಮ್ಮೆ ತಂದೆಯಾಗುತ್ತಿರುವ ಸಂಭ್ರಮವನ್ನು ಹಂಚಿಕೊಂಡು ತಮ್ಮ 50ನೇ ವರ್ಷದ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದ ಸೈಫ್ ಅಲಿಖಾನ್ ಅವರು ಸದ್ಯ ಟ್ರೋಲಿಗರ ಪಾಲಿನ ಆಹಾರವಾಗಿಬಿಟ್ಟಿದ್ದಾರೆ. ನೆಟ್ಟಿಗರು ಸೈಫ್ ಅವರೇ ಹೇಳಿಕೊಂಡಿದ್ದ ಮಾತನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಹೌದು ಇತ್ತೀಚೆಗಷ್ಟೇ ಮತ್ತೆ ತಂದೆಯಾಗುತ್ತಿರುವ ಖುಷಿ ಹಂಚಿಕೊಂಡಿದ್ದ ಸೈಫ್ ಅಲಿಖಾನ್ ಅವರು ತಮ್ಮ ಜೀವನದ ಕಥೆಯನ್ನು ಪುಸ್ತಕದ ರೂಪದಲ್ಲಿ ಜಗತ್ತಿನ ಮುಂದಿqಡುವುದಾಗಿಯೂ ಹೇಳಿಕೊಂಡಿದ್ದರು. ಆದರೆ ಇದೇ ವಿಚಾರ ಇದೀಗ ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗಿಬಿಟ್ಟಿದೆ. ಸೈಫ್ ಅವರ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಸೈಫ್ ಅವರಿಗೆ ಶುಭ ಹಾರೈಸಿದ್ರೆ, ಇನ್ನೂ ಹಲವರು ವ್ಯಂಗ್ಯಭರಿತವಾಗಿ ಸೈಫ್ ಅವರ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. 
ಓರ್ವ ನೆಟ್ಟಿಗ ಈ ವಿಚಾರವಾಗಿ ಕಮೆಂಟ್ ಮಾಡಿದ್ದು, ” ‘ಏನು ಲೆಜೆಂಡರಿ ಕ್ರಿಕೆಟರ್ ಮನ್ಸೂರ್ ಅಲಿ ಖಾನ್ ಪಟೌಡಿ ಮತ್ತು ನಟಿ ಶರ್ಮಿಳಾ ಟ್ಯಾಗೂರ್ ಪುತ್ರ ಸೈಫ್ ಅಲಿಖಾನ್ ತನ್ನ ಸಿನಿಮಾ ಜೀವನದ ಏರಿಳಿತ ಮತ್ತು ಸ್ಟ್ರಗಲ್ ಬಗ್ಗೆ ಬಯೋಗ್ರಫಿ ಬರೆಯಲಿದ್ದಾರೆಯೇ’ ಎಂದು ವ್ಯಂಗ್ಯವಾಡಿದ್ರೆ, ಮತ್ತೋರ್ವ ‘ಸಿನಿಮಾರಂಗದಲ್ಲಿ ಪ್ಲಾಪ್ಗಳನ್ನೇ ನೀಡುತ್ತ ಪದ್ಮಶ್ರೀ ಗಿಟ್ಟಿಸಿಕೊಂಡು, ಯಾವತ್ತೂ ಯಶಸ್ವಿಯಾಗದ ಸೂಪರ್ಸ್ಟಾರ್ ಹಣೆಪಟ್ಟಿ ಅಂಟಿಸಿಕೊಂಡಿರುವ ಬಗ್ಗೆ ಬಯೋಗ್ರಫಿಯಲ್ಲಿ ನಮೂದಿಸಿ’ ಎಂದು ಕಾಲೆಳೆದಿದ್ದಾರೆ. ಇನ್ನೂ ‘ಸಾಲು ಸಾಲು ಪ್ಲಾಪ್ ಸಿನಿಮಾಗಳನ್ನು ನೀಡಿದ ಬಳಿಕವೂ, ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಹೇಗೆ ಪಡೆದುಕೊಂಡಿದ್ದೀರಿ? ದಯಮಾಡಿ ಆ ಪ್ರಶ್ನೆಗೂ ಬಯೋಗ್ರಫಿಯಲ್ಲಿ ಉತ್ತರ ಬರೆಯಿರಿ’ ಎಂದು ಮತ್ತೋರ್ವ ನೆಟ್ಟಿಗ ಕಮೆಂಟ್ ಮಾಡಿದ್ದು, ಹೀಗೆ ಹಲವಾರು ಟ್ರೋಲ್ ಗಳಿಗೆ ಗುರಿಯಾಗಿದ್ದಾರೆ ಬಾಲಿವುಡ್ ನಟ ಸೈಫ್.








