ಬೆಂಗಳೂರು : ಎಂಎಲ್ ಸಿ ಹೆಚ್ ವಿಶ್ವನಾಥ್ ರ ಟಿಪ್ಪು ಸುಲ್ತಾನ್ ಈ ನೆಲದ ಮಗ ಎಂಬ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅವರ ಹೇಳಿಕೆ ಬಿಜೆಪಿಗರಿಗೆ ಮುಜುಗರ ಉಂಟು ಮಾಡಿದ್ದರೇ, ಕಾಂಗ್ರೆಸ್ ನಾಯಕರು ಇದನ್ನೇ ಬಾಣವಾಗಿ ಬಳಸಿಕೊಂಡು ಕೇಸರಿ ನಾಯಕರಿಗೆ ತಿವಿಯುತ್ತಿದ್ದಾರೆ.
ವಿಶ್ವನಾಥ್ ಹೇಳಿಕೆ ಬಗ್ಗೆ ಡಿ.ಕೆ ಸುರೇಶ್ ಪ್ರತಿಕ್ರಿಯಿ ನೀಡಿ, ಟಿಪ್ಪು ಸುಲ್ತಾನ್ ಈ ನೆಲದ ಮಗ ಎಂದು ಹೆಚ್ ವಿಶ್ವನಾಥ್ ಹೇಳಿರುವುದು ಸತ್ಯ. ಯಡಿಯೂರಪ್ಪ ಹೇಳಿದ್ದೂ ಸತ್ಯ. ಚುನಾವಣೆ ದೃಷ್ಟಿ ಇಟ್ಟುಕೊಂಡು ಇತಿಹಾಸ ಬದಲಾಯಿಸುವ ಕೆಲಸ ಬಿಜೆಪಿ ಮಾಡುತ್ತಿದೆ ಆರೋಪಿಸಿದ್ದಾರೆ.
![]()
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಎಲ್ ಸಿ ವಿಶ್ವನಾಥ್ ಹೇಳಿರೋ ಮಾತನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಹಿಂದೆ ಯಡಿಯೂರಪ್ಪ ಟಿಪ್ಪು ಜಯಂತಿ ಮಾಡಿದ್ದನ್ನೂ ಅಲ್ಲಗಳೆಯಲು ಆಗಲ್ಲ. ರಾಷ್ಟ್ರಪತಿಗಳು ಟಿಪ್ಪು ಹೊಗಳಿದ್ದನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ. ಇತಿಹಾಸ ತಿರುಚುವುದು, ಕುಮ್ಮಕ್ಕು ಕೊಡುವುದು, ಜನರ ಭಾವನೆ ಬೇರೆಡೆ ತೆಗೆದುಕೊಂಡು ಹೋಗುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ ಅವರು ಟಿಪ್ಪು ಸುಲ್ತಾನ್ ಕೂಡ ಈ ದೇಶಕ್ಕೆ ರಾಜ್ಯಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಆಚರಣೆಗಳೂ ಕೂಡ ಮುಂದುವರೆಯಬೇಕು ಎಂದು ಹೇಳಿದರು.









