ಪುಣೆ ಮೂಲದ ಯುವತಿಗೆ ಜೋಡಿಸಿದ ಯುವಕನ ಕೈಗಳು ಕ್ರಮೇಣ ಯುವತಿಯ ಮೂಲ ಕೈಗಳಂತೆ ಪರಿವರ್ತನೆ ಹೊಂದಿದ್ದು, ವೈದ್ಯ ಲೋಕಕ್ಕೆ ಅಚ್ಚರಿ ಮೂಡಿಸಿದೆ.
ಉಡುಪಿಯ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓದುತ್ತಿದ್ದ ಪುಣೆ ಮೂಲದ ಶ್ರೇಯಾ ಸಿದ್ದನಗೌಡರ್ ಎಂಬ ಯುವತಿ 2016ರಲ್ಲಿ ಪುಣೆಯಿಂದ ಮಣಿಪಾಲಕ್ಕೆ ಪಯಣಿಸುತ್ತಿರಬೇಕಾದರೆ ಅಪಘಾತ ನಡೆದು ತನ್ನೆರಡು ಕೈಗಳನ್ನು ಕಳೆದು ಕೊಂಡಳು. ಇದಾಗಿ ವರ್ಷದ ನಂತರ ಕೇರಳದ ಕೊಚ್ಚಿಯಲ್ಲಿರುವ ಅಮೃತಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಆಸ್ಪತ್ರೆಯಲ್ಲಿ ಈಕೆಗೆ ಸಚಿನ್ ಎಂಬ ಮೆದುಳು ನಿಷ್ಕ್ರಿಯ ಯುವಕನ ಕೈಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಜೋಡಿಸಲಾಗಿತ್ತು. ಪುರುಷನ ಕೈಗಳನ್ನು ಮಹಿಳೆಗೆ ಜೋಡಿಸಲಾದ ಈ ಪ್ರಕರಣ ಏಷ್ಯಾದಲ್ಲೇ ಪ್ರಪ್ರಥಮವಾಗಿದ್ದು, ಜೊಡಿಸಿದ್ದಾಗ ಯಾವುದೇ ಗಮನೀಯ ಬದಲಾವಣೆಗಳಿರಲಿಲ್ಲ. ಕ್ರಮೇಣ ಆಕೆಯ ಹೊಸ ಕೈಬೆರಳುಗಳು ನೀಳವಾಗಲು ಪ್ರಾರಂಭಿಸಿ, ನಿಧಾನವಾಗಿ ಮೊಣಕೈ ಚಿಕ್ಕದಾಗಿ ಇಡೀ ಕೈ ಹೆಣ್ಣಿನ ಕೈಯ ಆಕಾರ ಪಡೆದಿದೆ. ಅಷ್ಟೇ ಅಲ್ಲ ಮೈಬಣ್ಣವೂ ಬದಲಾಗಿದ್ದು, ಯುವಕನ ಕಪ್ಪು ಬಣ್ಣದ ಕೈಗಳು ಆಕೆಯ ಮೈಬಣ್ಣಕ್ಕೆ ಬದಲಾಗಿದೆ.
ಭಾರತಕ್ಕೆ FATFನಲ್ಲಿ ಐತಿಹಾಸಿಕ ಗೆಲುವು: IAS ಅಧಿಕಾರಿ ವಿವೇಕ್ ಅಗರ್ವಾಲ್ ಉಪಾಧ್ಯಕ್ಷರಾಗಿ ಆಯ್ಕೆ
ಭಾರತಕ್ಕೆ FATFನಲ್ಲಿ ಐತಿಹಾಸಿಕ ಗೆಲುವು: IAS ಅಧಿಕಾರಿ ವಿವೇಕ್ ಅಗರ್ವಾಲ್ ಉಪಾಧ್ಯಕ್ಷರಾಗಿ ಆಯ್ಕೆ ಭಾರತಕ್ಕೆ ಜಾಗತಿಕ ಹಣಕಾಸು ಮತ್ತು ಭದ್ರತಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಸಾಧನೆ ದೊರೆತಿದ್ದು,...








